ಶಾಲಾ ಚುನಾವಣೆ

ಳವೆಯಿಂದಲೇ ನಾಯಕತ್ವ ಗುಣವನ್ನು ಬೆಳೆಸಲು ಶಾಲಾ ಚುನಾವಣೆಯು ಉತ್ತಮ ವೇದಿಕೆಯಾಗಿದೆ. ನಾಯಕತ್ವದ ಗುಣವು ವೈಯಕ್ತಿಕ ಮತ್ತು ಸಾಮಾಜಿಕ ಒಳಿತಿಗೆ ಪ್ರೇರಕವಾಗಿದೆ. ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳು ತಮ್ಮ ಜವಾಬ್ದಾರಿ ತಿಳಿದು ನಿರಂತರ ಕಾರ್ಯೋನ್ಮುಖರಾಗಿರಬೇಕು ಎಂದು ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಚುನಾವಣೆಯಲ್ಲಿ ಆಯ್ಕೆಯಾದ ಮಕ್ಕಳಿಗೆ ತಿಳಿಸುತ್ತಾ ಪ್ರಮಾಣವಚನ ಮಾಡಿಸಿದರು.

School-election 2019

ಪ್ರೌಢಶಾಲಾ ವಿಭಾಗದ ನಾಯಕನಾಗಿ ಶಿಶಿರ್ ಎಸ್. ಮತ್ತು ಉಪನಾಯಕನಾಗಿ ಸುಹಾಸ್ ಪ್ರಭು ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಅಕ್ಷಯ್ ಮತ್ತು ಉಪನಾಯಕಿಯಾಗಿ ಕು. ಅಭೀಕ್ಷ ಆಯ್ಕೆಯಾದರು. ತದನಂತರ ಶಾಲಾಮಂತ್ರಿ ಮಂಡಲದ ಮಕ್ಕಳನ್ನೊಳಗೊಂಡು ಪ್ರಮಾಣವಚನ ಬೋಧಿಸಲಾಯಿತು. ಶಾಲಾ ಸಹಶಿಕ್ಷಕರಾದ ಶ್ರೀಯುತ ಚಂದ್ರಶೇಖರ್ ಸುಳ್ಯಪದವು ಇವರ ಮಾರ್ಗದರ್ಶನದಲ್ಲಿ ನಡೆದ ಚುನಾವಣೆಯಲ್ಲಿ ಎಲ್ಲಾ ಸಹಶಿಕ್ಷಕರು ಸಹಕರಿಸಿದರು.

Highslide for Wordpress Plugin