ಭಜನಾ ಕಾರ್ಯಕ್ರಮ

ಭಜನಾ ಕಾರ್ಯಕ್ರಮ

Wednesday, January 5th, 2022

ವಿದ್ಯಾರ್ಥಿಗಳು ಕೆದಿಲ ಗ್ರಾಮದಲ್ಲಿರುವ ಶ್ರೀಕೃಷ್ಣ ಭಜನಾ ಮಂದಿರದಲ್ಲಿ ದಿನಾಂಕ 25-12-2021 ಮತ್ತು ಶ್ರೀರಾಮ ಭಜನಾ ಮಂದಿರದಲ್ಲಿ 1-1-2022 ರಂದು ನಡೆದ ಶನೀಶ್ವರ ಪೂಜೆಯ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. 40 ವಿದ್ಯಾರ್ಥಿಗಳು, 2 ಶಿಕ್ಷಕರೂ ಭಜನೆಯಲ್ಲಿ ತೊಡಗಿಸಿಕೊಂಡಿದ್ದರು. ಶಿಸ್ತು ಬದ್ಧವಾಗಿ ಭಜನೆ ಹಾಡಿ ಅಲ್ಲಿ ನೆರೆದ ಭಕ್ತ ಬಾಂಧವರ ಗಮನ ಸೆಳೆದರು.

ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

ಇನ್‌ಸ್ಪೈರ್ ಅವಾರ್ಡ್‌ಗೆ ಆಯ್ಕೆ

Thursday, December 30th, 2021

ಡಿಪಾರ್ಟ್‌ಮೆಂಟ್ ಸೈನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಇನ್ನೋವೇಶನ್ ಫೌಂಡೇಶನ್ ಆಫ್ ಇಂಡಿಯಾ ಇದರ ವತಿಯಿಂದ ಇನ್‌ಸ್ಪೈರ್ ಅವಾರ್ಡ್ ಮಾನಕ್ 2021-22 ಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9 ನೇ ತರಗತಿಯ ವಿದ್ಯಾರ್ಥಿಗಳಾದ ಚಿನ್ಮಯ ಮಜಿ ಮತ್ತು ತನ್ಮಯ್ ಕೃಷ್ಣ ಆಯ್ಕೆಯಾಗಿದ್ದಾರೆ.  

ಸದೃಢ ಭಾರತ

Friday, December 17th, 2021
ಪಠ್ಯಪೂರಕ ಚಟುವಟಿಕಾ ವಿಶೇಷ ತರಗತಿಗಳ ಆರಂಭ

ಪಠ್ಯಪೂರಕ ಚಟುವಟಿಕಾ ವಿಶೇಷ ತರಗತಿಗಳ ಆರಂಭ

Thursday, December 16th, 2021

ಪ್ರಸಕ್ತ ಶೈಕ್ಷಣಿಕ ವರ್ಷದ ತರಗತಿಗಳು ಪುನರಾರಂಭವಾಗಿದ್ದು ಶಿಕ್ಷಕರಿಗೂ, ಪೋಷಕರಿಗೂ ಸಮಾಧಾನ ತಂದಿದೆ. ಮನೆಯಲ್ಲೂ, ಶಾಲೆಯಲ್ಲೂ ಮಕ್ಕಳಿಗೆ ಪೂರಕವಾದ ಆರೋಗ್ಯಕರ, ಸ್ವಚ್ಚ ಕಲಿಕಾ ವಾತಾವರಣವನ್ನು ಪುನನಿರ್ಮಾಣ ಮಾಡುವಲ್ಲಿ ಪೋಷಕರ, ಶಿಕ್ಷಕರ ಹಾಗೂ ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು. ಶಿಕ್ಷಣದೊಂದಿಗೆ ಆಸಕ್ತ ಮಕ್ಕಳಿಗೆ ವಿಶೇಷ ತರಗತಿಗಳಾದ ಭರತನಾಟ್ಯ, ಸಂಗೀತ ಚಿತ್ರಕಲೆ, ಯಕ್ಷಗಾನ, ಕರಾಟೆ ಮುಂತಾದವುಗಳು ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಬೆಳೆಸಲು ಸಹಕಾರಿಯಾಗಿದೆ ಎಂದು ವಿದುಷಿ ಪ್ರೀತಿಕಲಾ – ನಿರ್ದೇಶಕಿ ಮೂಕಾಂಬಿಕಾ ನೃತ್ಯ ಕಲಾ ಶಾಲೆ ಪುತ್ತೂರು ತಿಳಿಸಿದರು. ಶಾಲೆಯಲ್ಲಿ ವಿದ್ವಾನ್ ದೀಪಕ್ ಕುಮಾರ್, […]

ದೌರ್ಜನ್ಯ ಮುಕ್ತಿ - ಕಾರ್ಯಕ್ರಮ

ದೌರ್ಜನ್ಯ ಮುಕ್ತಿ – ಕಾರ್ಯಕ್ರಮ

Thursday, December 16th, 2021

ಕರ್ನಾಟಕ ರಾಜ್ಯ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಕರ್ನಾಟಕ ಹೆಲ್ತ್ ಪ್ರಮೋಷನ್ ಟ್ರಸ್ಟ್ ಸಹಯೋಗದೊಂದಿಗೆ ಏರ್ಪಡಿಸಲಾದ ಉಪಗ್ರಹ ಆಧಾರಿತ ತರಬೇತಿ ’ದೌರ್ಜನ್ಯ ಮುಕ್ತಿ’ ಕಾರ್ಯವನ್ನು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ವೀಕ್ಷಿಸಿ, ಕಾರ್ಯಕ್ರಮದಲ್ಲಿ ಹದಿಹರೆಯ ಮತ್ತು ಯುವ ಸಮುದಾಯದ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳಲ್ಲಿ ದೌರ್ಜನ್ಯದ ಕುರಿತು ತಿಳುವಳಿಕೆ ಹಾಗೂ ದೌರ್ಜನ್ಯದಿಂದ ಮುಕ್ತರಾಗುವ ಸಾಮರ್ಥ್ಯವನ್ನು ಬೆಳೆಸುವ ಉದ್ದೇಶವನ್ನು ತಿಳಿದುಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯಗುರುಗಳು, ಶಿಕ್ಷಕವೃಂದದವರು ಉಪಸ್ಥಿತರಿದ್ದರು.

ಶ್ರದ್ಧಾಂಜಲಿ ಸಭೆ

ಶ್ರದ್ಧಾಂಜಲಿ ಸಭೆ

Tuesday, December 7th, 2021

ಪುತ್ತೂರು ಅಲ್ಲದೆ ಹತ್ತೂರಿಗೂ ಪರಿಚಿತರಾದ ಶ್ರೀ ರಾಂ ಭಟ್ ಅವರ ಸಾರ್ಥಕ್ಯದ ಬದುಕು ರಾಜಕೀಯ, ಶೈಕ್ಷಣಿಕ, ಸಾಮಾಜಿಕ ಮುಂತಾದ ಕ್ಷೇತ್ರಗಳಲ್ಲಿ ಪರಿಣಾಮಕಾರಿ ಆಡಳಿತಕ್ಕೆ ಸಾಕ್ಷಿಯಾಗಿದೆ. ಪುತ್ತೂರಿನ ಶೈಕ್ಷಣಿಕ ಮೈಲುಗಲ್ಲಾದ ವಿವೇಕಾನಂದ ವಿದ್ಯಾವರ್ಧಕ ಸಂಘವನ್ನು ಮುನ್ನಡೆಸಿದ ಹಿರಿಯರಿವರು. ಇಂದು ನಮ್ಮನ್ನಗಲಿದ ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ- ಶ್ರೀ ವಸಂತ ಸುವರ್ಣ – ಸಂಚಾಲಕರು ವಿವೇಕಾನಂದ ಕನ್ನಡ ಶಾಲೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಶ್ರೀಯುತ ರಾಂ ಭಟ್ ಅವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿ ಖಜಾಂಚಿಯಾದ ಶ್ರೀಯುತ […]

ವಿದ್ಯಾಧ್ವನಿ ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

ವಿದ್ಯಾಧ್ವನಿ ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

Tuesday, December 7th, 2021

ವಿವೇಕಾನಂದ ಕನ್ನಡ ಶಾಲೆಯಲ್ಲಿ 1 ರಿಂದ 5 ನೇ ತರಗತಿಯ ಮಕ್ಕಳ ವಿಭಾಗಶಃ ಪೋಷಕರ ಸಭೆಯು ನಡೆಯಿತು. ಸಭೆಯಲ್ಲಿ ರಜಾ ನಂತರದ ಮಕ್ಕಳ ಶಾಲಾ ಮತ್ತು ಮನೆಯ ಕಾರ್ಯಚಟುವಟಿಕೆಗಳ ಬಗ್ಗೆ ಸಂವಾದ ನಡೆಯಿತು. ಕಲಿಕಾ ಚಟುವಟಿಕೆಗಳಿಗೆ ಇದೀಘ ಒಂದು ಬಗೆಯ ವೇಗ ದೊರೆತಿದ್ದು ಮಕ್ಕಳು ಹಾಗೂ ಪೋಷಕರು ಈ ದಿಶೆಯಲ್ಲಿ ಸಂತೋಷ ವ್ಯಕ್ತಪಡಿಸಿದರು. ವಿಷಯವಾರು ಶಿಕ್ಷಕರು ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ ಧಾರವಾಡದಿಂದ ಶಾಲೆಗೆ ನೀಡುತ್ತಿರುವ ಕಲಿಕಾ-ಪೂರಕ ಸಾಮಾಗ್ರಿಗಳ ಚಟುವಟಿಕೆಗಳನ್ನು ನಡೆಸುತ್ತಿರುವ ಬಗ್ಗೆ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು. […]

