ಸಮಾಜಮುಖಿ ಕಾರ್ಯ ಹಾಗೂ ಗುರುತ್ವದ ಔಚಿತ್ಯ ಸ್ಮರಿಸಿಕೊಂಡಾಗ ಪುತ್ತೂರಿನ ವಿ.ಬಿ ಅರ್ತಿಕಜೆಯವರು ಕಣ್ಮುಂದೆ ಬರುತ್ತಾರೆ. ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಇವರು ಪ್ರೇರಕ ಗುರುಗಳ ಸಾಲಿಗೆ ಬರುವ ಕೆಲವರಲ್ಲಿ ಒಬ್ಬರು. ಪ್ರಾಧ್ಯಾಪಕರಾಗಿ ವೃತ್ತಿಯಿಂದ ನಿವೃತ್ತಿ ಹೊಂದಿದರೂ, ಪ್ರವೃತ್ತಿಯಲ್ಲಿ ಮಕ್ಕಳೊಂದಿಗೆ ಮಾತು, ಶಿಕ್ಷಕರಿಗೆ ಕಿವಿಮಾತು, ಸಾಹಿತ್ಯ ಕಲಾ ಪೋಷಕರು ವಿಶೇಷವಾಗಿ ಮನೆಯಲ್ಲೇ ಗ್ರಂಥಾಲಯ ಹೊಂದಿದ್ದು ಗ್ರಂಥಾಲಯ ಮಾಡ ಬಯಸುವ ಮನೆ ಮನಗಳಿಗೆ ಸಹಕಾರ ಇನ್ನೂ ಅನೇಕ.

ಗುರುಪೂರ್ಣಿಮೆಯಂದು ಶ್ರೀಯುತರನ್ನು ವಿವೇಕಾನಂದ ಕನ್ನಡ ಮಾಧ್ಯಮದ ಮಕ್ಕಳು ಹಾಗೂ ಶಿಕ್ಷಕ ವೃಂದ ಅವರ ಸ್ವಗೃಹಕ್ಕೆ ತೆರಳಿ ಗುರುವಂದನೆ ಮಾಡಿ ಅವರ ಮಾತುಗಳಿಗೆ ಕಿವಿಯಾಗಿದ್ದಾರೆ.
