ವಿದ್ಯಾಭಾರತಿ ಅಖಿಲ ಭಾರತ ಶಿಕ್ಷಣ ಸಂಸ್ಥಾನಂ, ನವದೆಹಲಿ ಮತ್ತು ತಪಸ್ವಿ ಜಗಜೀವನ್ ಜಿ ಮಹಾರಾಜ್ ಸರಸ್ವತಿ ವಿದ್ಯಾಮಂದಿರ ಬೊಕಾರೋ ಸ್ಟೀಲ್ ಸಿಟಿ, ಜಾರ್ಖಾಂಡ್ ಇದರ ಆಶ್ರಯದಲ್ಲಿ ನ. 18 ರಿಂದ ನ. 22 ರವರೆಗೆ ನಡೆದ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಸೌಮ್ಯಶ್ರೀ.ಎಂ ತ್ರಿವಿಧ ಜಿಗಿತ ಪ್ರಥಮ ಮತ್ತು 100 ಮೀ ಅಡೆತಡೆ ಓಟದಲ್ಲಿ ಪ್ರಥಮ ಸ್ಥಾನ ಪಡೆದು ಜನವರಿ 7 ರಿಂದ 12 ರವರೆಗೆ ಜಾರ್ಖಾಂಡ್‌ನ […]
ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅರ್ಪಿತಾ ಸಿ.ಪಿ ದ್ವಿತೀಯ ಸ್ಥಾನ ಪಡೆದಿದ್ದಾರೆ
ಗುಜರಾತಿನ ಸೂರತ್ ನಗರದಲ್ಲಿ All India Karate Fedaration ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪುತ್ತೂರಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್ ಶರ್ಮ ಬಿ.ಎಸ್. 12 ವರ್ಷದ ಕೆಳಗಿನ ಕಟಾ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದ್ದಾನೆ. ಮತ್ತು 20 ಕೆ.ಜಿ. ಒಳಗಿನ ವಿಭಾಗದ ಕುಮಿಟೆಯಲ್ಲಿ 2ನೇ ತರಗತಿ ವಿದ್ಯಾರ್ಥಿನಿ ಸಂಹಿತಾ ಶರ್ಮ ಬಿ.ಎಸ್. ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಪುತ್ತೂರಿನ ಷಿಹಾನ್ ಎಂ. ಸುರೇಶ್ ಇವರಲ್ಲಿ ಕರಾಟೆ ಕಲಿಯುತ್ತಿದ್ದಾರೆ.
ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇವರು ನಡೆಸಿದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಾಮ್‌ಪ್ರಸಾದ್ ದ್ವಿತೀಯ ಸ್ಥಾನ ಹಾಗೂ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಇವರು ನಡೆಸಿದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಶ್ರೀಮಲ್ಲೇಶ್ ಆಚಾರ್ಯ ಮತ್ತು ಶ್ರೀಮತಿ ಅನುರಾಧ ಇವರ ಪುತ್ರ.
ವಿವೇಕಾನಂದ ಕನ್ನಡ ಮಾಧ್ಯಮ ಹಿರಿಯ ವಿದ್ಯಾರ್ಥಿಗಳ ಸಭೆ ಹಿರಿಯ ವಿದ್ಯಾರ್ಥಿಗಳು ಶಾಲೆಯ ಆಸ್ತಿ, ಶಾಲೆಯ ಅಭಿವೃದ್ಧಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಬಹುಮುಖ್ಯ. ಕನ್ನಡ ಮಾಧ್ಯಮ ಶಾಲೆ ಎಂದು ಯಾವುದೇ ಕೀಳರಿಮೆ ಬೇಡ ಅಂತೆಯೇ ಬಾಲ್ಯದ ಶಾಲೆಯನ್ನು ಯಾರೂ ಮರೆಯಬಾರದು ಎಂದು ಎಂಡೋ ವಿರೋಧಿ ಹೋರಾಟಗಾರ ಡ.ಮೋಹನ್ ಕುಮಾರ್ ವೈ.ಎಸ್ ಹೇಳಿದರು. ಅವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನವೆಂಬರ್ 1 ರಂದು ನಡೆದ ಹಿರಿಯ ವಿದ್ಯಾರ್ಥಿಗಳ ಸಭೆಯಲ್ಲಿ ಅತಿಥಿಯಾಗಿ ಆಗಮಿಸಿ ಯುವಜನತೆ ಹಳ್ಳಿ ತೊರೆದು ಪಟ್ಟಣ ವಾಸಿಗಳಾಗುತ್ತಿರುವುದು […]
ಪುತ್ತೂರು ಚೆಸ್ ಅಕಾಡೆಮಿ ಆಯೋಜಿಸಿದ ಅಂತರ್ ತಾಲೂಕು ಮಟ್ಟದ ಚೆಸ್ ಸ್ಪರ್ಧೆ-2013 ಇದರಲ್ಲಿ ತೃತೀಯ ಸಮಗ್ರ ಪ್ರಶಸ್ತಿಯೊಂದಿಗೆ ಜೀನಿಯಸ್ ಟ್ರೋಫಿಯನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ಚಂದನ್ ಪಡೆದುಕೊಂಡಿದ್ದಾರೆ. ಇವರು ಶಶಿ ಸ್ಟುಡಿಯೋ ಮಾಲಕ ಶ್ರೀ ಶಶಿಧರ್ ಮತ್ತು ಶ್ರೀಮತಿ ಭಾರತಿ ಇವರ ಪುತ್ರ.
