ಯೋಗಾಸನ ಸ್ಪರ್ಧೆ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಅಖಿಲ ಭಾರತ ಯೋಗ ಸಾಂಸ್ಕೃತಿಕ ಫೆಡರೇಶನ್ (ಆಯುಷ್) ಇವರು ಚೆನ್ನೈನಲ್ಲಿ ದಿನಾಂಕ 13-11-2016 ರಂದು ಅಖಿಲ ಭಾರತ ಯೋಗಾಸನ ಸ್ಪರ್ಧೆಯನ್ನು ಏರ್ಪಡಿಸಿದ್ದರು. ಸದ್ರಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಈ ಕೆಳಕಂಡ ಮಕ್ಕಳು ಅಖಿಲ ಭಾರತ ಶಾಲಾ ವಿಭಾಗದ ಯೋಗಾಸನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿರುತ್ತಾರೆ. ಅಲ್ಲದೆ ಶಾಲೆಗೆ ಸಮಗ್ರ ಪ್ರಶಸ್ತಿ ತಂದಿರುತ್ತಾರೆ.

20161118_131933

ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು :
ವೈಶಾಲಿ (ಕೃಷ್ಣಪ್ಪ ಗೌಡ ಮತ್ತು ಪಾರ್ವತಿ ದಂಪತಿಗಳ ಪುತ್ರಿ), ಹೇಮಶ್ರೀ- ( ಮುದಲಾಜೆ ನಿವಾಸಿ ಪುರುಷೋತ್ತಮ ಮತ್ತು ಕವಿತಾ ದಂಪತಿಗಳ ಪುತ್ರಿ) – ಪ್ರತೀಕ್ಷಾ ಆರ್ ರೈ (ಮದಕ ನಿವಾಸಿ ರಾಜೇಶ್ ರೈ ಮತ್ತು ಪ್ರಫುಲ್ಲ ಆರ್ ರೈ ದಂಪತಿಗಳ ಪುತ್ರಿ) ನವಮಿ (ಬಪ್ಪಳಿಗೆ ನಿವಾಸಿ ದಾಮೋದರ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ), ಭವಿಷ್ (ತಾರಿಗುಡ್ಡೆ ನಿವಾಸಿ ಬಾಲಕೃಷ್ಣ ನಾಯಕ್ ಮತ್ತು ವೀಣಾ ದಂಪತಿಗಳ ಪುತ್ರ), ರಾಜೇಶ್.ಎಂ (ಮುದಲಾಜೆ ನಿವಾಸಿ ಬಾಬು ಗೌಡ ಮತ್ತು ರೇವತಿ ಎಂ ದಂಪತಿಗಳ ಪುತ್ರ), ರಿತೇಶ್ (ಬಪ್ಪಳಿಗೆ ನಿವಾಸಿಕೃಷ್ಣ ಮತ್ತು ಜ್ಯೋತಿಲತಾ ದಂಪತಿಗಳ ಪುತ್ರ) ಭರತ್ (ಪುಷ್ಪರಾಜ್ ಮತ್ತು ವಾರಿಜ ದಂಪತಿಗಳ ಪುತ್ರ) ಇವರಿಗೆ ವಿವೇಕಾನಂದ ವಿದ್ಯಾವರ್ಧಕ ಸಂಘದ ಯೋಗ ಸಂಯೋಜಕರಾದ ಶ್ರೀ ಬಿ. ಜಯರಾಮ್ ಮಾರ್ಗದರ್ಶನ ನೀಡಿರುತ್ತಾರೆ. ವಿಜೇತರಿಗೆ ಶಾಲಾ ಮುಖ್ಯೋಪಾಧ್ಯಾಯರು, ಆಡಳಿತ ಮಂಡಳಿಯವರು ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿಗಳು ಶುಭ ಹಾರೈಸಿರುತ್ತಾರೆ.

Highslide for Wordpress Plugin