’ವಿವೇಕ ಸಂಗಮ’ - ಹಿರಿಯ ವಿದ್ಯಾರ್ಥಿ ಒಕ್ಕೂಟದಿಂದ ಹತ್ತನೇ ತರಗತಿ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮಾರ್ಗದರ್ಶನ

’ವಿವೇಕ ಸಂಗಮ’ – ಹಿರಿಯ ವಿದ್ಯಾರ್ಥಿ ಒಕ್ಕೂಟದಿಂದ ಹತ್ತನೇ ತರಗತಿ ಮಕ್ಕಳಿಗೆ ವೃತ್ತಿಪರ ಶಿಕ್ಷಣ ಮಾರ್ಗದರ್ಶನ

Saturday, December 4th, 2021

ವಿದ್ಯಾರ್ಥಿ ಬದುಕಿನಲ್ಲಿ ನಾವು ಪ್ರೌಢಶಾಲಾ ಹಂತದಲ್ಲಿ ವೃತ್ತಿಪರ ಗುರಿ ಹೊಂದಬೇಕು. ಈ ಗುರಿ ಸಾಧನೆಗಾಗಿ ನಿರಂತರ ಪ್ರಯತ್ನ ನಡೆಯಬೇಕು. ಆ ಬಗ್ಗೆ ಸರಿಯಾದ ಮತ್ತು ಸ್ಪಷ್ಟವಾದ ಮಾಹಿತಿಯ ಅಗತ್ಯವಿದೆ. – ಪೃಥ್ವಿನಾರಾಯಣ – ಹಿರಿಯ ವಿದ್ಯಾರ್ಥಿ ವಿವೇಕಾನಂದ ಕನ್ನಡ ಶಾಲೆಯ 10 ನೇ ತರಗತಿ ಮಕ್ಕಳಿಗೆ ಈ ದಿಶೆಯಲ್ಲಿ ವಿಭಿನ್ನ ವೃತ್ತಿಯಲ್ಲಿರುವ ಶಾಲಾ ಹಿರಿಯ ವಿದ್ಯಾರ್ಥಿಗಳು ವೃತ್ತಿಪರಶಿಕ್ಷಣದ ಮಾರ್ಗದರ್ಶನ ನೀಡಿದರು. ಸ್ವ ಉದ್ಯೋಗದ ಬಗ್ಗೆ ಜಿಮ್ ತರಬೇತುದಾರರಾದ ಆದರ್ಶ ಸುವರ್ಣ, ಚಾರ್ಟಡ್ ಅಕೌಂಟನ್ಸಿಯ ಬಗ್ಗೆ ಕಾರ್ತಿಕ್ ಎಸ್, […]

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE ) - ತರಬೇತಿ

ರಾಷ್ಟ್ರೀಯ ಪ್ರತಿಭಾನ್ವೇಷಣೆ ಪರೀಕ್ಷೆ (NTSE ) – ತರಬೇತಿ

Tuesday, November 30th, 2021

“ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆ ಬರೆಯಲು ಸಿಗುತ್ತಿರುವ ತರಬೇತಿ ಹಾಗೂ ಅವಕಾಶವು ಮಕ್ಕಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಜ್ಞಾನವನ್ನು ಹೆಚ್ಚಿಸಲು ಸಹಕಾರಿಯಾಗಲಿವೆ. ” – ಶ್ರೀ ಸತೀಶ್ ಭಟ್ ಬಿಳಿನೆಲೆ ಮುಖ್ಯಶಿಕ್ಷಕರು ಶ್ರೀರಾಮಕುಂಜೇಶ್ವರ ಪ್ರೌಢಶಾಲೆ. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ NTSE ಪರೀಕ್ಷೆಗೆ ಸಂಬಂಧಿಸಿದ ಮಾಹಿತಿ ನೀಡಿದ ಶ್ರೀಯುತರು ಈ ಪರೀಕ್ಷೆ ಬರೆಯಲಿರುವ ಪ್ರತಿ ಒಬ್ಬ ವಿದ್ಯಾರ್ಥಿ ತನ್ನ ಸಮಯ ಮತ್ತು ಕಲಿಕಾ ಸಾಮರ್ಥ್ಯವನ್ನು ತಯಾರಿಯ ಕಡೆ ನೀಡಬೇಕು ಎಂದರು.

’ಸಂವಿಧಾನ ದಿನಾಚರಣೆ’

’ಸಂವಿಧಾನ ದಿನಾಚರಣೆ’

Friday, November 26th, 2021

ಒಂದು ಮನೆಯು ಸುಸೂತ್ರವಾಗಿ ನಡೆಯಲು ಕೆಲವಾರು ಪ್ರಗತಿಪರ ನಿಯಮಗಳಿವೆ. ಒಂದು ಶಾಲೆ ಉತ್ತಮವಾಗಿ ನಡೆಯಲು ಹಲವಾರು ಶಾಲಾ ನಿಯಮಗಳಿಗೆ ಬದ್ಧರಾಗಿ ನಡೆಯಬೇಕಾಗುತ್ತದೆ. ಅದೇ ರೀತಿ ನಮ್ಮೀ ಭಾರತ ದೇಶ ವ್ಯವಸ್ಥಿತ ಹಾಗೂ ಅಭಿವೃದ್ಧಿಯತ್ತ ಮುನ್ನಡೆಯಲು ನಮ್ಮ ಸಂವಿಧಾನವೇ ನಮಗೆ ಕೈಮರವಾಗಿದೆ. ಇದು ಸರಕಾರ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಮೂಡಿಸುವ ಸೇತು ಆಗಿದೆ. – ತನ್ಮಯ್ ಕೃಷ್ಣ – ವಿದ್ಯಾರ್ಥಿ ನವಂಬರ್ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನ. ಡಾ. ಬಿ.ಆರ್ ಅಂಬೇಡ್ಕರ್ […]

ಭಾರತ್ ಸ್ಕೌಟ್ಸ್-ಗೈಡ್ಸ್, ಕರ್ನಾಟಕ-ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ಭಾರತ್ ಸ್ಕೌಟ್ಸ್-ಗೈಡ್ಸ್, ಕರ್ನಾಟಕ-ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

Tuesday, November 23rd, 2021

2020-21 ನೇ ಸಾಲಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ ಕರ್ನಾಟಕ ಇದರ ವತಿಯಿಂದ ಜರುಗಿದ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರವು ಬೆಥನಿ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದಿದ್ದು ಇದರಲ್ಲಿ ಉತ್ತೀರ್ಣರಾಗಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಮಿಥುನ್ ವಿ.ಕೆ (ಬಲ್ನಾಡು ನಿವಾಸಿ ಕೃಷ್ಣಪ್ಪಗೌಡ ಮತ್ತು ಹರಿಣಾಕ್ಷಿ ದಂಪತಿಗಳ ಪುತ್ರ), ಅರ್ಚನಾ ಪಿ.ಕೆ ( ನಗರ ನಿವಾಸಿ ಪ್ರಭಾಕರ ಮತ್ತು ಲೀಲಾವತಿ ದಂಪತಿಗಳ ಪುತ್ರಿ), ಸಂಹಿತಾ ಶರ್ಮ ಬಿ.ಎಸ್ (ಸಾಲ್ಮರ ನಿವಾಸಿ ರಾಜೇಶ್ ಶರ್ಮ […]

ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ

ನೂತನ ಆಡಳಿತ ಮಂಡಳಿ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ

Tuesday, November 23rd, 2021

ವಿವೇಕಾನಂದ ವಿದ್ಯಾವರ್ಧಕ ಸಂಘ ನಡೆಸುತ್ತಿರುವ ವಿದ್ಯಾಸಂಸ್ಥೆಗಳ ಹೆಗ್ಗುರುತು ಇಲ್ಲಿ ನೀಡುವ ಗುಣಾತ್ಮಕ ಶಿಕ್ಷಣವಾಗಬೇಕು. ಈ ದಿಶೆಯಲ್ಲಿ ಸೇವಾ ಮನೋಭಾವದೊಂದಿಗೆ ವಿವಿಧ ಕ್ಷೇತ್ರಗಳಲ್ಲಿ ನುರಿತರಾದ ಸಾಮಾಜಿಕವಾಗಿ ಗುರುತಿಸಲ್ಪಡುತ್ತಿರುವ ವ್ಯಕ್ತಿಗಳು ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಿಕ್ಷಕರ ನಿತ್ಯ-ನಿರಂತರ ಶ್ರಮ ಹಾಗೂ ಪೋಷಕರ ಸಹಕಾರದೊಂದಿಗೆ ನಮ್ಮೀ ಶೈಕ್ಷಣಿಕಗುರಿ ಸಾಫಲ್ಯ ಹೊಂದಬೇಕು ಎಂದು ಡಾ. ಕೃಷ್ಣ ಭಟ್‌ಕೊಂಕೋಡಿ ಹೇಳಿದರು. ವಿವೇಕಾನಂದ ಕನ್ನಡ ಶಾಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದ ನೂತನ ಆಡಳಿತ ಮಂಡಳಿ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮದ ಅಧ್ಯಕ್ಷ ಸ್ಥಾನ ವಹಿಸಿ ಶ್ರೀಯುತರು […]

