8 ರಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ

ನಮ್ಮ ಮಗು ಕಲಿಯುತ್ತಿರುವ ವಿದ್ಯಾಸಂಸ್ಥೆಯ ಬಗ್ಗೆ ನಮಗೆ ಅಭಿಮಾನವಿರಬೇಕು – ಪ್ರೊ.ವಿ.ಜಿ.ಭಟ್, ಪ್ರಾಂಶುಪಾಲರು ವಿವೇಕಾನಂದ ಪದವಿ ಕಾಲೇಜು ಪುತ್ತೂರು

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ 8ನೇ ತರಗತಿಯಿಂದ 10 ನೇ ತರಗತಿಯವರೆಗಿನ ಪೋಷಕರ ಸಭೆ ನಡೆದಿದ್ದು ಅಭ್ಯಾಗತರಾಗಿ ಆಗಮಿಸಿದ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿ.ಜಿ.ಭಟ್ ಮಾತನಾಡಿ ಭಾಷಾ ಕಲಿಕೆ ಸೃಜನಶೀಲತೆಯಿಂದ ಕೂಡಿರಬೇಕು. ಮಕ್ಕಳಲ್ಲಿ ಸೃಜನಶೀಲತೆಯ ಪ್ರಜ್ಞೆ ಬೆಳೆಸಲು ಪೋಷಕರಾದ ನಾವು ಒಂದಷ್ಟು ವಿಚಾರಗಳನ್ನು ಕಲಿತುಕೊಳ್ಳಬೇಕು ಹಾಗೂ ಶಾಲೆಯ ಜೊತೆ ನಿರಂತರ ಸಂಪರ್ಕ ಹೊಂದಿರಬೇಕು ಎಂದರು.

ದೀಪ ಪ್ರಜ್ವಲನೆ, ಪುಷ್ಪಾರ್ಚನೆಯೊಂದಿಗೆ ಆರಂಭವಾದ ಸಭೆಯಲ್ಲಿ ಶಾಲಾ ವಾರ್ಷಿಕ ಗೀತೆಯನ್ನು ಪೋಷಕರಿಗೆ ಹೇಳಿಕೊಡಲಾಯಿತು. ಸರಸ್ವತಿ ವಂದನೆಯೊಂದಿಗೆ ಶುಭಾರಂಭವಾಗುವ ಶಾಲಾ ಪ್ರಾರ್ಥನೆಯ ಮಹತ್ವವನ್ನು ತಿಳಿಸಿದ ಶಿಕ್ಷಕ ವೃಂದ ಶಾಲಾ ಪ್ರಾರ್ಥನೆಯನ್ನು ಹಾಡಿದರು.ಪೋಷಕರಿಗೆ ಶಾಲಾ ವಾರ್ಷಿಕ ಯೋಜನೆಯನ್ನು ತಿಳಿಸಿದ ಅನಂತರ ಶಿಕ್ಷಕರ ಹಾಗೂ ಪೋಷಕರ ನಡುವೆ ಪಠ್ಯ ಹಾಗೂ ಪಠ್ಯಪೂರಕ ವಿಷಯಗಳ ಬಗ್ಗೆ ಸಂವಾದ ನಡೆಯಿತು.ಪ್ರಸಕ್ತ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘಕ್ಕೆ ತರಗತಿಯ ಪ್ರತಿ ವಿಭಾಗಗಳಿಂದ ಇಬ್ಬರು ಪೋಷಕ ಪ್ರತಿನಿಧಿಗಳು ಆಯ್ಕೆಯಾದರು.

ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಕೆದಿಲ ಸುಬ್ರಹ್ಮಣ್ಯ ಭಟ್ ಇವರು ಸಭಾಧ್ಯಕ್ಷತೆ ವಹಿಸಿ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಮಹತ್ತರ ಪಾತ್ರ ವಹಿಸುತ್ತಿದ್ದು ಪೋಷಕರು, ಶಿಕ್ಷಕರು, ಮಕ್ಕಳ ಜೊತೆ ಜೊತೆಗೆ ಶೈಕ್ಷಣಿಕ ಪ್ರಗತಿಯ ಮುನ್ನೋಟ ಹೊಂದಿ ಶಾಲಾ ಆಡಳಿತ ಮಂಡಳಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಸ್ವಾಗತ ಪ್ರಾಸ್ತಾವಿಕದೊಂದಿಗೆ ಮುಂದುವರಿದ ಪೋಷಕರ ಸಭೆ ಧನ್ಯವಾದ, ಶಾಂತಿ ಮಂತ್ರದೊಂದಿಗೆ ಸಂಪನ್ನಗೊಂಡಿತು.

Highslide for Wordpress Plugin