ರಾಜ್ಯಮಟ್ಟದ ಕ್ರೀಡಾಕೂಟ ಶಾಲೆಯ ರಿಲೇ ತಂಡ - ದ್ವಿತೀಯ

ರಾಜ್ಯಮಟ್ಟದ ಕ್ರೀಡಾಕೂಟ ಶಾಲೆಯ ರಿಲೇ ತಂಡ – ದ್ವಿತೀಯ

Monday, November 6th, 2023

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮೂಡಬಿದಿರೆಯ ಸ್ವರಾಜ್ ಮೈದಾನದಲ್ಲಿ ನಡೆದ 14ರ ವಯೋಮಾನದ ಬಾಲಕ – ಬಾಲಕಿಯರ ಜಿಲ್ಲಾಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಪ್ರತೀಕ್ಷಾ(ಬಾಲಕೃಷ್ಣ ಮತ್ತು ಶಶಿಕಲಾ ದಂಪತಿಗಳ ಪುತ್ರಿ), ಕೀರ್ತಿ (ಮೋನಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿ), ತ್ರಿಶಾ (ಸತೀಶ್ ಮತ್ತು ಪುಷ್ಪಲತಾ ದಂಪತಿಗಳ ಪುತ್ರಿ), ಗುಣಶ್ರೀ (ಶ್ರೀನಿವಾಸ್ ಮತ್ತು ಹೇಮಾವತಿ ದಂಪತಿಗಳ ಪುತ್ರಿ), ಇವರ ರಿಲೇ ತಂಡ 55.7 ಸಮಯದಲ್ಲಿ ಗುರಿ ತಲುಪಿ ನೂತನ ದಾಖಲೆಯೊಂದಿಗೆ ಪ್ರಥಮ ಸ್ಥಾನ […]

ಎತ್ತರ ಜಿಗಿತ  -ಕೀರ್ತಿ – ರಾಷ್ಟ್ರಮಟ್ಟಕ್ಕೆ ಆಯ್ಕೆ

ಎತ್ತರ ಜಿಗಿತ -ಕೀರ್ತಿ – ರಾಷ್ಟ್ರಮಟ್ಟಕ್ಕೆ ಆಯ್ಕೆ

Monday, November 6th, 2023

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಉಡುಪಿಯಲ್ಲಿ ನಡೆದ 14ರ ವಯೋಮಾನದ ಬಾಲಕ-ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಕೀರ್ತಿ (ಮೋನಪ್ಪ ಮತ್ತು ಲಲಿತಾ ದಂಪತಿಗಳ ಪುತ್ರಿ) ಎತ್ತರ ಜಿಗಿತದಲ್ಲಿ 1.40ಮೀ ಎತ್ತರ ಹಾರಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಇವಳಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರುಗಳಾದ ದಾಮೋದರ್, ಹರಿಣಾಕ್ಷಿ ಮತ್ತು ಶ್ರದ್ಧಾ ಶೆಟ್ಟಿ ತರಬೇತಿ ನೀಡಿರುತ್ತಾರೆ.

ಚಿತ್ರಕಲಾ ಸ್ಪರ್ಧೆ  ಜಿಲ್ಲಾಮಟ್ಟಕ್ಕೆ ಆಯ್ಕೆ

ಚಿತ್ರಕಲಾ ಸ್ಪರ್ಧೆ ಜಿಲ್ಲಾಮಟ್ಟಕ್ಕೆ ಆಯ್ಕೆ

Monday, November 6th, 2023

ಉದಯವಾಣಿ ಮಕ್ಕಳ ಚಿತ್ರಕಲಾ ಸ್ಪರ್ಧೆ ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಅದ್ವಿತ್ ಜಿ (ಗಣೇಶ್ ಆಚಾರ್ಯ ಮತ್ತು ಮಂಜುಳಾ ದಂಪತಿ ಪುತ್ರ) ಪ್ರಾಥಮಿಕ ವಿಭಾಗದಲ್ಲಿ ಪ್ರಥಮ, ಪೂಜಾ (ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ) ಪ್ರೌಢಶಾಲಾ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಪೂಜಾರಿ ತರಬೇತಿ ನೀಡಿರುತ್ತಾರೆ.

