ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳಲ್ಲಿ ಶಾಲೆಗೆ ಪ್ರಶಸ್ತಿ

Prutha-R-Rai-

ಪೃಥಾ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಚಿಕ್ಕಮಗಳೂರು ಜಿಲ್ಲಾಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ನಿಂದ ಹಲವು ಸ್ಪರ್ಧೆಗಳನ್ನು ನಡೆಸಲಾಗಿತ್ತು. ‘ಜ್ಞಾನಸಿಂಧು/ ಜ್ಞಾನ ಬಂಧು’ ನೈತಿಕ ಮೌಲ್ಯಧಾರಿತ ಪುಸ್ತಕದ ಅಧ್ಯಯನದ ಆಧಾರದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಪ್ರಶಸ್ತಿಗಳು ಬಂದಿವೆ.

ರಾಮ್ ಪ್ರಸಾದ್

ರಾಮ್ ಪ್ರಸಾದ್

ಜ್ಞಾನ ಸಿಂಧು ಪುಸ್ತಕ ಆಧಾರಿತ ಭಾಷಣ ಸ್ಪರ್ಧೆಯಲ್ಲಿ ಪೃಥಾ ಇವರು ತೃತೀಯ ಸ್ಥಾನಗಳಿಸಿರುತ್ತಾರೆ. ಇವರು ದಕ್ಷ ಕನ್‌ಸ್ಟ್ರಕ್ಷನ್‌ನ ಮಾಲಕರಾದ ರವೀಂದ್ರ ಪಿ. ಮತ್ತು ಉಷಾ ದಂಪತಿಗಳ ಪುತ್ರಿ ಮತ್ತು ಜ್ಞಾನ ಬಂಧು ಪುಸ್ತಕ ಆಧಾರಿತ ಚಿತ್ರಕಲೆಯಲ್ಲಿ ರಾಮ್ ಪ್ರಸಾದ್ ಇವರು ದ್ವಿತೀಯ ಸ್ಥಾನ ಗಳಿಸಿರುತ್ತಾರೆ. ಇವರು ಪುತ್ತೂರು ನಿವಾಸಿ ಮಲ್ಲೇಶ್ ಮತ್ತು ಅನುರಾಧ ದಂಪತಿಗಳ ಪುತ್ರ.

Highslide for Wordpress Plugin