ಶಾರೀರಿಕ ಹಾಗೂ ಮಾನಸಿಕ ಸ್ವಾಸ್ಥ್ಯಕ್ಕೆ ಯೋಗ ಹಾಗೂ ಪ್ರಾಣಾಯಾಮ ಮಾರ್ಗಸೂಚಿ ಎಂದು ನಿವೃತ್ತ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಹಾಗೂ ಯೋಗ ಚಿಕಿತ್ಸಕ ಶ್ರೀ ಶಂಕರನಾರಾಯಣ ಶಾಸ್ತ್ರೀ ನುಡಿದರು. ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲಾ ಮಕ್ಕಳಿಗೆ ಯೋಗ ಒಂದು ಚಿಕಿತ್ಸೆ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕಾ ತರಗತಿ ನಡೆಸಿಕೊಟ್ಟರು.
ತಾಲೂಕು ಮಟ್ಟದ ಪ್ರಾಥಮಿಕ – ಪ್ರೌಢಶಾಲಾ ಕ್ರೀಡಾಕೂಟ- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪ್ರಶಸ್ತಿ ದಿನಾಂಕ 15-11-2013 ಮತ್ತು 16-11-2013 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಸಮಗ್ರ ಪ್ರಶಸ್ತಿ ಪಡೆದಿದೆ. ಇದರಲ್ಲಿ ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ (17ರ ವಯೋಮಿತಿ) ಗುರುಪ್ರಸಾದ್ ಎಸ್.ಎನ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಪ್ರೌಢಶಾಲಾ ಬಾಲಕಿಯರ […]
ದಿನಾಂಕ 05-11-2013 ಮತ್ತು 06-11-2013 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಸಮಗ್ರ ಪ್ರಶಸ್ತಿ ಪಡೆದಿದೆ. ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ (17ರ ವಯೋಮಿತಿ) ಗುರುಪ್ರಸಾದ್ ಎಸ್.ಎನ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಪ್ರೌಢಶಾಲಾ ಬಾಲಕಿಯರ (14 ರ ವಯೋಮಿತಿ) ವಿಭಾಗದಲ್ಲಿ ಅನುಷಾ.ಜಿ ವೈಯಕ್ತಿಕ ಚಾಂಪಿಯನ್ ಪಡೆದಿದ್ದಾರೆ.
2013-14 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ ವೆಂಕಪ್ಪ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಭಾರತಿ ಕೆ.ಎನ್ ಆಯ್ಕೆಯಾಗಿದ್ದಾರೆ.
ದಿನಾಂಕ ೩೦.೧೦.೧೩ ರಂದು ವಿವೇಕಾನಂದ ತಾಂತ್ರಿಕ ಮಹಾವಿದ್ಯಾಲಯದ ಅಧ್ಯಕ್ಷರಾದ ಶ್ರೀ ಬಲರಾಮ ಆಚಾರ್ಯ ಇವರ ಅಧ್ಯಕ್ಷತೆಯಲ್ಲಿ ಡಾ.ಎ.ಪಿ. ಭಟ್, ಶಂಕರ ಭಟ್ ಬದನಾಜೆ ಶ್ರೀ ಶಶಿಧರ್ ಜಿ.ಎಸ್ ಇವರೆಲ್ಲರ ಗೌರವ ಉಪಸ್ಥಿತಿಯಲ್ಲಿ ‘ಮೇಧಾ’ ಕಂಪ್ಯೂಟರ್ ಪ್ರಯೋಗಾಲಯಗಳ ಉದ್ಫಾಟನೆ ಜರುಗಿತು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯವರು, ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಅನಿಬೆಸೆಂಟ್ ಪಾರ್ಕ್ ದೊಡ್ಡ ಬಳ್ಳಾಪುರದಲ್ಲಿ ನಡೆದ 2012 –13 ಸ್ಕೌಟ್ಸ್ ವಿಭಾಗದ ರಾಷ್ಟ್ರಪತಿ ಪುರಸ್ಕಾರ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮಶಾಲೆಯ ವಿದ್ಯಾರ್ಥಿಯಾದ ಚರಣ್ ಬಿ. ಎಲ್ ತೇರ್ಗಡೆ ಹೊಂದಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾನೆ. ಈತ ಸವಣೂರು ಶ್ರೀ ಲಿಂಗಪ್ಪ ಗೌಡ ಮತ್ತು ಶ್ರೀಮತಿ ಬಿ.ಎಲ್ ಕಸ್ತೂರಿ ದಂಪತಿಯ ಪುತ್ರ. ಪ್ರಸ್ತುತ ಈತ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿ.ಯು.ಸಿ ವಿದ್ಯಾರ್ಥಿ. ಗೈಡ್ಸ್ ವಿಭಾಗದಲ್ಲಿ ಕು. ಅನುಷಾ ಕೆ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿರುತ್ತಾಳೆ. ಈಕೆ ಶ್ರೀ ಆನಂದ ಶರ್ಮ […]
ಶಾರದಾ ವಿದ್ಯಾನಿಕೇತನ ತಲಪಾಡಿ ಮಂಗಳೂರು ಇಲ್ಲಿ ನಡೆದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅಜೇಯ ಕೆ.ಎಚ್, ಅಂಕಿತಾ ವಿ.ಕೆ ಹಾಗೂ ಗಣಿತ ಪ್ರದರ್ಶನದಲ್ಲಿ ಪ್ರತೀಕ್ಷಾ.ಹೆಚ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇವರಲ್ಲಿ ಅಜಯ್ ಕೆ.ಎಚ್ ಪ್ರದರ್ಶಿಸಿದ ‘ಬೆಳಕಿನ ವಕ್ರೀಭವನ ಮತ್ತು ಪ್ರತಿಫಲನ‘ ಮಾದರಿ ರಾಜ್ಯಮಟ್ಟದಲ್ಲಿ ಹಾಗೂ ಮಧ್ಯಕ್ಷೇತ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದೆಹಲಿಯಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.
