ಯೋಧರ ಸ್ಮರಣೆ ನಿರಂತರವಾಗಿ ಮಾಡುವುದೇ ನಿಜವಾದ ದೇಶಾಭಿಮಾನ – ಕು.ಹೇಮಸ್ವಾತಿ

ಉತ್ತಮ ಜೀವನ ಮೌಲ್ಯಗಳೊಂದಿಗೆ ಶಿಸ್ತನ್ನು ಅಳವಡಿಸಿಕೊಂಡು ಶಾಲಾ ದಿನಗಳಲ್ಲಿ ವಿವಿಧ ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಾಗ ಮುಂದೆ ದೇಶ ಸೇವೆಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಕಾರ್ಗಿಲ್ ವಿಜಯೋತ್ಸವವು ಒಂದೇ ದಿನಕ್ಕೆ ಸೀಮಿತವಾಗದೆ ಪ್ರತಿದಿನವು ನಮ್ಮ ದೇಶಕ್ಕಾಗಿ ಹುತಾತ್ಮರಾದ ಅನೇಕ ಸೈನಿಕರ ತ್ಯಾಗವನ್ನು ಸ್ಮರಿಸಿಕೊಂಡು ನಮ್ಮನ್ನು ನಾವು ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದೇ ನಿಜವಾದ ದೇಶಪ್ರೇಮ ಎಂದು ವಿವೇಕಾನಂದ ಪದವಿ ಕಾಲೇಜಿನ ಎನ್‌ಸಿಸಿ ವಿಭಾಗದ ಸೀನಿಯರ್ ಅಂಡರ್ ಆಫೀಸರ್ ಆಗಿರುವ ಕುಮಾರಿ ಹೇಮಸ್ವಾತಿ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಕಾರ್ಗಿಲ್ ವಿಜಯೋತ್ಸವ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸ್ಕೌಟ್ ವಿದ್ಯಾರ್ಥಿಗಳು ’ಪುಲ್ವಾಮ ದಾಳಿ’ಯ ಬಗೆಗಿನ ಕಿರು ಪ್ರಹಸನವನ್ನು ಪ್ರದರ್ಶಿಸಿದರು.

ಸ್ಕೌಟ್-ಗೈಡ್ ಕ್ಯಾಪ್ಟನ್‌ಗಳಾದ ಶ್ರೀಮತಿ ಹರಿಣಾಕ್ಷಿ, ಶ್ರೀಯುತ ರಾಜೇಶ್, ಶ್ರೀಯುತ ಕೀರ್ತನ್, ಪ್ರೌಢಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ, ಶಿಕ್ಷಕ ಬಂಧುಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಸಹಶಿಕ್ಷಕರಾದ ವೀಣಾಕುಮಾರಿ ಕಾರ್ಯಕ್ರಮವನ್ನು ನಿರೂಪಿಸಿದರು. ಪ್ರೌಢಶಾಲಾ ವಿದ್ಯಾರ್ಥಿಗಳಾದ ಕುಮಾರಿ ಧಾತ್ರಿ.ಆರ್.ರೈ ಕಾರ್ಗಿಲ್ ವಿಜಯೋತ್ಸವದ ಬಗ್ಗೆ ಮಾತನಾಡಿದರೆ, ಕುಮಾರಿ ಅವನಿ ಆತ್ಮ ನಿರ್ಭರ ಭಾರತ ಯೋಜನೆಯ ಮಾಹಿತಿ ತಿಳಿಸಿದರು.

Highslide for Wordpress Plugin