ಪ್ರತಿಭಾ ಕಾರಂಜಿ – ಯಕ್ಷಗಾನ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

ಸರಕಾರಿ ಪದವಿ ಪೂರ್ವ ಕಾಲೇಜು ಉಪ್ಪಿನಂಗಡಿ ಇಲ್ಲಿ ನಡೆದ ತಾಲೂಕು ಮಟ್ಟದ ’ಪ್ರತಿಭಾ ಕಾರಂಜಿ’ ಯಕ್ಷಗಾನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ’ಯಕ್ಷ ಚಿಣ್ಣರು’ ಭಾಗವಹಿಸಿ ಕಿರಿಯ, ಹಿರಿಯ ಮತ್ತು ಪ್ರೌಢಶಾಲಾ ವೈಯಕ್ತಿಕ ಸ್ಪರ್ಧೆಯ ಎಲ್ಲಾ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿಕೊಂಡು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಿರಿಯ ವಿಭಾಗದಲ್ಲಿ ಧನುಷ್, ಹಿರಿಯ ವಿಭಾಗದಲ್ಲಿ ಕು.ಅವನಿ ಬೆಳ್ಳಾರೆ, ಪ್ರೌಢವಿಭಾಗದಲ್ಲಿ ಕು. ಶ್ರೇಯಾ ಆಚಾರ್ ಸ್ಪರ್ಧಿಸಿದ್ದರು. ಅದೇ ರೀತಿ ಗುಂಪು ವಿಭಾಗ ಸ್ಪರ್ಧೆಯಲ್ಲಿ ಶಾಲಾ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿದೆ. ಈ ವಿಭಾಗದಲ್ಲಿ ಪರೀಕ್ಷಿತ್, ಬಬಿನ್ ರೈ, ಧನುಷ್, ಯತೀನ್, ಯತೀಶ್, ಮುಖೇಶ್ ಕೃಷ್ಣ, ಭವಿಷ್, ಮಿಥುನ್ ಭಾಗವಹಿಸಿದ್ದರು. ಶಿಕ್ಷಕ, ಯಕ್ಷಗಾನ ಕಲಾವಿದ ಶ್ರೀ ಚಂದ್ರಶೇಖರ ಸುಳ್ಯಪದವುರವರ ಸಂಯೋಜನೆಯಲ್ಲಿ ಶ್ರೀ ಬಾಲಕೃಷ್ಣ ನಿರ್ದೇಶನದಲ್ಲಿ ತರಬೇತಿ ನೀಡಲಾಗಿತ್ತು.

Prathiba karanji - yakshagana

Highslide for Wordpress Plugin