ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಪೂರಕ – ಪದ್ಮನಾಭ ಜಿ.

ಪ್ರತಿ ಶಾಲೆಗಳಲ್ಲಿ ಶೈಕ್ಷಣಿಕ ವಿಷಯಗಳ ಜೊತೆಗೆ ನಡೆಯುವ ಸಹಪಠ್ಯ ಚಟುವಟಿಕೆಗಳು ಕಲಿಕೆಗೆ ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ, ಬದಲಾಗಿ ಕಲಿಕೆಗೆ ಉತ್ತೇಜನ ನೀಡುತ್ತದೆ ಎಂದು ಪದ್ಮನಾಭ ಜಿ. ಯವರು ಹೇಳಿದರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 5 ಮತ್ತು 6 ನೇ ತರಗತಿಯ ಪೋಷಕ- ಶಿಕ್ಷಕರ ಸಭೆಗೆ ಪೋಷಕ ಪ್ರತಿನಿಧಿಯಾಗಿ ಆಗಮಿಸಿದ್ದರು.

IMG_20160623_165914

IMG_20160623_165936

IMG_20160623_170330

ಅಂತೆಯೇ ಸಭೆಯ ಅಧ್ಯಕ್ಷ ಸ್ಥಾನವನ್ನು ವಹಿಸಿದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿಯವರು ಸಂದರ್ಭೋಚಿತವಾಗಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ಕು. ಗೌತಮಿ ಮತ್ತು ಅದಿತಿ ಪ್ರಾರ್ಥಿಸಿ, ಸೌಮ್ಯ ಮಾತಾಜಿ ಸ್ವಾಗತಿಸಿದರು, ಶ್ರೀ ಹರೀಶ್ ಶ್ರೀಮಾನ್ ಧನ್ಯವಾದ ಮಾಡಿದರು. ಶ್ರೀಮತಿ ಅನುಷಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin