ವಿವೇಕಾನಂದ ಕನ್ನಡ ಶಾಲೆಯಲ್ಲಿ 1 ರಿಂದ 5 ನೇ ತರಗತಿಯ ಮಕ್ಕಳ ವಿಭಾಗಶಃ ಪೋಷಕರ ಸಭೆಯು ನಡೆಯಿತು. ಸಭೆಯಲ್ಲಿ ರಜಾ ನಂತರದ ಮಕ್ಕಳ ಶಾಲಾ ಮತ್ತು ಮನೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂವಾದ ನಡೆಯಿತು.



ಕಲಿಕಾ ಚಟುವಟಿಕೆಗಳಿಗೆ ಇದೀಘ ಒಂದು ಬಗೆಯ ವೇಗ ದೊರೆತಿದ್ದು ಮಕ್ಕಳು ಹಾಗೂ ಪೋಷಕರು ಈ ದಿಶೆಯಲ್ಲಿ ಸಂತೋಷ ವ್ಯಕ್ತಪಡಿಸಿದರು. ವಿಷಯವಾರು ಶಿಕ್ಷಕರು ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡದಿಂದ ಶಾಲೆಗೆ ನೀಡುತ್ತಿರುವ ಕಲಿಕಾ-ಪೂರಕ ಸಾಮಾಗ್ರಿಗಳ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿ – ಕೃತಿ ಸಂಪುಟವು ಪಠ್ಯ ಹಾಗೂ ಪಠ್ಯಪೂರಕ ಚಟುವಟಿಕೆಗಳಿಗೆ ಸಂಬಂಧಿಸಿದ ವಿದ್ಯಾರ್ಥಿಯ ಸ್ವ-ಮೌಲ್ಯಮಾಪನಕ್ಕೆ ಕೈಪಿಡಿಯಾಗಿದೆ. ಪೋಷಕರು ಈ ಬಗ್ಗೆ ವಿಶೇಷ ಗಮನಹರಿಸಬೇಕೆಂದು ಶಾಲಾ ಮುಖ್ಯಗುರುಗಳು ತಿಳಿಸಿದರು.
ಶಿಕ್ಷಕ-ರಕ್ಷಕ ಸಂಘದ ಸದಸ್ಯರ ಆಯ್ಕೆಯ ಅನಂತರ ಪೋಷಕರು ಪ್ರಗತಿಪತ್ರ ಹಾಗೂ ಉತ್ತರ ಪತ್ರಿಕೆಗಳಿಗೆ ಸಹಿ ಹಾಕಿದರು.