ಶಾಲೆ ಮತ್ತು ಮನೆಯ ವಾತಾವರಣ ಪರಸ್ಪರ ಪೂರಕವಾಗಿದ್ದಲ್ಲಿ ಕಲಿಕೆ ಸುಗಮವಾಗಿ ಸಾಗುತ್ತದೆ ಎಂದು ಶ್ರೀಯುತ ರವಿನಾರಾಯಣರವರು ಹೇಳಿದರು. ಇವರು ವಿವೇಕಾನಂದ ಕನ್ನಡ ಮಾದ್ಯಮ ಶಾಲೆಯಲ್ಲಿ ನಡೆದ 3 ಮತ್ತು 4 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆಗೆ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದರು. ಅಂತೆಯೇ ಸಭೆಯಲ್ಲಿ ಉಪಸ್ಥಿತರಿದ್ದ ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿಯವರು ಮಾತನಾಡಿ, ಮಕ್ಕಳನ್ನು ಸುಸಂಸ್ಕೃತರನ್ನಾಗಿ ರೂಪಿಸುವಲ್ಲಿ ಮಾತೃಭಾಷಾ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. ವೇದಿಕೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಸಭೆಯಲ್ಲಿ ವಿದ್ಯಾರ್ಥಿಗಳಾದ ಭವಿಷ್, ಧಾತ್ರಿ ಮತ್ತು ಅಗಮ್ಯ ಪ್ರಾರ್ಥಿಸಿ ಶ್ರೀಮತಿ ವೀಣಾಕುಮಾರಿ ಸ್ವಾಗತಿಸಿ, ಕು. ಧನ್ಯ ವಂದಿಸಿದರು. ಶ್ರೀಮತಿ ಭವ್ಯಾ ಕಾರ್ಯಕ್ರಮ ನಿರೂಪಿಸಿದರು.


