ಮೌಲ್ಯಯುತ ಶಿಕ್ಷಣ ಜೀವನಕ್ಕೆ ಪೂರಕ

ಮಕ್ಕಳಲ್ಲಿ ಸಾಮರ್ಥ್ಯಕ್ಕೆ ಅನುಗುಣವಾಗಿ ಕಲಿಕೆ ನಿರಂತರವಾಗಿ ನಡೆಯುತ್ತಿರುತ್ತದೆ, ಅದಕ್ಕೆ ಪೂರಕವಾದ ಮೌಲ್ಯಯುತ ಶಿಕ್ಷಣವನ್ನು ಶಾಲೆಯು ನೀಡುತ್ತಿದೆ, ಎಂದು ಸರಸ್ವತಿ ವಿದ್ಯಾಲಯ ಕಡಬ ಇಲ್ಲಿನ ಸಂಚಾಲಕರಾದ ಶ್ರೀಯುತ ವೆಂಕಟರಮಣ ರಾವ್ ಮಂಕುಡೆಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 1 ಮತ್ತು 2 ನೇ ತರಗತಿಯ ಪೋಷಕ – ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಅಂತೆಯೇ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದ ಶ್ರೀಮತಿ ಪೂರ್ಣಿಮಾ ಇವರು ಪೋಷಕರು ತಮ್ಮ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತಾಗ ಭಾವನಾತ್ಮಕ ಸಂಬಂಧ ಗಟ್ಟಿಯಾಗಲು ಸಾಧ್ಯ ಎಂದು ನುಡಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಹಿರಿಯರು ಮತ್ತು ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಬಿರ್ಮಣ್ಣ ಗೌಡ ಇವರು ಸಂದರ್ಬೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಪ್ರಜ್ಞಾ ನಿಡ್ವಣ್ಣಾಯ ಪ್ರಾರ್ಥಿಸಿ, ಕು. ಲಕ್ಷ್ಮೀ ಮಾತಾಜಿ ಸ್ವಾಗತಿಸಿದರು, ಶ್ರೀಮತಿ ಲಾವಣ್ಯ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ಸ್ವಾತಿ ಮಾತಾಜಿ ಧನ್ಯವಾದಗೈದರು.

IMG_20160625_152051

IMG_20160625_150443

IMG_20160625_150452

Highslide for Wordpress Plugin