ದಿನಾಂಕ 05-11-2013 ಮತ್ತು 06-11-2013 ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಗಳ ಆಶ್ರಯದಲ್ಲಿ ನಡೆದ ಪುತ್ತೂರು ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ತಂಡ ಸಮಗ್ರ ಪ್ರಶಸ್ತಿ ಪಡೆದಿದೆ.
ಪ್ರೌಢಶಾಲಾ ಬಾಲಕರ ವಿಭಾಗದಲ್ಲಿ (17ರ ವಯೋಮಿತಿ) ಗುರುಪ್ರಸಾದ್ ಎಸ್.ಎನ್ ಬಾಲಕಿಯರ ವಿಭಾಗದಲ್ಲಿ ಸೌಮ್ಯಶ್ರೀ ಮತ್ತು ಪ್ರೌಢಶಾಲಾ ಬಾಲಕಿಯರ (14 ರ ವಯೋಮಿತಿ) ವಿಭಾಗದಲ್ಲಿ ಅನುಷಾ.ಜಿ ವೈಯಕ್ತಿಕ ಚಾಂಪಿಯನ್ ಪಡೆದಿದ್ದಾರೆ.
