ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಕಲಾ ಸಾನಿಧ್ಯ’ಚಿತ್ರಕಲಾ ವೇದಿಕೆಯಿಂದ ಮಕ್ಕಳ ರಜಾ ಸಮಯದ ಕಾರ್ಯಚಟುವಟಿಕೆಗಳು ಪ್ರದರ್ಶನಗೊಂಡವು ಮಕ್ಕಳ ತರಗತಿ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಂತೆ ಚಿತ್ರರಚನೆ, ಪೇಪರ್ಕ್ರಾಪ್ಟ್, ಕಸದಿಂದ ರಸ, ಹೊಲಿಗೆ ಮುಂತಾದವುಗಳು ತೊಡಗಿಕೊಂಡಿದ್ದ ಮಕ್ಕಳ ಕಲಾ ಪ್ರದರ್ಶನವನ್ನು ವೀಕ್ಷಿಸಿದ ಪೋಷಕರು ಹರ್ಷ ವ್ಯಕ್ತಪಡಿಸಿದರು.
ಮಕ್ಕಳ ರಜಾ ಕಾರ್ಯ ನೋಡಿ ಖುಷಿಯಾಯಿತು. ರಜಾ ದಿನಗಳಲ್ಲಿ ಪಠ್ಯ ಕಲಿಕೆಯೊಂದಿಗೆ ಕರಕುಶಲ ಕಲೆ, ಚಿತ್ರರಚನೆಯಲ್ಲಿ ನನ್ನ ಮಕ್ಕಳು ತೊಡಗಿದ್ದು ನೋಡಿ ಸಮಾಧಾನವೆನಿಸಿತ್ತು. ಇಂದು ಈ ರೀತಿ ಅವರ ಕಾರ್ಯಗಳು ಪ್ರದರ್ಶನಗೊಳ್ಳುತ್ತಿರುವುದು ಮಕ್ಕಳಿಗೆ ಮಹತ್ವದ ವೇದಿಕೆ ನೀಡಿದುದಕ್ಕೆ ಸಾಕ್ಷಿಯಾಗಿದೆ. – ಶ್ರೀ ಗೋಪಾಲಕೃಷ್ಣ, ಪೋಷಕರು


