
ಸಾಂಸ್ಕೃತಿಕ ಸ್ಪರ್ಧೆ- ಶಾಲೆಗೆ ಹಲವು ಪ್ರಶಸ್ತಿ
Monday, November 20th, 2023ಸರೋಜಿನಿ ಮಧುಸೂದನ ಕುಶೆ, ಅತ್ತಾವರ, ಮಂಗಳೂರು ಇಲ್ಲಿನಡೆದ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾಮಟ್ಟದ ಕಲೋತ್ಸವ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಬ್ ಜೂನಿಯರ್ ವಿಭಾಗದ ಚಿತ್ರಕಲೆಯಲ್ಲಿ ಶ್ರುತಿ ಎಸ್ ನಾಯಕ್ ತೃತೀಯ ಹಾಗೂ ಸಬ್ ಜೂನಿಯರ್ ವಿಭಾಗದ ಭಜನೆಯಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ, ಮತ್ತು ಜನಪದ ನೃತ್ಯ ಸ್ಪರ್ಧೆಯಲ್ಲಿ ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಜೂನಿಯರ್ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. […]