ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ(ಆಡಳಿತ) ಮಂಗಳೂರು, ಜಿಲ್ಲಾಮಟ್ಟದ ಶಾಲಾ ಮಕ್ಕಳ ಆಟೋಟ ಸ್ಪರ್ಧೆಯು ರೆಡ್ ಕ್ಯಾಮಲ್ಸ್ ಇಸ್ಲಾಮಿಕ್ ಶಾಲೆ ಮಂಗಳೂರು ಇಲ್ಲಿ ನಡೆದಿದ್ದು, ಇದರಲ್ಲಿ ಕರಾಟೆ 30-35 ಕೆ.ಜಿ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ ಹಿತೇಶ್.ಪಿ.ಬಿ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರು ಪಿ. ಬಾಲಕೃಷ್ಣ ಗೌಡ ಮತ್ತು ಚಂದ್ರಾವತಿ ದಂಪತಿಗಳ ಪುತ್ರ.