ಅಕ್ಟೋಬರ್ 18ರಿಂದ 21 ರವರೆಗೆ ಕನ್ಯಾಕುಮಾರಿಯಲ್ಲಿ ಜರುಗಿದ ಅಂತರಾಷ್ಟ್ರೀಯ ಶ್ರೇಯಾಂಕಿತರ (FIDE RATED) ಚೆಸ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ಚಂದನ್ ಎ ಇವರಿಗೆ 15ರ ವಯೋಮಿತಿಯ ವಿಭಾಗದಲ್ಲಿ ಪ್ರಶಸ್ತಿ ಲಭಿಸಿರುತ್ತದೆ. ಪುತ್ತೂರಿನ ‘ಜೀನಿಯಸ್ ಚೆಸ್ ಸ್ಕೂಲ್’ ನಲ್ಲಿ ಚೆಸ್ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ಶಶಿ ಸ್ಟುಡಿಯೋ ಮಾಲಿಕ ಶ್ರೀ ಶಶಿಧರ್ ಮತ್ತು ಶ್ರೀಮತಿ ಭಾರತಿ ಇವರ ಪುತ್ರ.
2012-13 ನೇ ಸಾಲಿನ ಎಸ್.ಎಸ್.ಎಲ್.ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನಿಗಳಾಗಿರುವ ಜಯಶ್ರೀ-593 ಅಂಕ, ಶ್ರೀವಿದ್ಯಾ- 593 ಅಂಕ, ಈಶ್ವರ್ ಸಂದೇಶ್ -593 ಅಂಕ ಇವರು ಕರ್ನಾಟಕ ಸರಕಾರ ಕನ್ನಡ ಅಭಿವೃದ್ಧಿ ಪ್ರಾಧಿಕಾರದವರು ನೀಡಿದ ನಗದು ರೂಪದ ಬಹುಮಾನ ಹಾಗೂ ಪ್ರಶಸ್ತಿ ಫಲಕಗಳನ್ನು ಪಡೆದಿರುತ್ತಾರೆ.
ದಿನಾಂಕ 27-10-2013 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಶಿಕ್ಷಕರಿಗೆ ಮಕ್ಕಳ ಕಲಿಕಾ ದೋಷ, ಕಲಿಕಾ ನ್ಯೂನತೆ ತಿಳಿಯುವ ಮತ್ತು ನಿವಾರಣೆ ದೃಷ್ಟಿಯಿಂದ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆಗಳ ಬಗ್ಗೆ ಐ.ಇ.ಆರ್.ಟಿ ಪುತ್ತೂರು ಇಲ್ಲಿನ ಸಂಪನ್ಮೂಲ ವ್ಯಕ್ತಿಯಾಗಿರುವ ಶ್ರೀಮತಿ ಸಾವಿತ್ರಿ ಇವರು ಮಾಹಿತಿ ಕಾರ್ಯಾಗಾರ ನಡೆಸಿದರು.
ದಿನಾಂಕ 28-10-2013 ರಂದು ಶ್ರೀಕೃಷ್ಣ ಲೋಕ ಕಾರ್ಯಕ್ರಮದ ಪ್ರಯುಕ್ತ ನಮ್ಮ ಮಕ್ಕಳಿಂದ ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯ ಮಕ್ಕಳಿಂದ ನಡೆಸಿದ ನೃತ್ಯ ವೈವಿಧ್ಯ ಕಾರ್ಯಕ್ರಮಗಳು.
