ವಿವೇಕಾನಂದಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸ್ಥಳೀಯ ವಕೀಲರುಗಳಾದ ಶ್ರೀಮತಿ ಹರಿಣಾಕ್ಷಿಜೆ ಶೆಟ್ಟಿ ಹಾಗೂ ರಾಜೇಶ್ವರಿಇವರು ಆಗಮಿಸಿ ಮಕ್ಕಳ ಹಕ್ಕುಗಳು ಹಾಗೂ ಉಚಿತ ಕಾನೂನಿನ ನೆರವಿನ ಬಗ್ಗೆ ಮಾಹಿತಿ ನೀಡುವುದರಜೊತೆಗೆ ಯಾರೆಲ್ಲಾ ಈ ಉಚಿತ ಕಾನೂನಿನ ನೆರವು ಪಡೆಯಬಹುದು ಎಂಬ ವಿಚಾರವನ್ನು ಸವಿವರವಾಗಿ ತಿಳಿಸಿದರು.


ವಿದ್ಯಾರ್ಥಿಗಳಲ್ಲಿ ಸಂವಾದ ನಡೆಸುತ್ತಾಅವರ ಸಂದೇಹಗಳನ್ನು ಬಗೆಹರಿಸಿ ಮಧ್ಯಸ್ಥಿಕೆ ಹಾಗೂ ಲೋಕ ಅದಾಲತ್ ಬಗ್ಗೆ ವಿಚಾರ ತಿಳಿಸಿದರು.
ಇಲ್ಲಿ ವಿದ್ಯಾರ್ಥಿಗಳು ಕಾನೂನಿನ ಬಗೆಗಿನ ಹೆಚ್ಚಿನ ವಿಚಾರವನ್ನು ತಿಳಿದುಕೊಂಡರು. ಹತ್ತನೇ ತರಗತಿಯ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.