’ಕಲಾ ಸಾನಿಧ್ಯ’ - ಚಿತ್ರಕಲಾ ವೇದಿಕೆಯಿಂದ ಜರುಗಿದ ಕಲಾ ಪ್ರದರ್ಶನ

’ಕಲಾ ಸಾನಿಧ್ಯ’ – ಚಿತ್ರಕಲಾ ವೇದಿಕೆಯಿಂದ ಜರುಗಿದ ಕಲಾ ಪ್ರದರ್ಶನ

Tuesday, November 23rd, 2021

ವಿವೇಕಾನಂದ ಕನ್ನಡ ಶಾಲೆಯಲ್ಲಿ ’ಕಲಾ ಸಾನಿಧ್ಯ’ಚಿತ್ರಕಲಾ ವೇದಿಕೆಯಿಂದ ಮಕ್ಕಳ ರಜಾ ಸಮಯದ ಕಾರ್ಯಚಟುವಟಿಕೆಗಳು ಪ್ರದರ್ಶನಗೊಂಡವು ಮಕ್ಕಳ ತರಗತಿ ಶಿಕ್ಷಕರು ಹಾಗೂ ಚಿತ್ರಕಲಾ ಶಿಕ್ಷಕರ ಮಾರ್ಗದರ್ಶನದಂತೆ ಚಿತ್ರರಚನೆ, ಪೇಪರ್‌ಕ್ರಾಪ್ಟ್, ಕಸದಿಂದ ರಸ, ಹೊಲಿಗೆ ಮುಂತಾದವುಗಳು ತೊಡಗಿಕೊಂಡಿದ್ದ ಮಕ್ಕಳ ಕಲಾ ಪ್ರದರ್ಶನವನ್ನು ವೀಕ್ಷಿಸಿದ ಪೋಷಕರು ಹರ್ಷ ವ್ಯಕ್ತಪಡಿಸಿದರು. ಮಕ್ಕಳ ರಜಾ ಕಾರ್ಯ ನೋಡಿ ಖುಷಿಯಾಯಿತು. ರಜಾ ದಿನಗಳಲ್ಲಿ ಪಠ್ಯ ಕಲಿಕೆಯೊಂದಿಗೆ ಕರಕುಶಲ ಕಲೆ, ಚಿತ್ರರಚನೆಯಲ್ಲಿ ನನ್ನ ಮಕ್ಕಳು ತೊಡಗಿದ್ದು ನೋಡಿ ಸಮಾಧಾನವೆನಿಸಿತ್ತು. ಇಂದು ಈ ರೀತಿ ಅವರ ಕಾರ್ಯಗಳು ಪ್ರದರ್ಶನಗೊಳ್ಳುತ್ತಿರುವುದು […]

ವಿದ್ಯಾಧ್ವನಿ - ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

ವಿದ್ಯಾಧ್ವನಿ – ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

Tuesday, November 23rd, 2021

ವಿವೇಕಾನಂದ ಕನ್ನಡ ಶಾಲೆಯಲ್ಲಿ 6 ರಿಂದ 9 ನೇ ತರಗತಿಯ ಮಕ್ಕಳ ಪೋಷಕರ ಸಭೆಯನ್ನು ವಿಭಾಗಶಃ ಆಯಾ ತರಗತಿಗಳಲ್ಲಿ ನಡೆಯಿತು. ಪ್ರಸ್ತುತ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆ, ಮನೆ ಕಾರ್ಯಗಳನ್ನು ಮಾಡಲು ನೀಡುತ್ತಿರುವ ಸಮಯ ಶಾಲಾ ಪಠ್ಯಗಳಲ್ಲಿ ಅವರಿಗೆ ನೀಡುತ್ತಿರುವ ಸಮಯ, ಶಾಲಾ ಪಠ್ಯಗಳಲ್ಲಿ ಅವರಿಗೆ ಆಗುತ್ತಿರುವ ತೊಡಕುಗಳ ಬಗ್ಗೆ ಪೋಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅನಂತರ ಅಮಧ್ಯಾವಧಿ ಪರೀಕ್ಷೆಯ ಉತ್ತರ ಪತ್ರಿಕೆ ಹಾಗೂ ಪ್ರಗತಿ ಪತ್ರವನ್ನು ಪೋಷಕರಿಗೆ ನೀಡಲಾಯಿತು. ಶಾಲಾ ದಿನಗಳು ಪುನರಾರಂಭಗೊಂಡು, ಶೈಕ್ಷಣಿಕ ವಿಚಾರಗಳು […]

ಕನಕ ಜಯಂತಿ ಆಚರಣೆ

ಕನಕ ಜಯಂತಿ ಆಚರಣೆ

Monday, November 22nd, 2021

“ದಾಸವರೇಣ್ಯರಲ್ಲಿ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿರುವವರು ಕನಕದಾಸರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಹಾಗೂ ಮುಂಡಿಗೆಗಳು ಸಂಗೀತ ಪ್ರಪಂಚದ ಅಮೋಘರತ್ನಗಳಾಗಿವೆ” ಕುಮಾರಿ ಸಂಹಿತಶರ್ಮ ವಿದ್ಯಾರ್ಥಿನಿ. ವಿವೇಕಾನಂದ ಕನ್ನಡ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಕನಕಜಯಂತಿ ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಟ್ಟಿತು. ಇನ್ನೋರ್ವ ವಿದ್ಯಾರ್ಥಿನಿ ಮಾತನಾಡುತ್ತಾ “ಕನಕದಾಸರ ಬಾಲ್ಯ, ಆಧ್ಯಾತ್ಮಿಕ, ಸಾಮಾಜಿಕ ಕಳಕಳಿ ಅನುಕರಣೀಯವಾದುದು. ‘ನಾನು’ ಎಂಬ ಅಹಂಕಾರ ಭಾವ ಹೋದಾಗ ಒಬ್ಬ ವ್ಯಕ್ತಿ ನೈಜ ವ್ಯಕ್ತಿಯಾಗುತ್ತಾನೆ. ಕನಕದಾಸರ ಸರಳ ಭಾಷಾಶೈಲಿ ಪ್ರಸ್ತುತ […]

ಸಾಂಸ್ಕೃತಿಕ ಸಮನ್ವಯ ಪ್ರತಿಭಾ ದಿನಾಚರಣೆ

ಸಾಂಸ್ಕೃತಿಕ ಸಮನ್ವಯ ಪ್ರತಿಭಾ ದಿನಾಚರಣೆ

Sunday, November 14th, 2021

ವಿದ್ಯಾರ್ಥಿ ಬದುಕಿನಲ್ಲಿ ಶೈಕ್ಷಣಿಕ ಚಟುವಟಿಗಳಷ್ಟೇ ಪ್ರಾಮುಖ್ಯತೆ ಹೊಂದಿರುವ ವ್ಯಕ್ತಿತ್ವ ವಿಕಸನ ಭಾಗವೇ ಸಾಂಸ್ಕೃತಿಕ ಚಟುವಟಿಕೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ವೈವಿಧ್ಯತೆಯ ಪರಿಚಯ ಮಾಡಿಸುವ ಶಾಲಾ ಪ್ರಯತ್ನ ಶ್ಲಾಘನೀಯ ಎಂದು ಶ್ರೀಮತಿ ಕೃಷ್ಣವೇಣಿ ಮುಳಿಯ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಸಮನ್ಯಯ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದರು. ಇವರ ಜೊತೆ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ನಿರ್ದೇಶಕಿ ವಿದುಷಿ ಪ್ರೀತಿಕಲಾ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಚಿತ್ರಕಲಾ ಶಿಕ್ಷಕರಾದ ಜನಾರ್ಧನ ಅರಿಯಡ್ಕ […]