ಪುತ್ತೂರು:ಅಗೋಸ್ತು 15 :ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇಶ ಸೇವೆ ಮಾಡಲು ಸೈನಿಕನಾಗಬೇಕೆಂಬುದು ಸುಳ್ಳು, ದೇಶದ ಮೇಲೆ ಅಭಿಮಾನ ಹೊಂದಿರುವ ನಾವೆಲ್ಲರೂ ಸೈನಿಕರೇ ಆಗಿರುವುದರಿಂದ ದೇಶ ಕಾಯುವ, ರಕ್ಷಿಸುವ ಕಾಯಕ ಮಾಡಬೇಕು ಎಂದು ನಿವೃತ್ತ ಸೈನಿಕರಾದ ಶ್ರೀ ರಮಾನಾಥ ರೈ ವಿಟ್ಲ ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಎಂ ಕೃಷ್ಣ ಭಟ್, ಸಂಚಾಲಕ ಶ್ರೀ ರವೀಂದ್ರ.ಪಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಂದ ನಡೆಸಲ್ಪಡುವ ಮನೆಂಯಂಗಳದಲ್ಲಿ ಭಜನಾ ಕಾರ್‍ಯಕ್ರದ ಅಂಗವಾಗಿ ತೆಂಕಿಲದ ಕಟ್ಟತ್ತಾರು ಶ್ರೀ ನಾಗರಾಜ.ಟಿ ಎಂಬವರ ಮನೆಯಲ್ಲಿ ಶ್ರೀ ಶಾರದಾ ಪೂಜೆ ಹಾಗೂ ಭಜನಾ ಕಾರ್‍ಯಕ್ರಮ ನಡೆಯಿತು. ಡಾ. ಶೋಭಿತಾ ಸತೀಶ್ ಇವರ ಶ್ರೀ ಶಾರದಾ ಸ್ತುತಿಯೊಂದಿಗೆ ಆರಂಭಗೊಂಡ ಮಕ್ಕಳ ಭಜನೆಯಲ್ಲಿ ಶಾಲಾ ಶಿಕ್ಷಕರು ಹಾಗೂ ಪೋಷಕರು ಭಾಗವಹಿಸಿದ್ದರು.
1993-94 ರಲ್ಲಿ ಆರಂಭಗೊಂಡ ನಮ್ಮ ಶಾಲೆಯು ತನ್ನ ದ್ವಿಂಶತಿ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮೈಗೊಡಿಸಿಕೊಂಡು ತೆರಳಿರುವ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಪ್ರಸ್ತುತ ಶೈಕ್ಷಣಿಕ ವರ್ಷದ ಹಿರಿಯ ವಿದ್ಯಾರ್ಥಿ ಸಭೆಯನ್ನು ನವೆಂಬರ್ 1ನೇ ತಾರೀಕು ಶುಕ್ರವಾರದಂದು ನಡೆಸಲಾಗುವುದು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಮಾಜದ ಹತ್ತು ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುತ್ತೀರಿ, ನಿಮ್ಮೊಂದಿಗೆ ಬೆರೆತು, ಕಲಿತ ನಿಮ್ಮ ಸ್ನೇಹಿತರು ಹಾಗೂ ಶಿಕ್ಷಕರೊಂದಿಗೆ ಬೆರೆಯಲು ಈ ಸಂದರ್ಭದಲ್ಲಿ […]
‘ಆಹಾರ, ಮನಸ್ಸು, ದೇಹ ಇವುಗಳ ಪರಸ್ಪರ ಸಂಬಂಧ ಹಾಗೂ ಆರೋಗ್ಯಯುತ ಬೆಳವಣೆಗೆಯು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಷಮುಕ್ತ ಆಹಾರವನ್ನು ಸೇವಿಸಬೇಕಾದ ಬೌದ್ಧಿಕ ಎಚ್ಚರಿಕೆಯನ್ನು ನಾವಿಂದು ಬೆಳೆಸಿಕೊಳ್ಳಬೇಕಾಗಿದೆ’ ಎಂದು ಪುತ್ತೂರಿನ ಆಯುರ್ವೇದ ಮತ್ತು ಯೋಗ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ | ಮನೋಜ್ ಇವರು ಹೇಳಿದರು ಇವರು ಶಾಲಾ ಮಕ್ಕಳೊಂದಿಗೆ ಆಹಾರ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಂವಾದ ನಡೆಸಿದರು.
ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ಮೈಸೂರಿನ ಕೆ.ಆರ್ ನಗರದಲ್ಲಿ ನಡೆದ ಪ್ರಾಂತೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಹಾಗೂ ವೀರಾಗ್ರಣಿ ಪ್ರಶಸ್ತಿ ಪಡೆದಿರುತ್ತಾರೆ. ಇವರಲ್ಲಿ ಕು|ವಾಣಿ ವೈಯಕ್ತಿಕ ಚಾಂಪಿಯನ್ ಗಳಿಸಿ ವಿಶಾಖ ಪಟ್ಟಣದಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ವಿದ್ಯಾಭಾರತಿ ಕರ್ನಾಟಕ ಇದರ ಆಶ್ರಯದಲ್ಲಿ ಮೈಸೂರಿನ ಕೆ.