ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನವದಂಪತಿ ಸಮಾವೇಶ

ಬದಲಾಗುತ್ತಿರುವ ಕುಟುಂಬ ಚಿತ್ರಣದಲ್ಲಿ ಸಕರಾತ್ಮಕ ನಂಬಿಕೆ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಹಾಗೂ ವಿವೇಕಾನಂದ ವಿದ್ಯಾವರ್ಧಕ ಸಂಘದ ಅನ್ಯಾನ್ಯ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ನವದಂಪತಿ ಸಮಾವೇಶ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಿತು.

Navadampathi samvesha (1)

Navadampathi samvesha (2)

ಹಿರಿಯ ದಂಪತಿ ಕೆ. ಸುಬ್ರಹ್ಮಣ್ಯ ಭಟ್ ಹಾಗೂ ಹೇಮಾವತಿ ಕೆ.ಎಸ್. ಭಟ್ ದಂಪತಿ ಹಾರಾರ್ಪಣೆ ಮಾಡಿಕೊಳ್ಳುವ ಮೂಲಕ ಸಮಾವೇಶಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮಕ್ಕೆ ಆಗಮಿಸಿದ ನವದಂಪತಿಗಳನ್ನು ಕಾಲಿಗೆ ನೀರು ಹಾಕಿ ಹಣೆಗೆ ಅರಸಿನ ಕುಂಕುಮ ಹಚ್ಚಿ ಸ್ವಾಗತಿಸಲಾಯಿತು. ಬಳಿಕ ಶಾಲಾ ಕಟ್ಟಡ ಪ್ರವೇಶ ದ್ವಾರದಲ್ಲಿರುವ ಸರಸ್ವತಿ ದೇವಿ ಪ್ರತಿಮೆಗೆ ದಂಪತಿಗಳು ಹಾರಾರ್ಪಣೆ ಮಾಡಿ ನಂತರ ಅದೇ ಹಾರವನ್ನು ದಂಪತಿಗಳು ಬದಲಾಯಿಸಿಕೊಂಡರು. ನೂತನ ದಂಪತಿಗಳನ್ನು ಚೆಂಡೆ ವಾದನದ ಮೂಲಕ ಸಭಾ ವೇದಿಕೆಗೆ ಕರೆತರಲಾಯಿತು. ದಂಪತಿಗಳಿಗೆ ಹೂವಿನ ಹಾರವನ್ನು ಶಾಲೆಯ ವತಿಯಿಂದ ಒದಗಿಸಲಾಗಿತ್ತು. ಸಭಾಂಗಣದಲ್ಲಿ ನವ ದಂಪತಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. 56 ಜೋಡಿ ದಂಪತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಮಾವೇಶದ ಮಾರ್ಗದರ್ಶಕರಾಗಿದ್ದ ಕುಟುಂಬ ಪ್ರಬೋಧನ್ ಅಖಿಲ ಭಾರತೀಯ ಸಂಯೋಜಕ ಕಜಂಪಾಡಿ ಸುಬ್ರಹ್ಮಣ್ಯ ಭಟ್ ಮಾತನಾಡಿ, ವಿವಾಹವೆಂಬುದು ಭಾವನಾತ್ಮಕ ಸಂಬಂಧಗಳ ವೃದ್ಧಿ. ಅದು ಆಡಂಬರದ ಆಚರಣೆಗೆ ಸೀಮಿತವಲ್ಲ. ಜೀವನದ ಅಂಗ. ದಂಪತಿಗಳು ಕಾಲದ ಬದಲಾವಣೆಗೆ ಸಂಬಂಧಿಸಿದಂತೆ ಹೊಂದಿಕೊಂಡು ಜೀವನ ನಡೆಸಬೇಕು. ವಿವಾಹದ ಮೂಲ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಐಕ್ಯಮತದಿಂದ ಜೀವನ ನಡೆಸುವಂತೆ ಕಿವಿಮಾತು ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕ ಸು.ರಾಮಣ್ಣ, ಮಾತೃಭಾರತಿ ಅಧ್ಯಕ್ಷೆ ಉಷಾಮಹೇಶ್, ಡಾ. ಅನಸೂಯ, ಶಾಲಾ ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಆಡಳಿತ ಮಂಡಳಿ ಸಂಚಾಲಕರಾದ ರವಿನಾರಾಯಣ ಸ್ವಾಗತಿಸಿದರು. ಆಡಳಿತ ಮಂಡಳಿ ಅಧ್ಯಕ್ಷ ಅಚ್ಯುತ್ ನಾಯಕ್ ಪ್ರಸ್ತಾವನೆಗೈದರು. ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin