ವಿವೇಕಾನಂದ ಕಾಲೇಜಿನ ’ಪಾಂಚಜನ್ಯ’ ಆಕಾಶವಾಣಿ ಕೇಂದ್ರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ’ಬಭ್ರುವಾಹನ’ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.

ಹಿಮ್ಮೇಳದಲ್ಲಿ – ಭಾಗವತರಾಗಿ ಚಿನ್ಮಯ ಕಲ್ಲಡ್ಕ, ಚೆಂಡೆವಾದನದಲ್ಲಿ ಮುರಳೀಧರ ಕಲ್ಲೂರಾಯ, ಮದ್ದಳೆಯಲ್ಲಿ ಅಚಿಂತ್ಯ ಕೃಷ್ಣ 8ನೇ ತರಗತಿ ಸಹಕರಿಸಿದರು. ಮುಮ್ಮೇಳದಲ್ಲಿ ಅರ್ಜುನನಾಗಿ – ಪ್ರಣಮ್ಯ 7ನೇ ತರಗತಿ, ಹಂಸಧ್ವಜನಾಗಿ – ಭವಿಷ್ 6ನೇ ತರಗತಿ, ಬಭ್ರುವಾಹನನಾಗಿ – ಶ್ರೀಹರಿ – 7ನೇ ತರಗತಿ, ಕೃಷ್ಣನಾಗಿ ಆದಿತ್ಯನಾರಾಯಣ 6ನೇ ತರಗತಿ, ಚಿತ್ರಾಂಗದೆಯಾಗಿ ಕು. ಧಾತ್ರಿ ಆರ್ ರೈ 5ನೇ ತರಗತಿ, ಮಂತ್ರಿ ಮತ್ತು ವೃಷಕೇತುವಾಗಿ- ಮಿಥುನ್ ವಿ.ಕೆ 5ನೇ ತರಗತಿ, ಚಿತ್ರಕೇತುವಾಗಿ ಪ್ರಣವ 5ನೇ ತರಗತಿ, ಪ್ರದ್ಯುಮ್ನ ಮತ್ತು ಚಿತ್ರರಥನಾಗಿ- ಯತೀನ್ 7ನೇ ತರಗತಿ ಸಹಕರಿಸಿದರು.
ಈ ಕಥಾಭಾಗದ ನಿರ್ದೇಶಕರಾಗಿ ಧೀಶಕ್ತಿ ಮಹಿಳಾ ಯಕ್ಷ ಬಳಗ ಇದರ ಸಂಚಾಲಕಿ ಶ್ರೀಮತಿ ಪದ್ಮಾ ಕೆ. ಆರ್. ಆಚಾರ್ ಸಹಕರಿಸಿದರು. ಕಾರ್ಯಕ್ರಮವು ಶಾಲಾ ಸಹಶಿಕ್ಷಕಿ ಶ್ರೀಮತಿ ವೀಣಾ ಸರಸ್ವತಿ ನಿಡ್ವಣ್ಣಾಯ ಮತ್ತು ಮುಖ್ಯೋಪಾಧ್ಯಾಯಿನಿ ಆಶಾ ಬೆಳ್ಳಾರೆ ಮತ್ತು ಶಿಕ್ಷಕ ವೃಂದದವರ ಪ್ರೋತ್ಸಾಹದೊಂದಿಗೆ ನಡೆಯಿತು.