ವಿದ್ಯಾರ್ಥಿ ಜೀವನದಲ್ಲಿ ಸಮರ್ಪಣಾ ಭಾವ ಬಂದಾಗ ದೇಶದ ಪ್ರಗತಿ ಸಾಧ್ಯ ಗುರುವೇದವ್ಯಾಸರ ಗುರುತ್ವ ನೆಲೆ ಸರ್ವವ್ಯಾಪ್ತಿಯಾದುದು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಗುರುಪೂರ್ಣಿಮೆಯ ಪ್ರಯುಕ್ತ ಮಾತನಾಡುತ್ತಾ ಶ್ರೀ ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ನುಡಿದರು. ಗುರುಪೂಜಾ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಅಚ್ಚುತ ನಾಯಕ್, ಸಂಚಾಲಕರಾದ ಶ್ರೀ ವಿನೋದ್ ಕುಮಾರ್ ರೈಯವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವುರವರು ನೆರವೇರಿಸಿದರು.


