ಶೈಕ್ಷಣಿಕ ಸಂದರ್ಶನ

ಶಾಲಾ ವೃತ್ತಿಕಾ ವಿಜ್ಞಾನ ಸಂಘದ ವತಿಯಿಂದ ಆಯೋಜಿಸಲಾದ ಶೈಕ್ಷಣಿಕ ಸಂದರ್ಶನದ ಅಂಗವಾಗಿ ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜಿಗೆ ಶಾಲಾ ಹತ್ತನೇ ತರಗತಿ ವಿದ್ಯಾರ್ಥಿಗಳು ಭೇಟಿ ನೀಡಿದರು. ಪಾಲಿಟೆಕ್ನಿಕ್ ಕಾಲೇಜು ಪ್ರಾಂಶುಪಾಲರಾದ ಚಂದ್ರಕುಮಾರ್ ಇವರು ಕಾಲೇಜು ಶೈಕ್ಷಣಿಕ ಸ್ವರೂಪ ಹಾಗೂ ಆಸಕ್ತಿದಾಯಕ ವಿಷಯ ಆಯ್ಕೆಗಳ ಬಗ್ಗೆ ಮಾಹಿತಿ ನೀಡಿದರು.

ಅನಂತರ ಕಾಲೇಜಿನ ಕಂಪ್ಯೂಟರ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಮತ್ತು ಅಟೋಮೊಬೈಲ್ ಪ್ರಯೋಗ ಶಾಲೆಗಳಿಗೆ ಭೇಟಿಯನ್ನಿತ್ತ ವಿದ್ಯಾರ್ಥಿಗಳಿಗೆ ಆಯಾ ವಿಭಾಗದ ಪ್ರಾಧ್ಯಾಪಕರು ಪ್ರಯೋಗಾಲಯದ ಪ್ರಾಯೋಗಿಕ ಅನ್ವಯಗಳ ಬಗ್ಗೆ ಮಾಹಿತಿ ನೀಡಿದರು.

Highslide for Wordpress Plugin