ಕನ್ನಡ ರಾಜ್ಯೋತ್ಸವ ಆಚರಣೆ

ಕನ್ನಡ ರಾಜ್ಯೋತ್ಸವ ಆಚರಣೆ

Saturday, November 4th, 2023

“ಸರಳವಾದ ಹಾಗೂ ಸುಂದರವಾದ ಕನ್ನಡ ಭಾಷೆಯಲ್ಲಿ ಶಿಕ್ಷಣವನ್ನು ಪಡೆಯುವ ಮೂಲಕ ನಮ್ಮ ಭವಿಷ್ಯದ ಬೇರನ್ನು ಗಟ್ಟಿಗೊಳಿಸೋಣ. ಕನ್ನಡವು ನಮ್ಮ ಹೃದಯದ ಭಾಷೆ. ಇದರಲ್ಲಿ ನಾವು ಆಲೋಚನೆ ಮಾಡುತ್ತಾ ದೈನಂದಿನ ಜೀವನದಲ್ಲಿ ಕನ್ನಡದಲ್ಲಿಯೇ ವ್ಯವಹರಿಸೋಣ. ಕನ್ನಡವನ್ನು ಪ್ರೀತಿಸಿ, ಗೌರವಿಸಿ ಬೆಳೆಸುವ ಮೂಲಕ ನಮ್ಮ ಕನ್ನಡ ನಾಡಿನ ನೆಲ, ಜಲ ಸಂಸ್ಕೃತಿಯನ್ನು ರಕ್ಷಿಸೋಣ” ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 68ನೇ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಹಿರಿಯ ಶಿಕ್ಷಕಿ ಶ್ರೀಮತಿ ರೇವತಿ ಇವರು ನುಡಿದರು. ಶಿಕ್ಷಕಿ ಪೂರ್ಣಿಮಾರವರು […]

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ

Thursday, November 2nd, 2023

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 20.10.2023ರಂದು ಶಾರದಾ ಪೂಜೆ ಮತ್ತು ಅಕ್ಷರಾಭ್ಯಾಸ ಪೂಜಾ ವಿಧಿ – ವಿಧಾನಗಳನ್ನು ನೆರವೇರಿದವು. ಸರಸ್ವತಿ ಪೂಜೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಬಳಿಕ ಅಕ್ಷರಾಭ್ಯಾಸದ ಮೂಲಕ ತಮ್ಮ ಜ್ಞಾನಾರಂಭಕ್ಕೆ ಪುಟಾಣಿಗಳು ಶುಭ ಮೂಹೂರ್ತವಿರಿಸಿದರು. ಮಕ್ಕಳಿಗೆ ಆರತಿ ಎತ್ತಿ ಶಾರದ ಮಾತೆಗೆ ಪುಷ್ಫ ನಮನವನ್ನು ಸಲ್ಲಿಸಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು, ಸಂಚಾಲಕರು, ಸದಸ್ಯರು, ಮುಖ್ಯ ಗುರುಗಳೂ, ಶಿಕ್ಷಕ- ಶಿಕ್ಷಕೇತರ ವೃಂದ ಉಪಸ್ಥಿತರಿದ್ದರು.

ವಿದ್ಯಾಭಾರತಿ  ರಾಷ್ಟ್ರೀಯ ಮಟ್ಟದ ಕಬಡ್ಡಿ  ಪಂದ್ಯಾಟ  - ಎಸ್.ಜಿ.ಎಫ್.ಐ ಗೆ ಆಯ್ಕೆ

ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ – ಎಸ್.ಜಿ.ಎಫ್.ಐ ಗೆ ಆಯ್ಕೆ

Friday, October 13th, 2023

ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟ – ಎಸ್.ಜಿ.ಎಫ್.ಐ ಗೆ ಆಯ್ಕೆ ಉತ್ತರ ಪ್ರದೇಶದ ಫತೆಪೂರದಲ್ಲಿ ನಡೆದ ವಿದ್ಯಾಭಾರತಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರ ತಂಡ ಪ್ರಥಮ ಸ್ಥಾನ ಪಡೆದು ಸ್ಕೂಲ್ ಗೇಮ್ಸ್ ಫೆಡರೇಶನ್ ಆಫ್ ಇಂಡಿಯಾ ಕ್ರೀಡಾಕೂಟಕ್ಕೆ ಆಯ್ಕೆಯಾಗಿದೆ. ತಂಡದಲ್ಲಿ ಶಾಲಾ ವಿದ್ಯಾರ್ಥಿನಿಯರಾದ ಪಿ ಕವನಶ್ರೀ (ಶ್ರೀ ಗೋಪಾಲಕೃಷ್ಣ ಮತ್ತು ಶೈಲಜಾ ದಂಪತಿಗಳ ಪುತ್ರಿ), ಪೂಜಾ (ಶ್ರೀ ಸುರೇಶ್ ಮತ್ತು ವನಿತಾ ದಂಪತಿಗಳ ಪುತ್ರಿ), ಮಾನಸ ಎಂ(ಶ್ರೀ ಜಯೇಶ್ […]

ಮಹಿಳಾ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

ಮಹಿಳಾ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ

Friday, October 13th, 2023

ಮಹಿಳಾ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮ   – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗಿ ಜನರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆಗಳ ಎಲ್ಲಾ ಠಾಣೆಗಳಲ್ಲಿ ‘ತೆರೆದ ಮನೆ’ ಎಂಬ ಕಾರ್ಯಕ್ರಮ ಆರಂಭಗೊಂಡಿದ್ದು,  ಪೊಲೀಸರ ಕುರಿತು ಜನಸಾಮಾನ್ಯರಲ್ಲಿ ಅಡಗಿರುವ ಭಯವನ್ನು ಮುಕ್ತಗೊಳಿಸುವ ಕಾರ್ಯಕ್ರಮ ಇದಾಗಿದೆ. ಈ ನಿಟ್ಟಿನಲ್ಲಿ ಪುತ್ತೂರು ಮಹಿಳಾಪೊಲೀಸ್ ಠಾಣೆಯಲ್ಲಿ ಅ.12ರಂದು ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 75 ವಿದ್ಯಾರ್ಥಿಗಳಿಗೆ ಠಾಣೆ ಭೇಟಿ ಕಾರ್ಯಕ್ರಮ ನಡೆಯಿತು. ಮಹಿಳಾ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ […]

