ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ರಕ್ಷೆಯ ರಚನೆಯಲ್ಲಿ ನಾವು ಕಾಣಬಹುದು. ರಕ್ಷೆಯನ್ನು ಕಟ್ಟುವುದರಿಂದ ಪರಸ್ಪರರಲ್ಲಿ ಸಹೋದರತ್ವ ಅದನ್ನು ಪರಿಹರಿಸಲು ಧಾವಿಸುವ ಗುಣಗಳು ಜಾಗೃತಗೊಳ್ಳುತ್ತವೆ. ಜನರ ನಡುವೆ ಒಮ್ಮತವಿದ್ದು ಸಂಘಟಿತರಾದಾಗ ಸದೃಢ ದೇಶವನ್ನು ಕಟ್ಟಬಹುದು ಎನ್ನುತ್ತಾ ರಕ್ಷೆಯ ಮಹತ್ವ ಸಾರುವ ಐತಿಹಾಸಿಕ ಹಾಗೂ ಪೌರಾಣಿಕ ಪ್ರಸಂಗಗಳನ್ನು ಉದಾಹರಿಸಿದವರು ಯೋಗ ಶಿಕ್ಷಕರಾದ ಶ್ರೀಯುತ ಕರುಣಾಕರ ಉಪಾಧ್ಯಾಯ ಇವರು. ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಅತಿಥಿ ನೆಲೆಯಲ್ಲಿ ಮಾತನಾಡಿದರು.





ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀಯ್ತ ಅಚ್ಯುತ ನಾಯಕ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ಪರಸ್ಪರ ರಕ್ಷೆ ಕಟ್ಟಿಕೊಳ್ಳುವ ಮೂಲಕ ಸಹೋದರತ್ವಕ್ಕೆ ಸಾಕ್ಷಿಯಾದರು. ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ, ಶಿಕ್ಷಕವೃಂದ ಹಾಗೂ ಪೋಷಕರು ಪಾಲ್ಗೊಂಡರು.