ನೂತನ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಭೆ

ದಿನಾಂಕ 19-9-2016 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನೂತನ ಆಡಳಿತ ಮಂಡಳಿ ಮತ್ತು ಶಿಕ್ಷಕರ ಸಭೆ ನಡೆಯಿತು. ಶಾಲೆಯ ನಿಕಟಪೂರ್ವ ಅಧ್ಯಕ್ಷರಾದ ಡಾ|ಕೃಷ್ಣ ಭಟ್ ಕೊಂಕೋಡಿ ಇವರು ಮಾತನಾಡಿ ಶಾಲೆಯ ಅಭಿವೃದ್ಧಿಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಜೊತೆಯಾಗಿ ಶ್ರಮಿಸಬೇಕು ಎಂದು ಹೇಳಿದರು.

img_20160919_165158

img_20160919_164532

img_20160919_164857

ಶಾಲೆಯ ನೂತನ ಸಂಚಾಲಕರಾಗಿ ಆಯ್ಕೆಯಾದ ವಿನೋದ್ ಕುಮಾರ್ ರೈ ಗುತ್ತು ಇವರು ಮಾತನಾಡುತ್ತಾ ವಿವೇಕಾನಂದ ವಿದ್ಯಾವರ್ಧಕ ಸಂಘ ನೀಡಿರುವ ಈ ಜವಾಬ್ದಾರಿಯನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸುತ್ತೇನೆ ಮತ್ತು ಅದಕ್ಕಾಗಿ ಎಲ್ಲರ ಸಹಕಾರವನ್ನು ನಿರೀಕ್ಷಿಸುತ್ತೇನೆ ಎಂದು ನುಡಿದರು. ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಯುತ ಅಚ್ಚುತ ನಾಯಕ್ ಶಾಲೆ ಸಮಾಜದ ಅವಿಭಾಜ್ಯ ಅಂಗ. ಶಾಲೆಯ ಚಟುವಟಿಕೆಗಳಲ್ಲಿ ಸಮಾಜವನ್ನು ಜೋಡಿಸಿಕೊಂಡು ಸಾಗಬೇಕು. ಶಾಲೆಯು ಸಮಾಜದೊಂದಿಗೆ ಉತ್ತಮ ಸಂಬಂಧ ಹೊಂದಿರಬೇಕು. ಆಗ ಶಾಲೆಯ ಶ್ರೇಯೋಭಿವೃದ್ಧಿ ಸಾಧ್ಯ ಎಂದು ನುಡಿದರು.

ವೇದಿಕೆಯಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಸಪ್ನಾ ರಾಜೇಶ್, ಶ್ರೀಮತಿ ರೂಪಲೇಖಾ, ಶ್ರೀಮತಿ ಭಾಗ್ಯಲಕ್ಷ್ಮೀ, ಶ್ರೀ ಶೇಖರ ನಾರಾವಿ, ವಸಂತ ಸುವರ್ಣ, ಶ್ರೀ ಗುರುವ ಉಪಸ್ಥಿತರಿದ್ದರು.

ಶಾಲೆಯ ಪ್ರಭಾರ ಮುಖ್ಯಗುರುಗಳಾದ ಲೀಲಾವತಿ ಮಾತಾಜಿ ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಶ್ರೀಮತಿ ನಳಿನಿ ಮಾತಾಜಿ ವಂದಿಸಿದರು.

Highslide for Wordpress Plugin