ವಿವೇಕಾನಂದ ವಿದ್ಯಾಸಂಸ್ಥೆಯಲ್ಲಿ ಸ್ವಾತಂತ್ರ್ಯೋತ್ಸವ

ಪುತ್ತೂರು:ಅಗೋಸ್ತು 15 :ವಿವೇಕಾನಂದ ವಿದ್ಯಾಸಂಸ್ಥೆ, ತೆಂಕಿಲದಲ್ಲಿ ಸ್ವಾತಂತ್ರ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ದೇಶ ಸೇವೆ ಮಾಡಲು ಸೈನಿಕನಾಗಬೇಕೆಂಬುದು ಸುಳ್ಳು, ದೇಶದ ಮೇಲೆ ಅಭಿಮಾನ ಹೊಂದಿರುವ ನಾವೆಲ್ಲರೂ ಸೈನಿಕರೇ ಆಗಿರುವುದರಿಂದ ದೇಶ ಕಾಯುವ, ರಕ್ಷಿಸುವ ಕಾಯಕ ಮಾಡಬೇಕು ಎಂದು ನಿವೃತ್ತ ಸೈನಿಕರಾದ ಶ್ರೀ ರಮಾನಾಥ ರೈ ವಿಟ್ಲ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ಡಾ. ಕೆ.ಎಂ ಕೃಷ್ಣ ಭಟ್, ಸಂಚಾಲಕ ಶ್ರೀ ರವೀಂದ್ರ.ಪಿ, ಆಡಳಿತ ಮಂಡಳಿ ಸದಸ್ಯರಾದ ಶ್ರೀಮತಿ ಶೋಭಾ ಕೊಳತ್ತಾಯ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮುಖ್ಯಗುರುಗಳಾದ ಶ್ರೀ ಸತೀಶ್ ಕುಮಾರ್ ರೈ, ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ಇವರು ಉಪಸ್ಥಿತರಿದ್ದರು.

ಸಮಾರಂಭದಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗಳ ಶಿಕ್ಷಕರು, ಶಿಕ್ಷಕೇತರರು ಹಾಗೂ ವಿದ್ಯಾರ್ಥಿಗಳು, ವಿವೇಕಾನಂದ ಬಿ.ಎಡ್ ಹಾಗೂ ಡಿ.ಎಡ್ ಕಾಲೇಜು ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಎಲ್ಲಾ ವಿದ್ಯಾರ್ಥಿ ಶಿಕ್ಷಕರು ಭಾಗವಹಿಸಿದ್ದರು.

Highslide for Wordpress Plugin