ವಿದ್ಯಾರ್ಥಿ ಶಿಕ್ಷಕರಾದಾಗ ಪಡೆಯುವ ಆನಂದ, ಪ್ರೌಢಿಮೆ, ಜ್ಞಾನ, ಕೌಶಲಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿ ಅನುಷ್ಠಾನಕ್ಕೆ ತಂದಿರುವ ಯೋಜನೆಯೇ ’ಶಿಕ್ಷಕ-ಪರ್ವ’.
ಇದರ ಅನುಷ್ಠಾನ ಅವಧಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳಿಗೆ ವಿಭಿನ್ನ ಪಠ್ಯ ವಿಷಯಗಳ ಪರಿಕಲ್ಪನೆ ನೀಡಲಾಗಿತ್ತು. ಕಲಿಕಾ ಉಪಕರಣಗಳನ್ನು ತಯಾರುಗೊಳಿಸಿ, ಸಾಮೂಹಿಕ ಜಾಲತಾಣಗಳ ಸಹಕಾರದೊಂದಿಗೆ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ, ಪ್ರಶ್ನೋತ್ತರ, ಚರ್ಚಾ ವಿಧಾನ, ಪ್ರಯೋಗಾತ್ಮಕ ವಿಧಾನಗಳ ಮೂಲಕ ಚಿಕ್ಕ ತರಗತಿಯ ಮಕ್ಕಳಿಗೆ ತಮಗೆ ನೀಡಲಾದ ವಿಷಯ ಬೋಧನೆ ನಡೆಸಿಕೊಟ್ಟರು. ಶಾಲೆಯು ಈ ಹಿಂದಿನಿಂದಲೇ ಈ ಬಗೆಯ ಚಟುವಟಿಕೆಗಳಲ್ಲಿ ಮಕ್ಕಳನ್ನು ತೊಡಗಿಸಿಕೊಂಡಿರುವುದು ಇಲ್ಲಿ ಉಲ್ಲೇಖನೀಯವಾಗಿರುತ್ತದೆ.