“ಪ್ರಾಯೋಗಿಕ ಮಾದರಿಯ ಕಲಿಕಾ ವಿಧಾನ ಮಕ್ಕಳಲ್ಲಿ ಆಸಕ್ತಿ ಹಾಗೂ ನೆನಪಿನ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿರುತ್ತದೆ”- ಶ್ರೀ ಚಂದ್ರಕುಮಾರ್, ಪ್ರಾಂಶುಪಾಲರು. ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜ್ ನೆಹರು ನಗರ.
ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿನಿಂದ ಆಯೋಜಿಸಲಾದ ಮೆಕ್ಯಾನಿಕಲ್ ಹಾಗೂ ಎಲೆಕ್ಟ್ರಾನಿಕ್ ಮಾದರಿ ಪ್ರದರ್ಶನ ವೀಕ್ಷಿಸಲು ತೆರಳಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ಕಾಲೇಜು ಪ್ರಾಧ್ಯಾಪಕ ವೃಂದದವರು ಮಾದರಿಗಳ ಬಗೆಗಿನ ಪ್ರಾತ್ಯಕ್ಷಿಕಾ ಮಾಹಿತಿ ನೀಡಿದರು.