ಭಗವಂತನ ಗೀತೆ ಭಗವದ್ಗೀತೆ – ಶ್ರೀಯುತ ವಿಘ್ನೇಶ್ ಭಟ್

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಂಸ್ಕೃತ ಭಾಷಾ ಸಂಘ ‘ಸುರಭಿ’ಯಿಂದ ಆಯೋಜಿಸಲಾದ ಭಗವದ್ಗೀತಾ ಪಠನಾಭ್ಯಾಸದ ತರಗತಿ ಉದ್ಘಾಟನೆಗೆ ಅಭ್ಯಾಗತರಾಗಿ ಆಗಮಿಸಿದ ಶ್ರೀಯುತ ವಿಘ್ನೇಶ್ ಭಟ್ ಅವರು ಸಂಸ್ಕೃತ ಭಾಷೆ ಪ್ರಾಚೀನ ಹಾಗೂ ವೈಜ್ಞಾನಿಕ ಭಾಷೆಯಾಗಿದ್ದು ಎಳವೆಯಿಂದಲೇ ಸಂಸ್ಕೃತ ಭಾಷಾಭ್ಯಾಸ ಸಂಸ್ಕೃತಿ-ಸಂಸ್ಕಾರವನ್ನು ಮೂಡಿಸಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಶಾಲಾ ಭಗವದ್ಗೀತಾ ಪಠನಾಭ್ಯಾಸ ತರಗತಿಗೆ ಶ್ರೀಯುತರು ಮಾರ್ಗದರ್ಶಕರಾಗಿ ಆಗಮಿಸಿ ಭಗವದ್ಗೀತೆಯು ಭಗವಂತನ ಗೀತೆಯಾಗಿದ್ದು, ಬದುಕಿನ ಸಾರವನ್ನು ತಿಳಿಸುತ್ತದೆ. ಶಾಲೆಯಿಂದ ಎಲ್ಲಾ ಮಕ್ಕಳಿಗೂ ಭಗವದ್ಗೀತಾ ಪಠನಾಭ್ಯಾಸ ಮೂಡಿಸುತ್ತಿರುವುದು ಉತ್ತಮ ಸಂಗತಿ ಎಂದರು.

ದೀಪ ಪ್ರಜ್ವಲನೆ, ಪುಷ್ಪಾರ್ಚನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮವನ್ನು ಸಂಸ್ಕೃತ ಭಾಷಾ ಸಂಘದ ಸಂಯೋಜಕಿ ಶ್ರೀಮತಿ ಉಮಾಮೋಹನ್ ಸಂಘಟಿಸಿದರು.

Highslide for Wordpress Plugin