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

Tuesday, November 2nd, 2021

ಕನ್ನಡ ರಾಜ್ಯೋತ್ಸವದಂದು ಶಾಲಾ ಕನ್ನಡ ಸಂಘ ವಿದ್ಯಾಧ್ವನಿಯ ಆಯೋಜನೆಯಲ್ಲಿ ಪಠ್ಯ-ಪದ್ಯಗಳ ಸಾಹಿತ್ಯಿಕ ಹಿನ್ನಲೆ ಹಾಗೂ ರಾಗ ಸಂಯೋಜಿತ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಮುಖ್ಯಗುರುಗಳಾದ ಶ್ರೀಮತಿ ರೂಪಕಲಾ ಇವರು ಪ್ರೌಢಶಾಲಾ ಮಕ್ಕಳಿಗೆ ಮಾತನಾಡಿ ಕನ್ನಡ ಪಠ್ಯದ ಪದ್ಯ ಭಾಗವು ಭಾಷಾ ಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಬೇಕು. ಸಾಹಿತ್ಯಾಸಕ್ತಿ ಬೆಳೆದಾಗ ಕನ್ನಡ ಭಾಷಾ ಸಂಪತ್ತಿನ ಬಗ್ಗೆ ನಮ್ಮಲ್ಲಿ ಅರಿವು ಮೂಡಲು ಸಾಧ್ಯ ಎಂದರು. ಅನಂತರ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳು ಹಾಗೂ ಶಿಕ್ಷಕರಿಂದ ಕನ್ನಡ ಹಾಡುಗಳ ಗಾಯನದೊಂದಿಗೆ […]

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

Tuesday, October 12th, 2021

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 12-10-2021 ರಂದು ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ಪೂಜಾ ವಿಧಿ – ವಿಧಾನಗಳನ್ನು ನೆರವೇರಿದವು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಸುಮಾರು ಪುಟಾಣಿಗಳು ಶುಭ ಮೂಹೂರ್ತವಿರಿಸಿದರು. ಮಕ್ಕಳಿಗೆ ಆರತಿ ಎತ್ತಿ ಶಾರದ ಮಾತೆಗೆ ಪುಷ್ಫ ನಮನವನ್ನು ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಮುಖ್ಯ ಗುರುಗಳೂ, ಶಿಕ್ಷಕ- ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

'ಉಚಿತ ಕಾನೂನು ಅರಿವು' ಕಾರ್ಯಕ್ರಮ

‘ಉಚಿತ ಕಾನೂನು ಅರಿವು’ ಕಾರ್ಯಕ್ರಮ

Tuesday, October 5th, 2021

ವಿವೇಕಾನಂದಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಗಾಗಿ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸ್ಥಳೀಯ ವಕೀಲರುಗಳಾದ ಶ್ರೀಮತಿ ಹರಿಣಾಕ್ಷಿಜೆ ಶೆಟ್ಟಿ ಹಾಗೂ ರಾಜೇಶ್ವರಿಇವರು ಆಗಮಿಸಿ ಮಕ್ಕಳ ಹಕ್ಕುಗಳು ಹಾಗೂ ಉಚಿತ ಕಾನೂನಿನ ನೆರವಿನ ಬಗ್ಗೆ ಮಾಹಿತಿ ನೀಡುವುದರಜೊತೆಗೆ ಯಾರೆಲ್ಲಾ ಈ ಉಚಿತ ಕಾನೂನಿನ ನೆರವು ಪಡೆಯಬಹುದು ಎಂಬ ವಿಚಾರವನ್ನು ಸವಿವರವಾಗಿ ತಿಳಿಸಿದರು. ವಿದ್ಯಾರ್ಥಿಗಳಲ್ಲಿ ಸಂವಾದ ನಡೆಸುತ್ತಾಅವರ ಸಂದೇಹಗಳನ್ನು ಬಗೆಹರಿಸಿ ಮಧ್ಯಸ್ಥಿಕೆ ಹಾಗೂ ಲೋಕ ಅದಾಲತ್ ಬಗ್ಗೆ ವಿಚಾರ ತಿಳಿಸಿದರು. ಇಲ್ಲಿ ವಿದ್ಯಾರ್ಥಿಗಳು ಕಾನೂನಿನ ಬಗೆಗಿನ ಹೆಚ್ಚಿನ ವಿಚಾರವನ್ನು ತಿಳಿದುಕೊಂಡರು. ಹತ್ತನೇ ತರಗತಿಯ […]

ಗಾಂಧಿ ಜಯಂತಿ -ಲಾಲ್ ಬಹದ್ದೂರ್ ಶಾಸ್ತ್ರೀ ನುಡಿ ನಮನ

ಗಾಂಧಿ ಜಯಂತಿ -ಲಾಲ್ ಬಹದ್ದೂರ್ ಶಾಸ್ತ್ರೀ ನುಡಿ ನಮನ

Saturday, October 2nd, 2021

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆಯೋಜಿಸಿದ ವಿದ್ಯಾಧ್ವನಿ ಶೈಕ್ಷಣಿಕ ಅರಿವು ಎಂಬ ಪರಿಕಲ್ಪನೆಯ ಅಡಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಆಚರಿಸಲಾಯಿತು. ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಉತ್ತಮ ಮೌಲ್ಯಗಳು, ನೈತಿಕ ಪ್ರಜ್ಞೆ ಇತ್ಯಾದಿಗಳ ಬಗ್ಗೆ ಪ್ರಸ್ತುತ ಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯತೆ ಅತ್ಯವಶ್ಯಕವಾಗಿದೆ. ರಾಷ್ಟ್ರಪಿತ ಗಾಂಧೀಜಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆಸಿದ ಆದರ್ಶ ಜೀವನವು ಎಲ್ಲರಿಗೂ ಮಾರ್ಗದರ್ಶನ ನೀಡಬಲ್ಲದು. ’ಮಾಡಿ ಇಲ್ಲವೇ ಮಡಿ’ ಎಂಬಂತಹ ದಿಟ್ಟ ನಿರ್ಧಾರಗಳು ’ಜೈ ಜವಾನ್ […]

ವಿದ್ಯಾಧ್ವನಿ - ಶೈಕ್ಷಣಿಕ ಅರಿವು

ವಿದ್ಯಾಧ್ವನಿ – ಶೈಕ್ಷಣಿಕ ಅರಿವು

Tuesday, September 14th, 2021

ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿ ಕಾರ್ಯಾಗಾರ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 14-09-2021 ರಂದು ’ವಿದ್ಯಾಧ್ವನಿ – ಶೈಕ್ಷಣಿಕ ಅರಿವು’ ಎಂಬ ಯೋಜನೆಯಡಿಯಲ್ಲಿ ಎನ್.ಟಿ.ಎಸ್.ಇ ಪರೀಕ್ಷೆಯ ಮಾಹಿತಿ ನೀಡುವ ಕಾರ್ಯಾಗಾರವು ನಡೆಯಿತು. ಎನ್.ಟಿ.ಎಸ್.ಇ ಪರೀಕ್ಷೆಯ ರೂಪುರೇಷೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಚಿನ್ಮಯಿ ಮಯ್ಯರವರು ನೀಡಿದರು. ಪರೀಕ್ಷೆ ತಯಾರಿ ಹಾಗೂ ಸಮಯದ ಹೊಂದಾಣಿಕೆಯ ಬಗ್ಗೆ ಎನ್.ಟಿ.ಎಸ್.ಇ ಪರೀಕ್ಷೆಯ ಮೊದಲ ಹಂತದಲ್ಲಿ ರಾಜ್ಯಕ್ಕೆ 20ನೇ ಸ್ಥಾನ ಗಳಿಸಿದ ಆಶ್ರಯ.ಪಿ ಇವರು ವಿದ್ಯಾರ್ಥಿಗಳಿಗೆ ತಮ್ಮ ಅನುಭವದೊಂದಿಗೆ […]

ಆರೋಗ್ಯಮಿತ್ರ : ಕೋವಿಡ್ - 19 ರ ಮಾಹಿತಿ ಕಾರ್ಯಾಗಾರ

ಆರೋಗ್ಯಮಿತ್ರ : ಕೋವಿಡ್ – 19 ರ ಮಾಹಿತಿ ಕಾರ್ಯಾಗಾರ

Wednesday, September 8th, 2021

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಆಯುರ್ವೇದ ಆಸ್ಪತ್ರೆ ಪುತ್ತೂರು, ರೇಡಿಯೋ ಪಾಂಚಜನ್ಯ 90.8 ಎಫ್.ಎಮ್ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಯೋಜನೆಗಳಲ್ಲಿ ಒಂದಾದ ಆರೋಗ್ಯಮಿತ್ರ ಪರಿಕಲ್ಪನೆಯಲ್ಲಿ ಕೋವಿಡ್- 19 ರ ಜಾಗೃತಿ ಕಾರ್ಯಾಗಾರವು ದಿನಾಂಕ 6-9-2021 ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮೊದಲ ಅವಧಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ವಿಜಯ ಸರಸ್ವತಿ ಸಂಯೋಜಕರು, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ […]

