
ವಿವೇಕಾನಂದರ ಆದರ್ಶಗಳು ನಮ್ಮ ಜೀವನಕ್ಕೆ ದಾರಿದೀಪವಾಗಿದೆ – ಶ್ರೀ ಅಶೋಕ್ ಕುಂಬ್ಳೆ
Friday, January 17th, 2025ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳಿಗೆ ಪೂರಕವಾಗಿ ಜೀವನದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಂಡು ವಿವೇಕಾನಂದರ ಆದರ್ಶಗಳನ್ನು ಪಾಲಿಸುತ್ತಾ ಸಾಧನೆಗೈಯಬೇಕೆಂದು ಶಾಲಾ ಆಡಳಿತಮಂಡಳಿಯ ಕೋಶಾಧಿಕಾರಿಯಾದ ಶ್ರೀಯುತ ಅಶೋಕ್ ಕುಂಬ್ಳೆ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿವೇಕಾನಂದ ಜಯಂತಿ ಮತ್ತು ಮಕರ ಸಂಕ್ರಾ0ತಿ ಆಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು. ಅಭ್ಯಾಗತರಾಗಿ ಆಗಮಿಸಿದ ಶಾಲಾ ಪೋಷಕರಾದ ಶ್ರೀಮತಿ ಗೀತಾ ರೈ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿ ಧನುಷ್.ಡಿ.ಜಿ ವಿವೇಕಾನಂದರ ಚಿಕಾಗೋ ಭಾಷಣದ ಸಾರಾಂಶವನ್ನು ತಿಳಿಸಿದರು. ಕೌಶಿಕ್ ಮಕರ ಸಂಕ್ರಾ0ತಿಯ ವಿಶೇಷತೆಯನ್ನು […]