‘ಆಹಾರ, ಮನಸ್ಸು, ದೇಹ ಇವುಗಳ ಪರಸ್ಪರ ಸಂಬಂಧ ಹಾಗೂ ಆರೋಗ್ಯಯುತ ಬೆಳವಣೆಗೆಯು ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ವಿಷಮುಕ್ತ ಆಹಾರವನ್ನು ಸೇವಿಸಬೇಕಾದ ಬೌದ್ಧಿಕ ಎಚ್ಚರಿಕೆಯನ್ನು ನಾವಿಂದು ಬೆಳೆಸಿಕೊಳ್ಳಬೇಕಾಗಿದೆ’ ಎಂದು ಪುತ್ತೂರಿನ ಆಯುರ್ವೇದ ಮತ್ತು ಯೋಗ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ | ಮನೋಜ್ ಇವರು ಹೇಳಿದರು ಇವರು ಶಾಲಾ ಮಕ್ಕಳೊಂದಿಗೆ ಆಹಾರ ಮತ್ತು ಆರೋಗ್ಯ ಎಂಬ ವಿಷಯದ ಕುರಿತು ಪ್ರಾತ್ಯಕ್ಷಿಕೆ ಹಾಗೂ ಸಂವಾದ ನಡೆಸಿದರು.