ವಿವೇಕಾನಂದ ಕನ್ನಡ ಶಾಲೆಯ – ಅಪೂರ್ವ ಮತ್ತು ವಿಶಿಷ್ಟ ಕಾರ್ಯಕ್ರಮ ಗಾನ -ನೃತ್ಯ – ಯಕ್ಷ ಸಂಭ್ರಮ
2013-14 ರಿಂದ ಶಾಲೆಯಲ್ಲಿ ಆರಂಭವಾದ ಸಂಗೀತ ಭರತನಾಟ್ಯ ಯಕ್ಷಗಾನ ತರಗತಿಗಳ ಸಮನ್ವಯ ವಾರ್ಷಿಕೋತ್ಸವವು ನಡೆಯುತ್ತಾ ಬಂದಿದ್ದು ಪ್ರಸ್ತುತ ವರ್ಷದ ಕಾರ್ಯಕ್ರಮ ಸಂಬಂಧಿ ಪೂರ್ವಭಾವಿ ಸಭೆಯು ದಿನಾಂಕ 6-1-2015 ರಂದು ನಡೆಯಿತು. ಈ ಸಂದರ್ಭದಲ್ಲಿ ಸಂಗೀತ , ಭರತನಾಟ್ಯ ಜ್ಯೂನಿಯರ್ ಹಾಗೂ ಸೀನಿಯರ್ ಗ್ರೇಡ್ ಪರೀಕ್ಷೆಗೆ ಹಾಜರಾದ ಮಕ್ಕಳ 100% ಫಲಿತಾಂಶ ವಿವಿಧ ವೇದಿಕೆಯಲ್ಲಿ ನೀಡಲಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶಾಂಭವೀ ವಿಜಯ ಯಕ್ಷಗಾನ ಪ್ರದರ್ಶನದ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.


ಆಡಳಿತ ಮಂಡಳಿಯ ಸದಸ್ಯರಾದ ಶೋಭಾ ಕೊಳತ್ತಾಯ ಕಲೆ ಮಗುವಿನ ಕಲಿಕೆ ಹಾಗೂ ಭಾವನೆಗಳ ವಿಕಾಸಕ್ಕೆ ಪೂರಕ ಎನ್ನುತ್ತಾ ಮಕ್ಕಳನ್ನು ಈ ನಿತ್ತಿನಲ್ಲಿ ಪ್ರೋತ್ಸಾಹಿಸುತ್ತಿರುವ ಪೋಷಕರನ್ನು ಅಭಿನಂದಿಸಿದರು. ಪ್ರಸ್ತುತ ವರ್ಷದ ಸಂಭ್ರಮ 30-01-2015 ರಂದು ನಡೆಯಲಿದ್ದು ಶ್ರೀಮತಿ ಮನೋರಮಾ ಬಿ.ಎನ್ ಅತಿಥಿ ಸ್ಥಾನವನ್ನು ಅಲಂಕರಿಸಲಿದ್ದಾರೆ ಎಂದು ಶಾಲಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.