’ವೃತಿಕಾ’ ಹಸಿರು ಯೋಜನೆ

’ವೃತಿಕಾ’ ಹಸಿರು ಯೋಜನೆ

Thursday, August 26th, 2021

2020-21 ನೇ ಸಾಲಿನಲ್ಲಿ ಶಾಲೆ ’ವೃತಿಕಾ’ ಹಸಿರು ಯೋಜನೆ ಹಮ್ಮಿಕೊಂಡಿದ್ದು ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಹಾಗೂ ವಿದ್ಯಾರ್ಥಿ- ಪೋಷಕರು ಈ ಯೋಜನೆಯಲ್ಲಿ ಕೈಜೋಡಿಸಿದ್ದಾರೆ. ಮಿತಿ ಮೀರುತ್ತಿರುವ ಭೂಮಿಯ ತಾಪಮಾನವನ್ನು ನಿಯಂತ್ರಣದಲ್ಲಿರುವ ಕ್ರಮಗಳಲ್ಲಿ ಪ್ರಮುಖವಾಗಿ ನೆಲ ಹಸಿರೀಕರಣಕ್ಕೆ ಆದ್ಯತೆ ನೀಡಬೇಕೆಂಬ ಆಡಳಿತ ಮಂಡಳಿ ಹಾಗೂ ಶಿಕ್ಷಕರ ಅಪೇಕ್ಷೆಯಂತೆ ಈ ಯೋಜನೆ ಹಮ್ಮಿಕೊಳ್ಳಲಾಗಿದೆ. ಎರಡು ವರ್ಷಗಳ ಹಿಂದಿನಿಂದ ಶಾಲಾ ಆವರಣದಲ್ಲಿ ಸುಮಾರು 15 ಬಗೆಯ ಬಾಳೆಗಿಡಗಳನ್ನು ನೆಟ್ಟು ಈ ಯೋಜನೆಗೆ ಚಾಲನೆ ನೀಡಲಾಗಿತ್ತು. ಪ್ರಸಕ್ತ ವರ್ಷ ಇದನ್ನು ಇನ್ನಷ್ಟು […]

ಭರತ ವರ್ಷಾಮೃತ ಸ್ವತಂತ್ರ ಭಾರತ 75 ರ ಸಂಭ್ರಮ 

ಭರತ ವರ್ಷಾಮೃತ ಸ್ವತಂತ್ರ ಭಾರತ 75 ರ ಸಂಭ್ರಮ 

Sunday, August 15th, 2021

ಭಾರತ – ಪ್ರಾಚೀನ ನಾಗರೀಕತೆ ಹೊಂದಿದದೇಶ. ವಿಶ್ವಕ್ಕೆ ಜ್ಞಾನದ ಬೆಳಕು ಪಸರಿಸಿದ ಕೀರ್ತಿ ನಮ್ಮೀ ದೇಶದ ಹೆಗ್ಗುರುತು. ಭೌಗೋಳಿಕ ಸಾಂಸ್ಕೃತಿಕ , ಸಾಮಾಜಿಕ, ಧಾರ್ಮಿಕತೆಯಿಂದ ಸಂಪನ್ನಗೊಂಡ ನಮ್ಮೀ ದೇಶದ ಹಿರಿಮೆ ಗರಿಮೆಯ ಪರಿಚಯ ಸರಣಿ ಕಾರ್ಯಕ್ರಮವೇ ಭರತ ವರ್ಷಾಮೃತ ಸ್ವಾತಂತ್ರ್ಯ ಸಂಭ್ರಮದ 75 ನೇ ವರ್ಷದ ಸಮಯದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಂದ ವಿವೇಕಾನಂದ ವಿದ್ಯಾವರ್ಧಕ ಸಂಘ ಪ್ರವರ್ತಿತ ರೇಡಿಯೋ ಪಾಂಚಜನ್ಯ ಬಾನುಲಿ ಕೇಂದ್ರದಿಂದ 15 ದಿನಗಳ ಸರಣಿ ಕಾರ್ಯಕ್ರಮ ಪ್ರಸಾರವಾಯಿತು. ಮಾತೃಸ್ವರೂಪಿ ಭಾರತ, ಸ್ವತಂತ್ರ ಪೂರ್ವ […]

ಎಸ್.ಎಸ್.ಎಲ್.ಸಿ ಫಲಿತಾಂಶ

ಎಸ್.ಎಸ್.ಎಲ್.ಸಿ ಫಲಿತಾಂಶ

Wednesday, August 11th, 2021

2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಜಾಹ್ನವಿ.ಸಿ.ಶೆಟ್ಟಿ 614 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಮಿತ್ತೂರು ಏಮಾಜೆ ನಿವಾಸಿ ಕೆ.ಚಿದಾನಂದ ಶೆಟ್ಟಿ ಮತ್ತು ರಾಜೀವಿ ದಂಪತಿಗಳ ಪುತ್ರಿ. ಪವಿತ್ರಾ ಭಟ್- 608 (ಸಂಪ್ಯ ನಿವಾಸಿ ಶಂಕರನಾರಾಯಣ ಭಟ್ ಮತ್ತು ಗೀತಾಲಕ್ಷ್ಮೀ ಕೆ ದಂಪತಿಗಳ ಪುತ್ರಿ), ಅನ್ವಿತಾ ವಿ- 603 (ಕೆದಿಲ ನಿವಾಸಿ ಧರ್ನಪ್ಪಗೌಡ ಮತ್ತು ಸರೋಜ ದಂಪತಿಗಳ ಪುತ್ರಿ) , ಅರ್ಚನಾ ಪಿ.ಕೆ- 603  (ನಗರ ನಿವಾಸಿ ಪ್ರಭಾಕರ […]

ಗೃಹ ಮಿಲನ ಕಾರ್ಯಕ್ರಮ

ಗೃಹ ಮಿಲನ ಕಾರ್ಯಕ್ರಮ

Tuesday, July 20th, 2021

ಪ್ರಸ್ತುತ ಸಮಯದದ ನಿರ್ವಹಣೆ ನಮಗೆಲ್ಲರಿಗೂ ಸವಾಲಾಗಿದೆ. ಮನೆಯೇ ಸಂಪೂರ್ಣ ಪಾಠಶಾಲೆಯಾಗಿದೆ. ಇಲ್ಲಿ ಸಮಯದ ಸದುಪಯೋಗ ಮಾಡಿಕೊಳ್ಳಲು ಹಲವಾರು ಸಾಧ್ಯತೆಗಳು ನಮ್ಮ ಮುಂದಿವೆ. ಈ ದಿಶೆಯಲ್ಲಿ ವಿವೇಕಾನಂದ ಕನ್ನಡ ಶಾಲೆಯ ಹೆತ್ತವರು ಶಿಕ್ಷಕರು ಮತ್ತು ಮಕ್ಕಳು ವಿಭಿನ್ನ (ಶೈಕ್ಷಣಿಕ) ಚಟುವಟಿಕೆಗಳಲ್ಲಿ ತೊಡಗಿಕೊಂಡಿರುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂರಾರು ಇತ್ಯಾತ್ಮಕ ಆಲೋಚನೆ ಮತ್ತು ಆಯೋಜನೆಗಳಲ್ಲಿ ಒಂದಾದ ಗೃಹ ಮಿಲನ- ಕೌಟುಂಬಿಕ ಸಹಮಿಲನ ಕಾರ್ಯಕ್ರಮವು ಯಶಸ್ವಿಯಾಗಿ ಮೂಡಿ ಬಂದಿದೆ ಅನ್ನುವುದು ಹೆತ್ತವರ ಅಭಿಮತ. ಭಾರತೀಯ ’ಐಕ್ಯತಾ ಮಂತ್ರ ವಸುದೈವ ಕುಟುಂಬಕಂ’ ಪರಿಕಲ್ಪನೆಯ […]

ವಿಶ್ವಯೋಗ ದಿನಾಚರಣೆ

ವಿಶ್ವಯೋಗ ದಿನಾಚರಣೆ

Monday, June 21st, 2021

’ಯೋಗ’ ಅಂದರೆ ಜೋಡಣೆ, ಸಮ್ಯೋಗ, ಸಹಬಂಧ ಎಂಬೆಲ್ಲಾ ಅರ್ಥ ನೀಡುವ ಶಬ್ಧ ಮಾತ್ರವಲ್ಲ. ಈ ಶಬ್ದಾರ್ಥದೊಂದಿಗೆ ಭಾರತೀಯರ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಭಾವನೆಗಳು ಬೆಸೆದುಕೊಂಡಿದೆ. ಯೋಗ- ಕೇವಲ ವ್ಯಾಯಾಮ, ಪ್ರಾಣಾಯಾಮ ಅನ್ನುವ ಪರಿಕಲ್ಪನೆಗೆ ಸೀಮಿತವಾಗಿಲ್ಲ. ಭಾರತೀಯರ ಭಾವನೆಗಳೊಂದಿಗೆ ಯೋಗ ಬೆರೆತು ಹೋಗಿದೆ. ಬೌದ್ಧಿಕ, ಮಾನಸಿಕ, ಶಾರೀರಕ, ತನ್ಮೂಲಕ ಸಾಮಾಜಿಕ ಅಧ್ಯಾತ್ಮಿಕ ಬೆಳವಣಿಗೆಗೆ ಯೋಗದ ಮಹತ್ತರ ಯೋಗದಾನವಿದೆ. ಯೋಗ – ಬದುಕುವ ವಿಧಾನವಾಗಿದೆ. ಭಾರತೀಯ ಬದುಕಿನ ಪರಿಚಯ ಪ್ರಾಚೀನ ಕಾಲದಿಂದಲೂ ವಿಶ್ವಕ್ಕೇ ಮಾದರಿಯಾಗಿತ್ತು. ಆದರೆ ಅನಂತರದ ದಿನಗಳಲ್ಲಿ ಭಾರತೀಯರ […]

