ವಿವೇಕಾನಂದ ಜಯಂತಿ ಆಚರಣೆ

ವಿವೇಕಾನಂದರ 154 ನೇ ಜನ್ಮ ದಿನಾಚರಣೆ ಗುರುವಾರ ನಡೆಯಿತು. ಶಾಲಾ ಸಹಶಿಕ್ಷಕಿಯಾದ ಶ್ರೀಮತಿ ವಿದ್ಯಾ ಅನಿಲ್ ರವರು ದೀಪ ಪ್ರಜ್ವಲಿಸಿ, ಎಲ್ಲಾ ಶಿಕ್ಷಕರು ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಫಾರ್ಚನೆಗೈಯುವುದರ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಪ್ರಾಥಮಿಕ ಮುಖ್ಯಗುರುಗಳಾದ ನಳಿನಿ ಮಾತಾಜಿ, ಚಿತ್ರಕಲಾಶಿಕ್ಷಕರಾದ ಶ್ರೀ ರುಕ್ಮಯ, ಸಹಶಿಕ್ಷಕರಾದ ನಮಿತಾ ಹಾಗೂ ಮಮತಾ ಉಪಸ್ಥಿತರಿದ್ದರು. ವಿವೇಕಾನಂದರ ಬಾಲ್ಯ ಹಾಗೂ ಶಿಕ್ಷಣದ ಕುರಿತಾಗಿ ವಿದ್ಯಾರ್ಥಿಗಳು ಭಾಷಣ ಮಾಡಿದರು. 1 ನೇ ತರಗತಿಯ ಪುಟಾಣಿಗಳು ವಿವೇಕಾನಂದರ ಉಡುಗೆ ತೊಟ್ಟು ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

vkms1

vkms2

vkms3

ವಿವೇಕಾನಂದರ ಜೀವನದ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕೆಂದು ಮಮತಾ ಮಾತಾಜಿ ನುಡಿದರು. ಪ್ರೌಢಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆಯವರು ಎಲ್ಲಾ ಮಕ್ಕಳಿಗೂ ವಿವೇಕ ಜಯಂತಿಯ ಪ್ರಯುಕ್ತ ಶುಭ ಹಾರೈಸಿದರು. ಕಾರ್ಯಕ್ರಮವನ್ನು ಶಿಕ್ಷಕರಾದ ರಾಜೇಶ್ ಸ್ವಾಗತಿಸಿ, ಹರೀಶ್ ವಂದಿಸಿ, ಲಾವಣ್ಯ ಮಾತಾಜಿ ನಿರೂಪಿಸಿದರು.

Highslide for Wordpress Plugin