ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ – ಶ್ರೀ ಲೋಹಿತ್ ಎಸ್. ಕೆ.

ಜ್ಞಾನ, ಓದುವ ಹವ್ಯಾಸ , ಏಕಾಗ್ರತೆ, ಭಾಷಾ ಪ್ರೌಢಿಮೆ, ಶಬ್ಧ ಭಂಡಾರ, ವಿಮರ್ಶತ್ಮಾಕ ಗುಣ, ನೆನಪು ಶಕ್ತಿ, ಜೀವನ ಮೌಲ್ಯ, ಮಾನಸಿಕ ನೆಮ್ಮದಿ ಮತ್ತು ಆರೋಗ್ಯ ಇವೆಲ್ಲವನ್ನು ನೀಡುವ ಏಕೈಕ ಕಲೆಯೇ ಯಕ್ಷಗಾನ ಮತ್ತು ಸಾರ್ಥಕ ಕಲೆಯಿಂದ ಜೀವನ ಕಟ್ಟಲು ಸಾಧ್ಯ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 10-06-2016 ರಂದು ಉದ್ಘಾಟನೆಗೊಂಡ ಯಕ್ಷಗಾನ ಅರ್ಥಗಾರಿಕೆ ತರಬೇತಿ ಸಭಾಕಾರ್ಯಕ್ರಮದಲ್ಲಿ ಕಲಾವಿದ, ಉಪನ್ಯಾಸಕರಾದ ಶ್ರೀ ಲೋಹಿತ್.ಎಸ್.ಕೆ ಹೇಳಿದರು.

20160610_100347

ಕಲೆಯಲ್ಲಿ ಸಾಧನೆ ಮಾಡಿದರೆ ನಮ್ಮ ಪರಿಚಯ ದೇಶ ವಿದೇಶಗಳಲ್ಲೂ ಪ್ರಸಿದ್ಧಿಗೆ ಬರುತ್ತದೆ ಎಂದು ತರಬೇತುದಾರರಾದ ಶ್ರೀಮತಿ ಪದ್ಮ ಆಚಾರ್ ತಮ್ಮ ಅನುಭವ ಹಂಚಿಕೊಂಡರು. ವೇದಿಕೆಯಲ್ಲಿ ಶಾಲಾ ಮುಖ್ಯಗುರುಳಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಹಿರಿಯ ಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿ ಉಪಸ್ಥಿತರಿದ್ದರು. ಕಾರ್ಯಯಕ್ರಮದ ಸ್ವಾಗತ, ನಿರೂಪಣೆ ಕಲಾವಿದರಾದ ಶಿಕ್ಷಕ ಶ್ರೀ ಚಂದ್ರಶೇಖರ ಸುಳ್ಯಪದವು ನೆರೆವೇರಿಸಿದರು.

Highslide for Wordpress Plugin