ಭರವಸೆಯ ಬೆಳಕು ಶ್ರೀರಾಮಚಂದ್ರ – ಅಯೋಧ್ಯಾವಿರಾಜಮಾನ ಶ್ರೀರಾಮ

ರಾಮೋತ್ಸವದ ಅಂಗವಾಗಿ  ಶಾಲೆಯಲ್ಲಿ ಅಯೋಧ್ಯಾ ಹೋರಾಟದ ಅನುಭವಗಳನ್ನು ಶಿಕ್ಷಕರು ಮತ್ತು ಮಕ್ಕಳೊಂದಿಗೆ ಹಂಚಿಕೊಂಡವರು ವಿವೇಕಾನಂದ ವಿದ್ಯಾವರ್ಧಕ ಸಂಘದ ನೈತಿಕ ಹಾಗೂ ಆಧ್ಯಾತ್ಮಿಕ ಶಿಕ್ಷಣ ಪರಿವೀಕ್ಷಕರಾದ ಮೀನಾಕ್ಷಿ ಮಾತಾಜಿ ಇವರು. ರಾಮಜನ್ಮಭೂಮಿ ಹೋರಾಟ ದೇಶದ ಜನತೆಯ ಐಕ್ಯತೆ, ಧಾರ್ಮಿಕ ಪ್ರಜ್ಞೆ ಹಾಗೂ ದೇಶದ ಸಾಂಸ್ಕೃತಿಕ ಉಳಿವಿಗೆ ಕೈಗನ್ನಡಿಯಾಗಿದೆ. ಈ ದಿಶೆಯಲ್ಲಿ ಹಿರಿಯರು ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ದೇಶದ ಭಕ್ತಿ, ಶ್ರದ್ಧಾ ಕೇಂದ್ರವಾದ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿದ್ದ ಕರಾಳ ದಿನಗಳು ಅವಿಸ್ಮರಣೀಯ ಎಂದ ಮೀನಾಕ್ಷಿ ಮಾತಾಜಿ ಇವರು ತಾವೂ ಕರಸೇವೆಯಲ್ಲಿ ಭಾಗವಹಿಸಿದ ನೆನಪುಗಳನ್ನು ಮಕ್ಕಳು ಹಾಗೂ ಶಿಕ್ಷಕರೊಂದಿಗೆ ಹಂಚಿಕೊಂಡರು.

 

ಶ್ರೀರಾಮ ಪ್ರಾಣ ಪ್ರತಿಷ್ಠೆ ಅಭಿಯಾನ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಪ್ರೌಢವಿಭಾಗದ ಹಾಗೂ ಪ್ರಾಥಮಿಕ ವಿಭಾಗದ ಮುಖ್ಯಶಿಕ್ಷಕರು ಹಾಗೂ ಶಿಕ್ಷಕ ವೃಂದ ಉಪಸ್ಥಿತರಿದ್ದರು.

Highslide for Wordpress Plugin