ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಸಮಗ್ರ ಪಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು, ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆ ಕೆಮ್ಮಿಂಜೆ ಇದರ ಸಹಯೋಗದಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ.

Lower-Primary

ಕಿರಿಯ ಪ್ರಾಥಮಿಕ ವಿಭಾಗ:

ಲಘು ಸಂಗೀತ -ಆಕಾಂಕ್ಷ ಪಾರ್ವತಿ (ಪ್ರಥಮ), ಚಿತ್ರಕಲೆ – ಅಗಮ್ಯ (ಪ್ರಥಮ), ಕೋಲಾಟ – ಪ್ರಾಪ್ತಿ ಮತ್ತು ತಂಡ(ಪ್ರಥಮ), ಹಿಂದಿ ಕಂಠಪಾಠ – ಸಂಹಿತಾಶರ್ಮ(ದ್ವಿತೀಯ), ದೇಶಭಕ್ತಿಗೀತೆ- ಸುಮ ಮತ್ತು ತಂಡ(ದ್ವಿತೀಯ), ಸಂಸ್ಕೃತ ಧಾರ್ಮಿಕ ಪಠಣ – ಧಾತ್ರಿ(ತೃತೀಯ), ಅಭಿನಯ ಗೀತೆ- ಧಾತ್ರಿ(ತೃತೀಯ), ರಸಪ್ರಶ್ನೆ – ಅರುಣ ಮತ್ತು ತಂಡ (ತೃತೀಯ), ಜನಪದ ನೃತ್ಯ – ಅವನಿ ಬೆಳ್ಳಾರೆ ಮತ್ತು ತಂಡ(ದ್ವಿತೀಯ).

Higher-Primary

ಹಿರಿಯ ಪ್ರಾಥಮಿಕ ವಿಭಾಗ:

ಸಂಸ್ಕೃತ ಕಂಠಪಾಠ – ಸಂಸ್ಕೃತಿ ಶಾಸ್ತ್ರೀ (ಪ್ರಥಮ), ಸಂಸ್ಕೃತ ಧಾರ್ಮಿಕ ಪಠಣ – ಪೃಥಾ (ಪ್ರಥಮ), ಚಿತ್ರಕಲೆ – ಗೌತಮ್(ಪ್ರಥಮ), ಕ್ಲೇಮಾಡಲಿಂಗ್- ಶಿಶಿರ್(ಪ್ರಥಮ), ಯೋಗಾಸನ – ಗೌತಮ್(ಪ್ರಥಮ), ಕೋಲಾಟ – ಅಪೂರ್ವ ಮತ್ತು ತಂಡ(ಪ್ರಥಮ), ಕನ್ನಡ ಕಂಠಪಾಠ – ಸ್ವಾತಿ ಭಟ್ – ದ್ವಿತೀಯ, ಅಭಿನಯ ಗೀತೆ- ದಿಶಾ(ದ್ವಿತೀಯ), ರಸಪ್ರಶ್ನೆ – ಅನಘ ಮತ್ತು ತಂಡ (ದ್ವಿತೀಯ), ಜನಪದ ನೃತ್ಯ – ಸಪ್ತಶ್ರೀ ಮತ್ತು ತಂಡ (ದ್ವಿತೀಯ), ಛದ್ಮವೇಷ- ಭಗತ್(ತೃತೀಯ), ದೇಶಭಕ್ತಿಗೀತೆ – ಸ್ಕಂದ ಮತ್ತು ತಂಡ( ತೃತೀಯ) ಇದರಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ಮತ್ತು ತಂಡ ನವೆಂಬರ್ 7 ಮತ್ತು 7 ರಂದು ಕಾಣಿಯೂರಿನಲ್ಲಿ ನಡೆಯಲಿರುವ ತಾಲೂಕು ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Highslide for Wordpress Plugin