ದಿನಾಂಕ 3-9-2017 ರಂದು ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ಸಭಾಭವನ ಸುಕಂದಕಟ್ಟೆ, ಮಂಗಳೂರು ಇಲ್ಲಿ ನಡೆದ 2ನೇ ರಾಜ್ಯಮಟ್ಟದ ಜೆ.ಎಸ್.ಕೆ.ಎ ಕರಾಟೆ ಚಾಂಪಿಯನ್ ಷಿಪ್‌ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ೧೦ನೇ ತರಗತಿ ವಿದ್ಯಾರ್ಥಿ ಸಾತ್ವಿಕ್ ಶರ್ಮ ಬಿ.ಎಸ್ ’ಬೆಸ್ಟ್ ಫೈಟರ್’ (Grand Champion Kumite) ಪ್ರಶಸ್ತಿಯನ್ನು ಗಳಿಸಿರುತ್ತಾರೆ. ಇವರು ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್‌ನ ಮಂಗಳೂರಿನ ನಿತಿನ್ ಎನ್ ಸುವರ್ಣ (Black Belt 4th DAN) , ಸಂಪತ್ ಕುಮಾರ್ ಹಾಗೂ ಶಿವಪ್ರಸಾದ್‌ರವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರು ರಾಜೇಶ್ ಶರ್ಮ ಮತ್ತು ಸೀಮಾ ದಂಪತಿ ಪುತ್ರ.