’ಹೆಣ್ಣು ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ’ ಕುರಿತು ಕಾರ್ಯಾಗಾರ

’ಹೆಣ್ಣು ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ’ ಕುರಿತು ಕಾರ್ಯಾಗಾರ

Wednesday, March 10th, 2021

ಆರ್ಟ್ ಆಫ್ ಲಿವಿಂಗ್, ಪ್ರಗತಿ ಜನೌಷಧಿ ಕೇಂದ್ರ ಮತ್ತು ಬಿ.ಜೆ.ಪಿ ಮಹಿಳಾ ಮೋರ್ಛಾ ಪುತ್ತೂರು ಇದರ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯಿಂದ 9 ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ’ಹೆಣ್ಣು ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ’ಎಂಬ ವಿಷಯದ ಕುರಿತು ಆರ್ಟ್ ಆಫ್ ಲಿವಿಂಗ್‌ನ ಶಿಕ್ಷಕರಾದ ಶ್ರೀಮತಿ ಭಾರತಿ ಜಯರಾಮ್ ಅವರು ಮಾತನಾಡಿ ಜಗತ್ತಿನಲ್ಲಿ ಬದಲಾವಣೆ ಪ್ರಕೃತಿಯ ಸಹಜ ನಿಯಮ. ಅದರಲ್ಲಿ ಮಾನವ ದೇಹದ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಬದಲಾವಣೆ […]

10 ನೇ ತರಗತಿಯ ಪೋಷಕರ ಸಭೆ

10 ನೇ ತರಗತಿಯ ಪೋಷಕರ ಸಭೆ

Thursday, March 4th, 2021

2020-21 ರ ಶೈಕ್ಷಣಿಕ ವರ್ಷದ 10 ನೇ ತರಗತಿಯ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮಾತನಾಡಿ ಕೊರೋನಾ ರಜೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯ ಮೂಲಕ ವಿಶೇಷ ಕೌಶಲ್ಯವನ್ನು ಮಾಡುವಲ್ಲಿ ಸಮಯವನ್ನು ಸದುಪಯೋಗಪಡಿಸಿಕೊಂಡರು ಎಂದರು. ಸಂಚಾಲಕರಾದ ಶ್ರೀಯುತ ರವಿನಾರಾಯಣರವರು ವಿವೇಕಾನಂದ ವಿದ್ಯಾವರ್ಧಕ ಸಂಘ ಇವರು ಉಪಸ್ಥಿತರಿದ್ದರು.  

ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು

ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳು

Wednesday, February 24th, 2021

ಮಾದಕ ವ್ಯಸನವು ಚಕ್ರವ್ಯೂಹಕ್ಕೆ ಸಿಲುಕಿದಂತೆ – ಶ್ರೀ ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಶ್ರೀ ಒಡಿಯೂರು ವಜ್ರಮಾತಾ ಮಹಿಳಾ ಭಜನಾ ಮಂಡಳಿ ಮತ್ತು ಒಡಿಯೂರು ಷಷ್ಯಬ್ಧ ಸಂಭ್ರಮ ಸಮಿತಿ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇವರ ಜಂಟಿ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಫರಿಣಾಮಗಳು ಎಂಬ ವಿಷಯದಡಿಯಲ್ಲಿ ಕಾರ್ಯಕ್ರಮ ನಡೆಯಿತು. ಪುತ್ತೂರಿನ ವೈದ್ಯರಾದ ಶ್ರೀ ರಾಘವೇಂದ್ರ ಪ್ರಸಾದ್ ಬಂಗಾರಡ್ಕರವರು ಕಾರ್ಯಕ್ರಮದ ವಿಶೇಷ ಅತಿಥಿಯಾಗಿದ್ದು, […]

ಎಸ್. ಎಸ್. ಎಲ್. ಸಿ. ವಿಷಯವಾರು ಕಾರ್ಯಾಗಾರ

ಎಸ್. ಎಸ್. ಎಲ್. ಸಿ. ವಿಷಯವಾರು ಕಾರ್ಯಾಗಾರ

Tuesday, February 23rd, 2021

ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಪುತ್ತೂರು ತಾಲೂಕು ಸಂಯೋಜನೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಫಲಿತಾಂಶ ವೃದ್ಧಿಗಾಗಿ ಆಂಗ್ಲ ಭಾಷಾ ಶಿಕ್ಷಕರ ಕಾರ್ಯಾಗಾರ ನಡೆಯಿತು. ತಾಲೂಕಿನ ಸರಕಾರಿ/ಅನುದಾನಿತ/ಖಾಸಗಿ ಆಂಗ್ಲ ಭಾಷಾ ಬೋಧನಾ ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದರು. ತಾಲೂಕು ನೋಡಲ್ ಅಧಿಕಾರಿಯಾದ ಶ್ರೀಯುತ ಹರಿಪ್ರಸಾದ್ ದೀಪ ಬೆಳಗಿಸಿ ಕಾರ್ಯಾಗಾರ ಉದ್ಘಾಟಿಸಿದರು. ಶಾಲಾ ಸಂಚಾಲಕರಾದ ಶ್ರೀಯುತ ರವಿನಾರಾಯಣ ಸಭಾಧ್ಯಕ್ಷತೆ ವಹಿಸಿ ಜ್ಞಾನಾಭಿವೃದ್ಧಿಯ ದೃಷ್ಟಿಯಿಂದ ಇಂತಹ ಕಾರ್ಯಾಗಾರಗಳ ಪ್ರಸ್ತುತತೆಯನ್ನು ತಿಳಿಸಿದರು. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಸರಕಾರಿ ಪದವಿ […]

ರಥ ಸಪ್ತಮಿ- ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ

ರಥ ಸಪ್ತಮಿ- ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ

Tuesday, February 23rd, 2021

ಭಾರತೀಯ ಹಬ್ಬಗಳಲ್ಲಿ ಒಂದಾದ ರಥಸಪ್ತಮಿಯ ವೈಜ್ಞಾನಿಕ ಆಚರಣಾ ಮಹತ್ವ ಮತ್ತು ಸೂರ್ಯನಮಸ್ಕಾರದ ಪ್ರಾತ್ಯಕ್ಷಿಕೆ ನೀಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಮೊದಲಿಗೆ ಶಾಲಾ ಆವರಣದಲ್ಲಿ ವಿಭಾಗಶಃ 6 ರಿಂದ 10 ನೇ ತರಗತಿಯ ಮಕ್ಕಳಿಂದ ಸೂರ್ಯ ಸ್ತುತಿಯೊಂದಿಗೆ ಪ್ರಾತ್ಯಕ್ಷಿಕೆ ನಡೆಯಿತು. ವಿದ್ಯಾರ್ಥಿನಿಯರಾದ ಸಂಹಿತಾ ಶರ್ಮ ಹಾಗೂ ಧಾತ್ರಿ ರಥಸಪ್ತಮಿ ಸೂರ್ಯನಮಸ್ಕಾರದ ಆರೋಗ್ಯಕರ ಮಹತ್ವದ ಬಗ್ಗೆ ಮಾತನಾಡಿದರು. ಅನಂತರ ಮಕ್ಕಳ ತಂಡ ಪುತ್ತೂರು ತಾಲೂಕಿನ ಪತ್ರಿಕಾ ಭವನ, ನರೇಂದ್ರ ಪದವಿಪೂರ್ವ ಕಾಲೇಜಿಗೆ ತೆರಳಿ ಕಾರ್ಯಕ್ರಮ ನೀಡಿದರು. ಪುತ್ತೂರು […]

1 ರಿಂದ 4 ನೇ ತರಗತಿಯ ಮಕ್ಕಳ ಪೋಷಕರ ಸಭೆ

1 ರಿಂದ 4 ನೇ ತರಗತಿಯ ಮಕ್ಕಳ ಪೋಷಕರ ಸಭೆ

Monday, February 15th, 2021

ಪ್ರಸಕ್ತ ಶೈಕ್ಷಣಿಕ ವರ್ಷದ 1 ರಿಂದ 4 ನೇ ತರಗತಿಯ ಮಕ್ಕಳ ಪೋಷಕರ ಸಭೆಯು ನಡೆಯಿತು. ಸಭೆಯಲ್ಲಿ ಶಾಲಾ ಅಧ್ಯಕ್ಷರು, ಸಂಚಾಲಕರು, ಮುಖ್ಯಗುರುಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮಕ್ಕ್ಳ ಪೋಷಕರು ತಮ್ಮ ಮಕ್ಕಳ ಉತ್ತಮ ಕಲಿಕಾ ಚಟುವಟಿಕೆಗಳ ಬಗ್ಗೆ ಧನಾತ್ಮಕ ಅಂಶಗಳನ್ನು ವ್ಯಕ್ತಪಡಿಸಿದರು. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಶ್ರಮವನ್ನು ಪ್ರಶಂಸಿಸಿದರು. ಶಾಲಾ ಸಂಚಾಲಕರಾದ ಶ್ರೀಯುತ ರವಿನಾರಾಯಣ ಇವರು ಮಕ್ಕಳ ಉತ್ತಮ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ಧನಾತ್ಮಕ ವಿಚಾರಗಳು ಹೆಚ್ಚು ಪ್ರಭಾವ ಬೀರುತ್ತವೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು […]