ನವದಂಪತಿ ಸಮಾವೇಶ

ನವದಂಪತಿ ಸಮಾವೇಶ

Thursday, October 12th, 2023

                                    ಜಗತ್ತಿಗೇ ಮಾರ್ಗದರ್ಶನ ತೋರುವ ಶಕ್ತಿ ಭಾರತಕ್ಕಿದೆ- ಸು.ರಾಮಣ್ಣ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಜ್ಯೇಷ್ಠ ಪ್ರಚಾರಕರು “ಗುರು ಹಿರಿಯರ ಆಶೀರ್ವಾದ ಪಡೆಯುವ ವಧೂವರರಿಗೆ ಸಂಸ್ಕಾರವನ್ನು ಕೊಡುವ ಒಂದು ವಿಧಿಯೇ ಮದುವೆ. ಪ್ರಕೃತಿಯ ಶಿಶುವಾದ ಮಾನವನು ಸಂಸ್ಕೃತಿಯಿಂದ ವಿಕಸಿತನಾಗಿ , ವಿಕೃತಿಯೆಡೆಗೆ ಜಾರದಂತೆ ಧರ್ಮಾಚರಣೆಯಲ್ಲಿ ತೊಡಗಿ ಸಮೃದ್ಧಿ, ಸಂಸ್ಕೃತಿ ಎರಡರಲ್ಲೂ ಸಮತೋಲನ ಕಾಪಾಡಿಕೊಳ್ಳಬೇಕು. […]

ಶಿಕ್ಷಣದಲ್ಲಿ ರಂಗಚಟುವಟಿಕೆ ಕಾರ್ಯಾಗಾರ

ಶಿಕ್ಷಣದಲ್ಲಿ ರಂಗಚಟುವಟಿಕೆ ಕಾರ್ಯಾಗಾರ

Thursday, October 12th, 2023

“ಕಲಾ ಮನೋಭಾವನೆಯನ್ನು ಹೊಂದಿರಬೇಕಾದರೆ ಮೊದಲು ನಾವು ಪ್ರೇಕ್ಷಕರಾಗಿರಬೇಕು” – ಪುರುಷೋತ್ತಮ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ರಂಗ ಚಟುವಟಿಕೆ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ನೇಲ್ಯಡ್ಕ ಇಲ್ಲಿಯ ಪ್ರಭಾರ ಮುಖ್ಯೋಪಾಧ್ಯಾಯರಾದ ಪುರುಷೋತ್ತಮ ಇವರು ವಿದ್ಯಾರ್ಥಿಗಳಿಗೆ ವಿವಿಧರಂಗಗೀತಾ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.                                                                                          […]

ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ

ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ

Tuesday, October 10th, 2023

 ಜಲಸಿರಿ ಯೋಜನೆಯ ಮಹತ್ವದ ಅರಿವು ಕಾರ್ಯಕ್ರಮ “ನೀರಿನ ಮಿತ ಬಳಕೆಯ ಬಗ್ಗೆ ನಮ್ಮ ಈ ತಲೆಮಾರಿಗೆ ಅರಿವು ನೀಡಿದಾಗ ಭವಿಷ್ಯದಲ್ಲಿ ನೀರಿನ ಸುಸ್ಥಿತಿ ಸಾಧ್ಯ” ಎಂದು KUIDFCಯ ಜಲಸಿರಿ ಯೋಜನೆಯ ಗ್ರಾಮ ಸಂಸ್ಥೆಯ ಜಂಡರ್ ಸ್ಪೆಷಲಿಸ್ಟ್ ಆಗಿರುವ ಶ್ರೀಮತಿ ಅಮೀಶಾ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ ಇಲ್ಲಿ ನಡೆದ ಜಲಸಿರಿ ಯೋಜನೆಯ ಅರಿವು ಕಾರ್ಯಕ್ರಮದಲ್ಲಿ ನುಡಿದರು. ನೀರಿನ ಅಗತ್ಯತೆ ಹಾಗೂ ಸದ್ವಿನಿಯೋಗ ಆದಾಗ ಮಾತ್ರ ಜಲಸಂರಕ್ಷಣೆ ಸಾಧ್ಯ ಎನ್ನುತ್ತಾ ವಿದ್ಯಾರ್ಥಿಗಳಲ್ಲಿ ಜಾಗೃತಿ […]

Highslide for Wordpress Plugin