ಆರ್ ನಗರದಲ್ಲಿ ನಡೆದ ಪ್ರಾಂತೀಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ಹಾಗೂ ವೀರಾಗ್ರಣಿ ಪ್ರಶಸ್ತಿ ಪಡೆಯುವುದರ ಮೂಲಕ ರಂಜಿತ್, ಯತೀಶ್, ವೀಣಾ, ವಾಣಿ, ಆಯಿಷಾ, ಸವಿತಾ, ಸೌಮ್ಯ, ಸಂಧ್ಯಾ,ಪೂಜಾ ವಿಶಾಖ ಪಟ್ಟಣದಲ್ಲಿ ನಡೆಯುವ ದಕ್ಷಿಣ ಕ್ಷೇತ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಯಾದ ಕು|ರಕ್ಷಿತ್.ಕೆ ಬಾಲವನ ಈಜುಕೊಳ ಪುತ್ತೂರು ಇಲ್ಲಿ ನಡೆದ ಹದಿನೇಳು ವರ್ಷದ ಮಯೋಮಿತಿಯ ಬಾಲಕರ 800ಮೀ ಪ್ರೀ ಸ್ಟೈಲ್ ಸ್ಪರ್ಧೆಯಲ್ಲಿ ದ್ವಿತೀಯ, 400 ಮೀ ವೈಯಕ್ತಿಕ ಮಿಡ್ಲೆಯಲ್ಲಿ ದ್ವಿತೀಯ, 400ಮೀ ಫ್ರೀಸ್ಟೈಲ್‌ನಲ್ಲಿ ತೃತೀಯ ಸ್ಥಾನ ಪಡೆದು ರಾಜ್ಯಮಟ್ಟದ ಈಜುಸ್ಪರ್ಧೆಗೆ ಆಯ್ಕೆಯಾಗಿದ್ದಾನೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಂಗಳೂರು ಉಪನಿರ್ದೇಶಕರ ಕಚೇರಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕೊಂಬೆಟ್ಟು ಪದವಿ ಪೂರ್ವ ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಸಹಯೋಗದಲ್ಲಿ ಕೊಂಬೆಟ್ಟು ಪದವಿ ಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ನಡೆದ 2013-14ನೇ ಸಾಲಿನ ಜಿಲ್ಲಾಮಟ್ಟದ ಪ್ರೌಢಶಾಲಾ ವಿಭಾಗದ ಬಾಲಕಿಯರ ಖೋ-ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ದಿನಾಂಕ 05.09.2013ರಂದು ಹಾಸನದಲ್ಲಿ ನಡೆಯುವ ವಿಭಾಗ ಮಟ್ಟದ ಖೋ-ಖೋ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ಆಶ್ರಯದಲ್ಲಿ ತಿಂಗಳಾಡಿಯಲ್ಲಿ ನಡೆದ ಯೋಗಾಸನ ಸ್ಪರ್ಧೆಯಲ್ಲಿ ೧೭ರ ವಯೋಮಾನದ ಸ್ಪರ್ಧೆಯಲ್ಲಿ ಸುಮ ಪ್ರಥಮ, ಗ್ರೀಷ್ಮಾ ಪಂಚಮ ಹಾಗೂ ವಸುಧಾ ಪ್ರಥಮ, ಬಾಲಕರ ವಿಭಾಗದಲ್ಲಿ ಪೃಥ್ವಿನಾರಾಯಣ ಭಟ್ ಎಂ.ಜಿ ಪ್ರಥಮ ಸ್ಥಾನ ಪಡೆದು ದಿನಾಂಕ 12.09.2013ರಂದು ಸುಬ್ರಮಣ್ಯದಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಯೋಗಾಸ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ವಾಲಿಬಾಲ್ ಅಸೋಸಿಯೇಶನ್ ಪುತ್ತೂರು ಮತ್ತು ವಿದ್ಯಾರಶ್ಮಿ ಪ್ರೌಢಶಾಲೆ ಸವಣೂರು ಇವರ ವತಿಯಿಂದ ನಡೆದ ಬಾಲಕಿಯರ ವಾಲಿಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕ ಶ್ರೀ ದಾಮೋದರ್ ತರಬೇತಿ ನೀಡಿರುತ್ತಾರೆ.
ರಾಮಕುಂಜ ಪ್ರೌಢಶಾಲೆ ಹಾಗೂ ವಿದ್ಯಾಭಾರತಿ ಕರ್ನಾಟಕ ಇವರ ಜಂಟಿ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಅಂತರ್ ಶಾಲಾ ಅತ್ಲೆಟಿಕ್ಸ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಹುಡುಗಿಯರು, ಕಿಶೋರವರ್ಗದ ಹುಡುಗರು, ಹುಡುಗಿಯರು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಸುಮಾರು 25 ವಿದ್ಯಾರ್ಥಿಗಳು ರಾಜ್ಯಮಟ್ಟದ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.
