ದಿನಾಂಕ 24-07-2013ರಂದು ವಿದ್ಯಾಭಾರತಿ ಕರ್ನಾಟಕ ಮತ್ತು ಶುಭೋದಯ ಪ್ರೌಢಶಾಲೆ ಮೂಡುಶೆಡ್ಡೆಯಲ್ಲಿ ನಡೆದ 17 ವರುಷದ ಕಿಶೋರವರ್ಗದ ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿದ ವಿವೇಕಾನಂದ ಕನ್ನಡಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ಇವರಲ್ಲಿ ಸುಮಾ ರಾಜ್ಯಮಟ್ಟದಿಂದ ದಕ್ಷಿಣಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಕಿಶೋರವರ್ಗದ ಬಾಲಕರ ವಿಭಾಗದಲ್ಲಿ ಪೃಥ್ವಿನಾರಾಯಣ ಮತ್ತು ರಾಕೇಶ್ ರಾಜ್ಯಮಟ್ಟದಿಂದ ದಕ್ಷಿಣ ಕ್ಷೇತ್ರಿಯ ಮಟ್ಟಕ್ಕೆ ಆಯ್ಕೆಯಾಗಿ ಆಗಸ್ಟ್ 10,11 ಕ್ಕೆ ತಮಿಳುನಾಡಿನ ಕಾಂಚಿಪುರಂನಲ್ಲಿ ನಡೆಯುವ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