8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ

8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ

Tuesday, February 9th, 2021

ಶೈಕ್ಷಣಿಕ ಹಂತದ 8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳ 2020-21 ನೇ ಸಾಲಿನ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಮಾತನಾಡಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ನಾವು ಹೇಗೆ ಪರಿಶ್ರಮ ಪಡುತ್ತೇವೆಯೋ ಹಾಗೆಯೇ ಶಾಲಾ ಆಗುಹೋಗುಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಪೋಷಕರು ಸಹಾಯ ಹಸ್ತ ಚಾಚುವುದರ ಬಗ್ಗೆ ಸೂಚಿಸಿದರು. ಮುಖ್ಯಗುರುಗಳಾದ ಶ್ರೀಮತಿ ಆಶಾಬೆಳ್ಳಾರೆ ಮಾತನಾಡಿ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ತಮ್ಮ ವಿಶೇಷ ಕೌಶಲ್ಯವನ್ನು ಸದುಪಯೋಗ ಪಡಿಸಿಕೊಂಡು […]

5, 6, 7 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

5, 6, 7 ನೇ ತರಗತಿ ವಿದ್ಯಾರ್ಥಿಗಳ ಪೋಷಕರ ಸಭೆ

Tuesday, February 9th, 2021

ಪ್ರಸಕ್ತ ಶೈಕ್ಷಣಿಕ ವರ್ಷದ 5, 6, 7 ನೇ ತರಗತಿ ವಿದ್ಯಾರ್ಥಿಗಳ ಪ್ರಥಮ ಪೋಷಕರ ಸಭೆ ನಡೆಯಿತು. ಶಾಲಾ ಸಂಚಾಲಕರಾದ ಶ್ರೀ ರವಿನಾರಾಯಣ ಮಾತನಾಡಿ ಪೋಷಕರು ಮಕ್ಕಳಲ್ಲಿ ಪ್ರಸ್ತುತ ಸಮಾಜದಲ್ಲಿ ನಡೆಯುವ ಧನಾತ್ಮಕ ವಿಚಾರಗಳನ್ನು ಹೆಚ್ಚಾಗಿ ತುಂಬಬೇಕೆಂಬ ಕಿವಿಮಾತನ್ನು ಹೇಳಿದರು. ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಮಾತನಾಡಿ ಮಕ್ಕಳ ಮನೋಸ್ಥೆರ್ಯ ಹೆಚ್ಚಾಗಬೇಕಾದರೆ ಪಾಲಕರು ಮತ್ತು ಮಕ್ಕಳ ಮಧ್ಯೆ ಮುಕ್ತ ಮಾತುಕತೆ ಇರಬೇಕೆಂದರು. ಪೋಷಕರಿಂದ ಆಫ್ ಲೈನ್ ತರಗತಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲಾಯಿತಾದರೂ ದೈನಂದಿನ ತರಗತಿ ಕೊಠಡಿಗಳಲ್ಲಿ ನಡೆಯುವ […]

72 ನೇ ಗಣರಾಜ್ಯೋತ್ಸವ

72 ನೇ ಗಣರಾಜ್ಯೋತ್ಸವ

Tuesday, January 26th, 2021

ಭಾರತದ ಪ್ರತಿಯೊಬ್ಬ ವ್ಯಕ್ತಿಯೂ ಒಂದಿಲ್ಲೊಂದು ರೀತಿಯಲ್ಲಿ ದೇಶಕ್ಕೆ ತನ್ನದೇ ಶೈಲಿಯಲ್ಲಿ ಸೇವೆ ಸಲ್ಲಿಸಿದಾಗ ಅವರ ಜನ್ಮ ಸಾರ್ಥಕವೆನಿಸುತ್ತದೆ ಎಂದು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸುಬೇದಾರ್ ವಸಂತ ಕುಂಟ್ಯಾನ ಹೇಳಿದರು. ಅವರು ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ನರೇಂದ್ರ ಪದವಿಪೂರ್ವ ಕಾಲೇಜು ಮತ್ತು ವಿವೇಕಾನಂದ ಬಿ.ಎಡ್ ಕಾಲೇಜುಗಳ ಸಂಯುಕ್ತ ಆಶ್ರಯದಲ್ಲಿ ವಿವೇಕಾನಂದ ಕ್ರೀಡಾಂಗಣದಲ್ಲಿ ನಡೆದ 72ನೇ ಗಣರಾಜ್ಯೋತ್ಸವ ಆಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡುತ್ತಿದ್ದರು. ನಾಲ್ಕೂ ವಿದ್ಯಾಸಂಸ್ಥೆಗಳ ಆಡಳಿತ ಮಂಡಳಿಯ […]

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ - ರಾಜ್ಯಮಟ್ಟದಲ್ಲಿ ನೂತನ ದಾಖಲೆ

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿ – ರಾಜ್ಯಮಟ್ಟದಲ್ಲಿ ನೂತನ ದಾಖಲೆ

Thursday, January 21st, 2021

ಆಳ್ವಾಸ್ ವಿದ್ಯಾಸಂಸ್ಥೆಯವರು ನಡೆಸಿದ 36 ನೇ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ – 2020-21 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಆದಿಲ್ 16 ನೇ ವಯೋಮಾನದ ಬಾಲಕರ ವಿಭಾಗದ ಉದ್ದ ಜಿಗಿತದಲ್ಲಿ 6.73 ಮೀ ಜಿಗಿದು ಪ್ರಥಮ ಸ್ಥಾನದೊಂದಿಗೆ ನೂತನ ದಾಖಲೆ ಮಾಡಿದ್ದಾನೆ ಹಾಗೂ ೮೦ಮೀ ಹರ್ಡಲ್ಸ್‌ನಲ್ಲಿ ಕೂಡ ಪ್ರಥಮ ಸ್ಥಾನದೊಂದಿಗೆ ದಾಖಲೆ ಮಾಡಿರುತ್ತಾನೆ. ಇವನಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ ಹಾಗೂ ಹರಿಣಾಕ್ಷಿ […]

ಶಾಲಾ ಪ್ರಾರಂಭೋತ್ಸವ

ಶಾಲಾ ಪ್ರಾರಂಭೋತ್ಸವ

Monday, January 4th, 2021

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲದಲ್ಲಿ 1-1-2021 ರಂದು ಸಾಲಿನ ಶೈಕ್ಷಣಿಕ ವರ್ಷದ ಪ್ರಾರಂಭೋತ್ಸವವನ್ನು ಆಚರಿಸಲಾಯಿತು. ಗಣಹೋಮದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಲೆಯ ಮಕ್ಕಳನ್ನು ಮಾತಾಜಿಯವರು ತಿಲಕವಿಟ್ಟು ಸಿಹಿ ನೀಡಿ ಸ್ವಾಗತಿಸಿದರು. ಎಲ್ಲಾ ಹೊಸ ಮಕ್ಕಳೂ ಭಾರತಾಂಬೆಯ ಚರಣಗಳಿಗೆ ನಮಸ್ಕರಿಸಿ ಪುಷ್ಪಾರ್ಚನೆಗೈದು ತಮ್ಮ ಮುಂದಿನ ವಿದ್ಯಾರ್ಜನೆಗೆ ಶುಭಾರಂಭಗೈದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಶಿಕ್ಷಕ -ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕರು – ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.