ಪುತ್ತೂರು: ಜುಲೈ 13. ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶೈಕ್ಷಣಿಕ ಸಹಮಿಲನ 2013-14 ಒಂದು ದಿನದ ಕಾರ್ಯಾಗಾರ ‘ಯಾದವಶ್ರೀ ಸಭಾಂಗಣ’ ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ನಡೆಯಿತು. ಶ್ರೀ ಶಶಿಧರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪುತ್ತೂರು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಆಧ್ಯಾತ್ಮ ಹಾಗೂ ಆದರ್ಶ ತತ್ವಗಳಿಂದ ಪ್ರೇರಿತವಾದ ಶಿಕ್ಷಣವು ವಿದ್ಯಾಭಾರತಿ ಸಂಸ್ಥೆಗಳಿಂದ ದೊರೆಯುತ್ತಿರುವುದು ಶ್ಲಾಘನೀಯ ಎಂದರು. ಆದರ್ಶಗಳು ವಿಚಾರಗಳು ಎಂದೂ ಸಾಯುವುದಿಲ್ಲ ಕನಸು ಕಾಣಬೇಕು. ಕನಸು ಕಂಡಾಗ ವಿಚಾರಗಳು ಬರುತ್ತವೆ. ವಿಚಾರಗಳು ತಿಳಿದಾಗ ವ್ಯವಹಾರಗಳು ಉತ್ತಮವಾಗುತ್ತವೆ. […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 27-07-2013ರಂದು ವಿವೇಕಾನಂದ ಪದವಿ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾ. ಶ್ರೀಶ ಕುಮಾರ್‌ರವರು ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ ಮಾತನಾಡಿ ಅದರ ಒಳಿತು ಕೆಡುಕುಗಳನ್ನು ಕೆಲವೊಂದು ಸಾಕ್ಷ್ಯ ಚಿತ್ರಗಳನ್ನು ತೋರಿಸುವ ಮೂಲಕ ಪರಿಚಯ ಮಾಡಿದರು. ಪರಿಸರ ಪ್ರೇಮಿಗಳಾದ ಸಮಾಜ ಬಾಂಧವರು ಈ ಯೋಜನೆಯು ಜಾರಿಗೊಳ್ಳದಂತೆ ಜಾಗೃತರಾಗಬೇಕೆಂದು ಕರೆ ಇತ್ತರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು, ಮುಖ್ಯ ಗುರುಗಳು ಉಪಸ್ಥಿತರಿದ್ದರು. ಶಿಕ್ಷಕಿ ಶ್ರೀಮತಿ ಸ್ವಾತಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.
ದಿನಾಂಕ 20-07-2013ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ನಡೆಯುವ ಸಾಂಸ್ಕೃತಿಕ ಚಟುವಟಿಕೆಗಳ ಅಂಗವಾಗಿ ಹಿರಿಯ ಶಿಶು ಸಾಹಿತಿ ಶ್ರೀ ಬೆಂಡರವಾಡಿ ಸುಬ್ರಹ್ಮಣ್ಯ ಭಟ್‌ರವರು ಪುಟಾಣಿ ಮಕ್ಕಳಿಗೆ ಕಥೆ, ಹಾಡುಗಳನ್ನು ಹೇಳುವುದರ ಮೂಲಕ ಕುಣಿದು ಕುಪ್ಪಳಿಸುವಂತೆ ಮಾಡಿದರು. ಈ ಸಂದರ್ಭದಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ದುರ್ಗಾದೇವಿಯವರು ಉಪಸ್ಥಿತರಿದ್ದರು.
ದಿನಾಂಕ 27-07-2013ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಕಾರ್ಗಿಲ್ ವಿಜಯೋತ್ಸವ ದಿನಾಚರಣೆಯ ಕುರಿತು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀ ರೋಹಿಣಾಕ್ಷ ಶೀರ್ಲಾಲುರವರು, ಈ ದಿನಾಚರಣೆಯ ಮಹತ್ವ, ದೇಶಕ್ಕಾಗಿ ಹೋರಾಡಿದ ವೀರ ಯೋಧರ ತ್ಯಾಗ ಬಲಿದಾನಗಳ ಕುರಿತು ಹೃದಯಸ್ಪರ್ಶಿ ಮಾತುಗಳನ್ನಾಡುತ್ತಾ ನಮ್ಮ ಯುವಕರಿಗೆ ಸೇನೆಗೆ ಸೇರಲಿರುವ ಅವಕಾಶಗಳ ಕುರಿತು ಮಾಹಿತಿಯನ್ನು ನೀಡಿದರು. ಶಾಲಾ ಮುಖ್ಯಗುರುಗಳು, ಶಿಕ್ಷಕರು ಉಪಸ್ಥಿತರಿದ್ದರು.
