ಶಾಲೆಗೆ ಆಗಮಿಸಿದ ದಿಶಾ-ಭಾರತ ಆಜಾದಿ ಕಾ ಅಮೃತ ಮಹೋತ್ಸವ ರಥ

ದಿಶಾ-ಭಾರತ ಬೆಂಗಳೂರು ಆಯೋಜಿಸಲಾದ ಅನೇಕ ಕಾರ್ಯಕ್ರಮಗಳಲ್ಲಿ ಒಂದಾದ ಭಾರತದ ಅಮೃತ ಮಹೋತ್ಸವ ರಥ ಶಾಲಾ ಆವರಣಕ್ಕೆ ಆಗಮಿಸಿತು. ಪ್ರೌಢಶಾಲಾ ಮಕ್ಕಳು ಹಾಗೂ ಶಿಕ್ಷಕರ ಸಮ್ಮುಖದಲ್ಲಿ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ರಾಷ್ಟ್ರೀಯ ಧ್ವಜವನ್ನು ಹಾಕಿಸಿದರು.

ವೀರ ಪುರುಷರ ಜೀವನಗಾಥಾ ಚಿತ್ರಣ, ಸ್ವತಂತ್ರ ಮಹೋತ್ಸವ ಸ್ಪರ್ಧೆಗಳು, ಭಾರತೀಯ ಸಾಧನಾ ಪರಿಚಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಬಗ್ಗೆ ದಿಶಾಭಾರತ ಪ್ರಚಾರಕರೂ, ವೃತ್ತಿಯಲ್ಲಿ ಇಂಜಿನಿಯರ್ ಆದ ಶ್ರೀಯುತ ಸುನಿಲ್ ಕುಮಾರ್ ಮಾಹಿತಿ ನೀಡಿದರು. ಸಾಮೂಹಿಕ ಘೋಷಣೆಯೊಂದಿಗೆ ದಿಶಾ ಭಾರತದ ರಥಯಾತ್ರೆಗೆ ಮುಂದಿನ ಹಾದಿಗೆ ಶುಭ ಹಾರೈಸಲಾಯಿತು.

Highslide for Wordpress Plugin