ಹಿರಿಯ ವಿದ್ಯಾರ್ಥಿ ಸಭೆ

1993-94 ರಲ್ಲಿ ಆರಂಭಗೊಂಡ ನಮ್ಮ ಶಾಲೆಯು ತನ್ನ ದ್ವಿಂಶತಿ ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ ಶಾಲಾ ಶೈಕ್ಷಣಿಕ, ಸಾಂಸ್ಕೃತಿಕ, ಸಾಹಿತ್ಯಿಕ, ಕ್ರೀಡಾ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಮೈಗೊಡಿಸಿಕೊಂಡು ತೆರಳಿರುವ ಶಾಲಾ ಹಿರಿಯ ವಿದ್ಯಾರ್ಥಿಗಳಿಗೆ ಶುಭ ಹಾರೈಕೆಗಳು. ಪ್ರಸ್ತುತ ಶೈಕ್ಷಣಿಕ ವರ್ಷದ ಹಿರಿಯ ವಿದ್ಯಾರ್ಥಿ ಸಭೆಯನ್ನು ನವೆಂಬರ್ 1ನೇ ತಾರೀಕು ಶುಕ್ರವಾರದಂದು ನಡೆಸಲಾಗುವುದು. ಶಾಲೆಯ ಹಿರಿಯ ವಿದ್ಯಾರ್ಥಿಗಳು ಸಮಾಜದ ಹತ್ತು  ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುತ್ತೀರಿ, ನಿಮ್ಮೊಂದಿಗೆ ಬೆರೆತು, ಕಲಿತ ನಿಮ್ಮ ಸ್ನೇಹಿತರು ಹಾಗೂ ಶಿಕ್ಷಕರೊಂದಿಗೆ ಬೆರೆಯಲು ಈ ಸಂದರ್ಭದಲ್ಲಿ ಪ್ರೀತಿಯಿಟ್ಟು ಬನ್ನಿ , ನಿಮ್ಮೊಂದಿಗೆ ಈ ಶಾಲೆಯಲ್ಲಿ ಕಲಿತ ನಿಮ್ಮ ಸ್ನೇಹಿತರನ್ನು ಕರೆತನ್ನಿ.

ದಿನಾಂಕ 01-11-2013. ಸಮಯ ಬೆ: 10.30ಕ್ಕೆ
ಸ್ಥಳ : ಶಾಲಾ ಸಭಾಂಗಣ

ಗೌರವ ಉಪಸ್ಥಿತಿ:     ಡಾ| ಮೋಹನ್ ಕುಮಾರ್, ವೈದ್ಯಾಧಿಕಾರಿ
ಸ್ವರ್ಗ, ಕಾಸರಗೋಡು

ಅಧ್ಯಕ್ಷರು, ಸಂಚಾಲಕರು
ಆಡಳಿತ ಮಂಡಳಿಯ ಸರ್ವ ಸದಸ್ಯರು

 ಮುಖ್ಯೋಪಾಧ್ಯಾಯರು
ಶಿಕ್ಷಕರು, ಶಿಕ್ಷಕೇತರ ವೃಂದ ಹಾಗೂ ವಿದ್ಯಾರ್ಥಿಗಳು

Vivekananda Kannada Medium_2x7

Highslide for Wordpress Plugin