ಹುತಾತ್ಮ ವೀರ ಯೋಧರ ನೆನಪು ಹಾಗೂ ಡಾ|| ಎ.ಪಿ.ಜೆ ಅಬ್ದುಲ್ ಕಲಾಂರವರ ಪುಣ್ಯಸ್ಮರಣೆ

ಭಾರತವು ಯಾವುದೇ ರಾಷ್ಟ್ರವನ್ನು ವೈರತ್ವದಿಂದ ಕಾಣದೇ ಮಿತ್ರನಂತೆ ನಂಬಿದ ಇತಿಹಾಸ ಭಾರತದ್ದು ಇಂತಹ ಪುಣ್ಯ ನೆಲದಲ್ಲಿ ಜನಿಸಿದ ನಾವೆಲ್ಲರೂ ಧನ್ಯರು ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ‘ಕಾರ್ಗಿಲ್ ವಿಜಯ’ ದಿನಾಚರಣೆ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕಿ ಶ್ರೀಮತಿ ಭವ್ಯ ನುಡಿದರು.

20160727_133145

20160727_132459

20160727_132031

ಕಾರ್ಗಿಲ್‌ನಲ್ಲಿ ಹುತಾತ್ಮ ವೀರ ಯೋಧರ ಹೋರಾಟ ಮತ್ತು ಪಾಕಿಸ್ತಾನದ ಗಡಿರೇಖೆಯ ಉಲ್ಲಂಘನೆ, ಕಾರ್ಗಿಲ್ ಬೆಟ್ಟಕ್ಕೆ ದಾಳಿಯಾದ ಸಂದರ್ಭ ಹುತಾತ್ಮರಾದ ವೀರ ಯೋಧರ ಕಾರ್ಯಕ್ಷಮತೆಯನ್ನು ವಿವರಿಸುತ್ತಾ ಅಬ್ದುಲ್ ಕಲಾಂ ರವರು ತಮ್ಮ ಜೀವನ ಪಯಣದಿಂದ ನಮಗೆ ಉತ್ತಮ ವಿಚಾರಧಾರೆ ಬಿಟ್ಟು ಹೋಗಿದ್ದಾರೆ ಎಂದು ನುಡಿದರು. ಶಾಲಾ ವಿದ್ಯಾರ್ಥಿಗಳಾದ ಸಿಂಚನ, ದಿಶಾ, ಪ್ರಣಮ್ಯ, ತೃಷ ಜೈನ್ ಇವರು ಕಲಾಂರವರ ಬಾಲ್ಯಜೀವನದ ಘಟನೆಗಳ ಕುರಿತು ಮಾತನಾಡಿದರು.

Highslide for Wordpress Plugin