ದಿನಾಂಕ 24-07-2013ರಂದು ವಿದ್ಯಾಭಾರತಿ ಕರ್ನಾಟಕ ಮತ್ತು ಶುಭೋದಯ ಪ್ರೌಢಶಾಲೆ ಮೂಡುಶೆಡ್ಡೆಯಲ್ಲಿ ನಡೆದ 17 ವರುಷದ ಕಿಶೋರವರ್ಗದ ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಇವರಲ್ಲಿ ಸುಮಾ ರಾಜ್ಯಮಟ್ಟದಿಂದ ದಕ್ಷಿಣಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಕಿಶೋರವರ್ಗದ ಬಾಲಕರ ವಿಭಾಗದಲ್ಲಿ ಪೃಥ್ವಿನಾರಾಯಣ ಮತ್ತು ರಾಕೇಶ್ ರಾಜ್ಯಮಟ್ಟದಿಂದ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿ ಆಗಸ್ಟ್ 10,11 ಕ್ಕೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆಯುವ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ದಿನಾಂಕ 26.07.2013ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ‘ಕಾರ್ಗಿಲ್ ವಿಜಯೋತ್ಸವ ಆಚರಣೆ’ ನಡೆಯಿತು.ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಗಿಲ್‌ನ ಯುದ್ಧದ ಬಗೆಗೆಗಿನ ಮಹತ್ವವನ್ನು ಮತ್ತು ದೇಶ ಭಕ್ತರನ್ನು ನೆನಪಿಸುವ ಸ್ವಾರಸ್ಯಕರ ವಿಷಯಗಳನ್ನು ಮಕ್ಕಳಿಗೆ ಮನಮುಟ್ಟುವಂತೆ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕರಾದ ಶ್ರೀ ರಾಜೇಶ್ ನೆಲ್ಲಿತ್ತಡ್ಕ ಇವರು ತಿಳಿಸಿದರು. ನಂತರ ವಿದ್ಯಾರ್ಥಿಗಳಿಗೆ ಕಾರ್ಗಿಲ್ ವಿಜಯೋತ್ಸವದ ಸಾಕ್ಷ್ಯ ಚಿತ್ರಗಳನ್ನು ತೋರಿಸಲಾಯಿತು. ಈ ಕಾರ್ಯಕ್ರಮದ ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ ಹಾಗೂ ವಂದನಾರ್ಪಣೆಯನ್ನು ಶ್ರೀ ರಾಜೇಶ್ ಪಿ.ಬಿ ರವರು […]
ವಿದ್ಯಾಭಾರತಿ ಕರ್ನಾಟಕ ಹಾಗೂ ಶಾರದಾ ವಿದ್ಯಾನಿಕೇತನ ತಲಪಾಡಿ, ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ದಿನಾಂಕ 22.0.2013 ರಂದು ಶಾರದಾ ವಿದ್ಯಾನಿಕೇತನ ತಲಪಾಡಿ ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ 14ರ ವಯೋಮಾನದ ಬಾಲಕಿಯರ ಕಿಶೋರವರ್ಗದ ಖೋ-ಖೋದಲ್ಲಿ ಮತ್ತು ಬಾಲವರ್ಗದ ಖೋ-ಖೋದಲ್ಲಿ , ಹಾಗೂ ವಿದ್ಯಾಭಾರತಿ ಕರ್ನಾಟಕ ಹಾಗೂ ಷಣ್ಮುಖ ದೇವ ಪ್ರೌಢಶಾಲೆ ಪೆರ್ಲಂಪಾಡಿ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 18.07.2013 ರಂದು ಷಣ್ಮುಖ ದೇವ ಪ್ರೌಢ ಶಾಲೆ, ಪೆರ್ಲಂಪಾಡಿ ಇಲ್ಲಿ ನಡೆದ ಜಿಲ್ಲಾಮಟ್ಟದ 17ರ ವಯೋಮಾನದ ಬಾಲಕಿಯರ ಕಿಶೋರವರ್ಗದ […]
ಸಮಾಜಮುಖಿ ಕಾರ್ಯ ಹಾಗೂ ಗುರುತ್ವದ ಔಚಿತ್ಯ ಸ್ಮರಿಸಿಕೊಂಡಾಗ ಪುತ್ತೂರಿನ ವಿ.ಬಿ ಅರ್ತಿಕಜೆಯವರು ಕಣ್ಮುಂದೆ ಬರುತ್ತಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಪ್ರೇರಕ ಗುರುಗಳ ಸಾಲಿಗೆ ಬರುವ ಕೆಲವರಲ್ಲಿ ಒಬ್ಬರು. ಪ್ರಾಧ್ಯಾಪಕರಾಗಿ ವೃತ್ತಿಯಿಂದ ನಿವೃತ್ತಿ ಹೊಂದಿದರೂ, ಪ್ರವೃತ್ತಿಯಲ್ಲಿ ಮಕ್ಕಳೊಂದಿಗೆ ಮಾತು, ಶಿಕ್ಷಕರಿಗೆ ಕಿವಿಮಾತು, ಸಾಹಿತ್ಯ ಕಲಾ ಪೋಷಕರು ವಿಶೇಷವಾಗಿ ಮನೆಯಲ್ಲೇ ಗ್ರಂಥಾಲಯ ಹೊಂದಿದ್ದು ಗ್ರಂಥಾಲಯ ಮಾಡ ಬಯಸುವ ಮನೆ ಮನಗಳಿಗೆ ಸಹಕಾರ ಇನ್ನೂ ಅನೇಕ. ಗುರುಪೂರ್ಣಿಮೆಯಂದು ಶ್ರೀಯುತರನ್ನು ವಿವೇಕಾನಂದ ಕನ್ನಡ ಮಾಧ್ಯಮದ ಮಕ್ಕಳು ಹಾಗೂ ಶಿಕ್ಷಕ ವೃಂದ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇಲ್ಲಿ ದಿನಾಂಕ 06.07.2013 ರಂದು ‘ಹಿಂದೂ ಸಾಮ್ರಾಜೋತ್ಸವ’ದ ಆಚರಣೆ ಜರುಗಿತು. ಈ ಕಾರ್ಯಕ್ರಮದಲ್ಲಿ ಶಿವಾಜಿಯ ಬಾಲ್ಯ, ದೇಶಭಕ್ತಿ ಎಂಬ ವಿಷಯದಡಿ ವಿವೇಕಾನಂದ ಡಿ.ಇಡಿ ಕಾಲೇಜಿನ ಉಪನ್ಯಾಸಕರಾದ ಶ್ರೀ ರಘುರಾಜ ಯು.ವಿ ರವರು ಮಕ್ಕಳಿಗೆ ಮನದಟ್ಟಾಗುವಂತೆ ಕಥೆ ಹೇಳಿದರು. ಕಾರ್ಯಕ್ರಮದ ನಿರೂಪಣೆ, ಸ್ವಾಗತವನ್ನು ಶಿಕ್ಷಕರಾದ ಶ್ರೀ ಚಂದ್ರಶೇಖರ.ಬಿ ರವರು ನೆರವೇರಿಸಿದರು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಪುತ್ತೂರು ಇಲ್ಲಿ ದಿನಾಂಕ 08.06.2013 ರಂದು ಶಾಲಾ ಚುನಾವಣೆ ನಡೆಯಿತು. ಪ್ರೌಢಶಾಲಾ ನಾಯಕಿಯಾಗಿ ಕು| ಪ್ರಜ್ಞಾ.ಪಿ.ಆರ್ ಮತ್ತು ಉಪನಾಯಕನಾಗಿ ಪೃಥ್ವಿನಾರಾಯಣ ಇವರು ಬಹುಮತದಿಂದ ಆಯ್ಕೆಯಾದರು. ಪ್ರಾಥಮಿಕ ಶಾಲಾ ನಾಯಕನಾಗಿ ಭವಿಷಿತ್, ಉಪನಾಯಕಿಯಾಗಿ ಕು| ವಿಭಾ ಆಚಳ್ಳಿಯವರು ಆಯ್ಕೆಯಾದರು. ಚುನಾವಣೆಯ ಮುಖ್ಯಗುರುಗಳ ಮಾರ್ಗದರ್ಶನದಲ್ಲಿ ಎಲ್ಲಾ ಶಿಕ್ಷಕರ ಸಹಕಾರದೊಂದಿಗೆ ನಡೆಯಿತು.
