ಕರ್ನಾಟಕ ಗಮಕ ಕಲಾ ಪರಿಷತ್ತು (ರಿ) ಬೆಂಗಳೂರು ಪುತ್ತೂರು ತಾಲೂಕು ಘಟಕ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಯೋಗದಲ್ಲಿ ಪದಗ್ರಹಣ ಹಾಗೂ ಗಮಕ ವಾಚನ ಕಾರ್ಯಕ್ರಮ ನಡೆಯಿತು.



ತಾಲೂಕು ಘಟಕದ ಅಧ್ಯಕ್ಷರಾದ ಶ್ರೀ ಭಾಸ್ಕರ ಬಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಪುಸ್ತಕ ನೀಡಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಸ್ವಾಗತಿಸಿದರು. ವೇದಿಕೆಯಲ್ಲಿ ಜತೆ ಕಾರ್ಯದರ್ಶಿ ಉಪನ್ಯಾಸಕರಾದ ಉದಯಕುಮಾರ್, ಕೋಶಾಧಿಕಾರಿ ಶ್ರೀ ರಂಗನಾಥರಾವ್, ಸಂಚಾಲಕಿ ನ್ಯಾಯವಾದಿ ಹರಿಣಾಕ್ಷಿ ಉಪಸ್ಥಿತರಿದ್ದರು.
ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ರೂಪಲೇಖಾ ಪಾಣಾಜೆ ದೀಪ ಬೆಳಗಿಸಿ ಉದ್ಘಾಟಿಸಿ ’ ಗಮಕ ಕಲಾ ಪ್ರಕಾರ ಭಾಷಾ ಪ್ರೌಢಿಮೆ ಬೆಳೆಯಲು ಸಹಕಾರಿಹಾಗೂ ವಿದ್ಯಾರ್ಥಿ ನೆಲೆಯಲ್ಲಿ ಇದನ್ನು ಅರಿತು ರೂಢಿಸಿಕೊಳ್ಳುವಂತಾಗಲಿ’ ಎಂದು ಶುಭ ಹಾರೈಸಿದರು.
ಅನಂತರ ನಡೆದ ಗಮಕ ವಾಚನ ವ್ಯಾಖ್ಯಾನದಲ್ಲಿ ಜಿಲ್ಲಾ ಗಮಕ ಕಲಾ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮಧೂರು ಮೋಹನ ಕಲ್ಲೂರಾಯ ವ್ಯಾಸ ಭಾರತದ ವ್ಯಾಖ್ಯಾನ ಹಾಗೂ ಮಂಜಳಾ ಸುಬ್ರಹ್ಮಣ್ಯ ಮಂಚಿ ಇವರು ವಾಚನ ನಡೆಸಿಕೊಟ್ಟರು.
ತಾಲೂಕುಘಟಕದ ಪ್ರಧಾನ ಕಾರ್ಯದರ್ಶಿ ಆಶಾ ಬೆಳ್ಳಾರೆ ಧನ್ಯವಾದ ನೀಡಿದರು. ಶಾಲಾ ಮಕ್ಕಳಾದ ಕೀರ್ತಿ ಕುಡ್ವಇ ವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದ ನಿರ್ವಹಣೆ ಮಾಡಿದವರು ವಿದ್ಯಾರ್ಥಿ ತೃಷಾ ಭಟ್. ಸಭಾಕಾರ್ಯಕ್ರಮದ ಅನಂತರ ಶಾಲಾ ಗಮಕ ಘಟಕದ ವಿದ್ಯಾರ್ಥಿಗಳೊಂದಿಗೆ ಮಧೂರು ಮೋಹನ ಕಲ್ಲೂರಾಯ ಸಂವಾದ ನಡೆಸಿದರು.