ಅಭಿನಂದನಾ ಕಾರ್ಯಕ್ರಮ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇಲ್ಲಿ ದಿನಾಂಕ 08.06.2013 ರಂದು 2012-13ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ನಡೆಯಿತು.

IMG_1931

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರೋ|ವಿ.ಬಿ. ಅರ್ತಿಕಜೆಯವರು ಮಾತನಾಡಿ, ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರಬೇಕು ಎಂದರು, ಕಾರ್ಯಕ್ರಮದ ಅಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಉಪಸ್ಥಿತರಿದ್ದು, ಸಾಧನೆಗೆ ಸದಾ ಪ್ರಯತ್ನಶೀಲರು ನಾವಾಗಬೇಕು, ನಮ್ಮಲ್ಲಿ ಕನಸು ಇರಬೇಕು, ಆಗ ಮಾತ್ರ ಕನಸನ್ನು ನನಸಾಗಿಸಲು ಸಾಧ್ಯ ಎಂಬುದಾಗಿ ತಿಳಿಸಿ ವಿದ್ಯಾರ್ಥಿಗಳಿಗೆ ಮುಂದಿನ ಕಲಿಕೆಗೆ ಶುಭ ಹಾರೈಸಿದರು. ಪೋಷಕರ ಪರವಾಗಿ ಶ್ರೀ ಶ್ಯಾಮ್ ಪ್ರಸಾದ್ ಶಾಸ್ತ್ರೀಯವರು ಸಂದರ್ಭೋಚಿತವಾಗಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸ್ವಾಗತವನ್ನು ಶಿಕ್ಷಕಿಯಾದ ಶ್ರೀಮತಿ ರೇವತಿ, ಹಾಗೂ ಧನ್ಯವಾದವನ್ನು ಕು|ಲೀಲಾವತಿ ಹಂದ್ರಟ್ಟ, ನಿರೂಪಣೆಯನ್ನು ಶ್ರೀಮತಿ ಸುಚಿತ್ರಾ ರವರು ಮಾಡಿದರು.

Highslide for Wordpress Plugin