ವಿದ್ಯಾಭಾರತಿ ಕರ್ನಾಟಕ ಪ್ರಾಂತ ಮಟ್ಟದ ಯೋಗಾಸನ ಮತ್ತು ಕರಾಟೆ ಸ್ಪರ್ಧೆ ಜೆ.ಜಿ.ಆರ್.ವಿ.ಕೆ ಶಾಲೆ ರಾಮಮೂರ್ತಿ ನಗರ ಬೆಂಗಳೂರು ಇಲ್ಲಿ ನಡೆಯಿತು. ಈ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ರಿತೇಶ್ (10ನೇ ತರಗತಿ) ಮತ್ತು ಪ್ರಮಥ ಎಂ. ಭಟ್ (6ನೇ ತರಗತಿ) ಕರಾಟೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಅಖಿಲ ಭಾರತ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೆಯೇ ಯೋಗಾಸನ ಸ್ಪರ್ಧೆಯಲ್ಲಿ ಪ್ರೌಢಶಾಲಾ ವಿಭಾಗದ ಬಾಲಕರ ವಿಭಾಗದಲ್ಲಿ ಪುನೀತ್, ರಕ್ಷಿತ್, ಕೌಶಿಕ್, ಲಿಖಿತ್, ಕಾರ್ತಿಕ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಮತ್ತು ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ ಎಮ್, ದೇವಿಕಾ ಎನ್., ಸುಚಿತ ಕೆ. ಎಸ್., ಸೌಜನ್ಯ ಡಿ. ಎಸ್., ರಶ್ಮಿ ಎಂ. ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