74 ನೇ ಸ್ವಾತಂತ್ರ್ಯ ದಿನಾಚರಣೆ

74 ನೇ ಸ್ವಾತಂತ್ರ್ಯ ದಿನಾಚರಣೆ

Saturday, August 15th, 2020

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 74ನೇ ಸ್ವಾತಂತ್ರ್ಯೋತ್ಸವದ ಕಾರ್ಯಕ್ರಮದಲ್ಲಿ ಧ್ವಜಾರೋಹಣವನ್ನು ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಇವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ನರೇಂದ್ರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ರೂಪಲೇಖಾ ಪಾಣಾಜೆದೇಶದಲ್ಲಿ ಪ್ರಸ್ತುತತೆಯ ಸಂದರ್ಭದಲ್ಲಿ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅದರ ವಿರುದ್ಧ ನಾವು ಹೋರಾಡಬೇಕಾದ ಅನಿವಾರ್ಯತೆಯ ಅರಿವನ್ನು ಮೂಡಿಸಿದರು. ಕಾರ್ಯಕ್ರಮದಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಪದಾಧಿಕಾರಿಗಳು, ಸಿಬ್ಬಂದಿ ವರ್ಗ, ವಿದ್ಯಾರ್ಥಿ ವೃಂದ, ಹಾಗೂ ಶಾಲಾ ಆಡಳಿತ ಮಂಡಳಿಯ […]

ಎಸ್.ಎಸ್.ಎಲ್.ಸಿ. ಫಲಿತಾಂಶ 2019-20

ಎಸ್.ಎಸ್.ಎಲ್.ಸಿ. ಫಲಿತಾಂಶ 2019-20

Wednesday, August 12th, 2020

2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಪ್ರಣಮ್ಯ 609 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ದೊಡ್ಡಡ್ಕ ನಿವಾಸಿ ಗಣಪತಿ ನಾಯಕ್ ಮತ್ತು ಸುಲೋಚನ ದಂಪತಿಗಳ ಪುತ್ರಿ. ಧನ್ಯಶ್ರೀ- 608 (ಅಲಂಕಾರು ನಿವಾಸಿ ದಾಮೋದರಗೌಡ ಮತ್ತು ಮತ್ತು ಕಮಲ ದಂಪತಿಗಳ ಪುತ್ರಿ), ಆದರ್ಶ್ ಹೆಗ್ಡೆ-605 (ಉರ್ಲಾಂಡಿ ನಿವಾಸಿ ದಿ. ಅನಿಲ್ ಕುಮಾರ್ ಹೆಗ್ಡೆ ಮತ್ತು ಧನಲಕ್ಷ್ಮೀ ಹೆಗ್ಡೆ ದಂಪತಿಗಳ ಪುತ್ರ), ಅನಘಾ ಭಟ್-603 (ಕೆದಿಲ ನಿವಾಸಿ ಸುಬ್ಬಣ್ಣ ಭಟ್‌ ಮತ್ತು […]

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ - ದ್ವಿತೀಯ

ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ – ದ್ವಿತೀಯ

Tuesday, March 10th, 2020

ಇಸ್ಕಾನ್ ಮಂಗಳೂರು ವತಿಯಿಂದ ನಡೆಸಲ್ಪಟ್ಟ ಶ್ರೀಕೃಷ್ಣ ಗೋಲೋಕ ಶೇಡ್ಸ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 2ನೇ ತರಗತಿಯ ವಿದ್ಯಾರ್ಥಿನಿ ಕು. ವಂಶಿಕಾ ಜಿ. ವಿ ಜಿಲ್ಲಾ ಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ. ಶಾಲಾ ಮಟ್ಟದಲ್ಲಿ ಹಲವು ಮಕ್ಕಳು ಬಹುಮಾನ ಪಡೆದಿರುತ್ತಾರೆ.

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಡಾ|ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಶ್ರೇಷ್ಠ ಶಾಲೆ ಪ್ರಶಸ್ತಿ

ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ ಡಾ|ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಶ್ರೇಷ್ಠ ಶಾಲೆ ಪ್ರಶಸ್ತಿ

Sunday, March 8th, 2020

ಶಿಕ್ಷಣದ ಗುಣಾತ್ಮಕತೆಯಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಲೆಯು ದಿ. ಡಾ| ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಶ್ರೇಷ್ಠ ಶಾಲೆ ಪ್ರಶಸ್ತಿಗೆ ಆಯ್ಕೆಯಾಗಿದೆ. ಮಾ. 3 ರಂದು ದೇರಳಕಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯ ಆವರಣದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಡೆದು ಪ್ರಶಸ್ತಿಯೊಂದಿಗೆ ರೂ 10 ಲಕ್ಷ ನಗದು ಪುರಸ್ಕಾರವೂ ದೊರೆತಿದೆ.ನಿಟ್ಟೆ ಮೌಲ್ಯಮಾಪಕರ ತಂಡವು ಶಾಲೆಗೆ ಆಗಮಿಸಿ ಗುಣಾತ್ಮಕತೆಯ ಪರಿಶೀಲನೆ ನಡೆಸಿದ್ದಾರೆ. ಶಾಲಾ ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ ಹಾಗೂ ಸಾಹಿತ್ಯ ಮೊದಲಾದವುಗಳನ್ನು ಪರಿಶೀಲನೆ ನಡೆಸಿದ್ದಾರೆ. ಮಕ್ಕಳನ್ನು ಪರೀಕ್ಷೆ ನಡೆಸಿ ಶಿಕ್ಷಣದ […]

ರಾಮಾಯಣ ಪರೀಕ್ಷೆ - ಆಕಾಂಕ್ಷ ಜಿಲ್ಲೆಯಲ್ಲಿ ದ್ವಿತೀಯ

ರಾಮಾಯಣ ಪರೀಕ್ಷೆ – ಆಕಾಂಕ್ಷ ಜಿಲ್ಲೆಯಲ್ಲಿ ದ್ವಿತೀಯ

Tuesday, February 11th, 2020

ಭಾರತ ಸಂಸ್ಕೃತಿ ಪ್ರತಿಷ್ಠಾನ ಬೆಂಗಳೂರು ಇವರು 2019 ನೇ ಸಾಲಿನಲ್ಲಿ ನಡೆಸಿದ ರಾಮಾಯಣ-ಮಹಾಭಾರತ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕು. ಆಕಾಂಕ್ಷ ಇವರು ರಾಮಾಯಣ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. (ಇವರು ಸುನಾದ ಸಂಗೀತಕ ಲಾಶಾಲೆಯ ಗುರುಗಳಾದ ಕಾಂಚನ ಈಶ್ವರ ಭಟ್ ಮತ್ತು ವಿಜಯಶ್ರೀ ದಂಪತಿಯ ಪುತ್ರಿ.) ಮತ್ತು ಕು. ಸುಮಾ ಭಟ್ ಸಿ. ಎಚ್. ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಹಾಗೂ ಮಹಾಭಾರತ ಪರೀಕ್ಷೆಯಲ್ಲಿ 10 ನೇ ತರಗತಿ ವಿದ್ಯಾರ್ಥಿಗಳಾದ […]

ರಾಜ್ಯಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ : ಶಾಲಾ ತಂಡಕ್ಕೆ ತೃತೀಯ ಸ್ಥಾನ

ರಾಜ್ಯಮಟ್ಟದ ಪ್ರತಿಭಾ ಕಾರಂಜಿ-ಕಲೋತ್ಸವ : ಶಾಲಾ ತಂಡಕ್ಕೆ ತೃತೀಯ ಸ್ಥಾನ

Monday, February 10th, 2020

ಕರ್ನಾಟಕ ಸರಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ ಕೋಲಾರ, ಇದರ ವತಿಯಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾಕಾರಂಜಿ-ಕಲೋತ್ಸವ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಶಿಶಿರ್ ಎಸ್, ಕೌಶಿಕ್ ಎ.ಜಿ, ಮುಖೇಶ್ ಕೃಷ್ಣ, ಸಮೀಕ್ಷಾ ಎಸ್‌. ಇವರ ತಂಡ ದೃಶ್ಯಕಲೆ (ಕಲೋತ್ಸವ) ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ಶ್ರೀ ರುಕ್ಮಯ್ಯ ಮತ್ತು ಶ್ರೀ ರಂಗಪ್ಪ ತರಬೇತಿ ನೀಡಿದ್ದರು.

ರಥಸಪ್ತಮಿ ಆಚರಣೆ

ರಥಸಪ್ತಮಿ ಆಚರಣೆ

Saturday, February 1st, 2020

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರಥ ಸಪ್ತಮಿಯಂದು ಸಾಮೂಹಿಕ ಸೂರ್ಯ ನಮಸ್ಕಾರ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹವನ್ನುದ್ದೇಶಿಸಿ ಶಾಲಾ ಪೋಷಕರೂ, ಯೋಗ ಶಿಕ್ಷಕಿಯು ಆದ ಶ್ರೀಮತಿ ಶರಾವತಿ ರವಿನಾರಾಯಣ ಮಾತನಾಡಿ ’ಜಗತ್ತಿನ ಎಲ್ಲಾ ಜೀವಿರಾಶಿಗೂ ಶಕ್ತಿಯ ಪ್ರಧಾನ ಮೂಲ ಸೂರ್ಯ. ಉತ್ತರಾಯಣದಲ್ಲಿ ಬರುವ ಮಾಘ ಶುದ್ಧ ಸಪ್ತಮಿಯಂದು ಆಚರಿಸುವ ರಥ ಸಪ್ತಮಿ ಹಬ್ಬವು ಅತ್ಯಂತ ಅರ್ಥಪೂರ್ಣವಾಗಿ ಸೂರ್ಯದೇವನಿಗೆ ಸಲ್ಲಿಸುವ ಕೃತಜ್ಞತೆಯಾಗಿದೆ ಎಂದು ತಿಳಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರರವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಡೆಸಲಾದ […]

Highslide for Wordpress Plugin