ಕಲಬುರಗಿಯ ಸೇಡಂನಲ್ಲಿ ಪ್ರಾಂತ ಸಾಧಾರಣಾ ಸಭಾ ಬೈಠಕ್‌

ವಿದ್ಯಾಭಾರತಿ ಶಿಕ್ಷಾಸಂಸ್ಥಾನ ವತಿಯಿಂದ ಕಲಬುರಗಿಯ ಸೇಡಂನ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಲಾದ ಪ್ರಾಂತ ಸಾಧಾರಣಾ ಸಭಾ ಬೈಠಕ್‌ನಲ್ಲಿ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಭಾಗವಹಿಸಿದರು. ಎರಡು ದಿನಗಳವರೆಗೆ ನಡೆದ ಈ ಕಾರ್ಯಾಗಾರದಲ್ಲಿ ವಿದ್ಯಾಭಾರತಿಯ ವಿಭಿನ್ನ ಪ್ರಕಲ್ಪಗಳ ಕಾರ್ಯಯೋಜನೆ ಹಾಗೂ ಅನುಷ್ಠಾನಗಳ ಬಗ್ಗೆ ಚರ್ಚೆ ನಡೆಯಿತು.

17 ಜಿಲ್ಲೆಗಳಿಂದ 158 ಮಂದಿ ಆಡಳಿತ ಮಂಡಳಿ, ಮುಖ್ಯಶಿಕ್ಷಕರು, ಜಿಲ್ಲಾ ಪ್ರಾಂತ ಜವಾಬ್ದಾರಿ ಪ್ರತಿನಿಧಿಗಳು ಭಾಗವಹಿಸಿದ ಕಾರ್ಯಾಗಾರದಲ್ಲಿ ಶೈಕ್ಷಣಿಕ ಗುಣಮಟ್ಟದ ದೃಷ್ಟಿಯಿಂದ ವಿದ್ಯಾಭಾರತಿಯ ಕಾರ್ಯಚಟುವಟಿಕೆಗಳ ವಿವಿಧ ಮಜಲುಗಳ ಬಗ್ಗೆ ವಿಷಯ ಪ್ರಸ್ತಾವನೆ ನಡೆಯಿತು.

Highslide for Wordpress Plugin