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 08.06.2013 ರಂದು 2012-13ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೋ|ವಿ.ಬಿ. ಅರ್ತಿಕಜೆಯವರು ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು ಎಂದರು, ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಉಪಸ್ಥಿತರಿದ್ದು, ಸಾಧನೆಗೆ ಸದಾ ಪ್ರಯತ್ನಶೀಲರು ನಾವಾಗಬೇಕು, ನಮ್ಮಲ್ಲಿ ಕನಸು ಇರಬೇಕು, ಆಗ ಮಾತ್ರ ಕನಸನ್ನು ನನಸಾಗಿಸಲು ಸಾಧ್ಯ ಎಂಬುದಾಗಿ […]
ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 06.06.2013 ರಂದು ಶಾಲೆಗೆ ಹೊಸದಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳಿಗೆ ಪ್ರವೇಶೋತ್ಸವ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ಸರಕಾರಿ ಪದವಿ ಕಾಲೇಜು ಬಂಟ್ವಾಳ ಇಲ್ಲಿನ ಉಪನ್ಯಾಸಕರಾದ ಡಾ.ಅಜಕ್ಕಳ ಗಿರೀಶ್ ಭಟ್ ರವರು ದೀಪ ಪ್ರಜ್ವಲಿಸಿ ಘೃತಾಹುತಿ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಪೋಷಕರೊಂದಿಗೆ ‘ಪರಿಣಾಮಕಾರಿ ಪೋಷಕತ್ವ’ದ ಬಗ್ಗೆ ಸಂವಾದ ನಡೆಸಿದರು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲೆ ಮತ್ತು ನಮ್ಮ ಭಾರತೀಯ ಸಂಸ್ಕೃತಿಯ ಬಗ್ಗೆ […]
ಪ್ರಜ್ಞಾ ಎಜ್ಯುಕೇಶನ್ ಟ್ರಸ್ಟ್ (ರಿ.) ಸುಳ್ಯ ಇವರು ನಡೆಸಿದ ‘ಸದಾ ಸಿದ್ಧರಾಗಿರೋಣ ರಾಜ್ಯಮಟ್ಟದ ಸ್ಪರ್ಧಾತ್ಮಕ ಪರೀಕ್ಷೆ’ – 2013 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸ್ವಾತಿಕ್ ಶರ್ಮ ಬಿ.ಎಸ್ 5ನೇ ತರಗತಿಯಲ್ಲಿ ‘ಪ್ರಜ್ಞಾ ತಾಲೂಕು ಸಾಧಕ’ ಪ್ರಶಸ್ತಿಯೊಂದಿಗೆ ರೂ 2,000 ನಗದು, ಪ್ರಶಸ್ತಿ ಪತ್ರ ಹಾಗೂ ಪದಕವನ್ನು ಪಡೆದಿರುತ್ತಾನೆ. ಈತನಿಗೆ ಅಭಿನಂದನೆಗಳು.
2012-13ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 98 ವಿದ್ಯಾರ್ಥಿಗಳಲ್ಲಿ 91 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶೇಕಡಾ 93 ಫಲಿತಾಂಶ ಬಂದಿರುತ್ತದೆ. ಇದರಲ್ಲಿ 12 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 51 ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, 16 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, ಮತ್ತು 12 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಜಯಶ್ರೀ.ಪಿ – 593 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದು ಪುತ್ತೂರು ತಾಲೂಕಿಗೆ ದ್ವಿತೀಯ ಸ್ಥಾನಿಯಾಗಿರುತ್ತಾಳೆ. ಶ್ರೀವಿದ್ಯಾ ಕೆ.ಎಂ – 591 ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದು ಪುತ್ತೂರು […]