’ಚಟುವಟಿಕೆಯಿಂದ ಕೂಡಿದ ಕಲಿಕೆ ಶಾಶ್ವತ ಕಲಿಕೆ’ – ಸತ್ಯಮೂರ್ತಿ ಹೆಬ್ಬಾರ್
Tuesday, July 26th, 2022ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಗಣಿತಕ್ಕೆ ಸಂಬಂಧಿಸಿದ ಚಟುವಟಿಕಾ ಕಾರ್ಯಗಾರದಲ್ಲಿ ವಿವಿಧ ಮಾದರಿಗಳನ್ನು ಪ್ರದರ್ಶಿಸುತ್ತಾ ಗಣಿತ ತರಗತಿಯು ಚಟುವಟಿಕೆಯುಕ್ತವಾಗಿ, ಇದ್ದಾಗ ಮಕ್ಕಳು ಕಲಿಕೆಯ ಕಡೆ ಹೆಚ್ಚಿನ ಗಮನ ಕೊಡುತ್ತಾರೆ. ಸಣ್ಣ ಪರಿಕಲ್ಪನೆಯನ್ನು ವಿವಿಧ ಮಜಲುಗಳಲ್ಲಿ ಆಲೋಚಿಸಿ ಅಭ್ಯಾಸ ನಡೆಸಿದಾಗ ಗಣಿತವೆಂದರೆ ಕಠಿಣವಲ್ಲ. ಅದು ಸಂತಸದ ರಸದೂಟ ಎಂದೆನಿಸುತ್ತದೆಯೆಂದು ಸತ್ಯಮೂರ್ತಿ ಹೆಬ್ಬಾರ್ ನುಡಿದರು. ಪಠ್ಯವಿಷಯಕ್ಕೆ ಸಂಬಂಧಿಸಿದಂತೆ ಪೈಥಾಗೊರಸ್ ಪ್ರಮೇಯಕ್ಕೆ ಸಂಬಂಧಿಸಿದ ಮಾದರಿ, ಥೇಲ್ಸ್ ಪ್ರಮೇಯ ಆಧಾರಿತ ಕಲಿಕಾ ಉಪಕರಣ, ಸ್ಪರ್ಶಕಗಳ ರಚನೆ, ತ್ರಿಕೋನಮಿತಿ ಅನುಪಾತಗಳು, ನಿರ್ದಿಷ್ಟ ಕೋನಗಳಿಗೆ ತ್ರಿಕೋನಮಿತಿ ಬೆಲೆ […]
















































