ಮಕರ ಸಂಕ್ರಾಂತಿ ಹಬ್ಬವು ಸಮೃದ್ಧಿಯ ಪ್ರತೀಕವಾಗಿದೆ – ವನಿತಾ ಸುರೇಶ್


ಸೂರ್ಯನ ಪಥವು ದಕ್ಷಿಣಾಯನದಿಂದ ಉತ್ತರಾಯಣದ ಕಡೆಗೆ ಚಲಿಸುತ್ತದೆ. ಅಂತೆಯೇ ನಮ್ಮಲ್ಲಿ ಉತ್ತಮ ಗುಣಗಳನ್ನು ಬೆಳೆಸಿಕೊಂಡು ನಮ್ಮ ಪಥವನ್ನು ಸಾಧನೆಯ ಕಡೆಗೆ ಚಲಿಸಬೇಕು ಎಂದು ಶಾಲಾ ಅನ್ನಪೂರ್ಣಾ ಕಾರ್ಯಕಾರಿಣಿ ಸಮಿತಿ ಉಪಾಧ್ಯಕ್ಷೆ ಶ್ರೀಮತಿ ವನಿತಾ ಸುರೇಶ್ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಮಕರ ಸಂಕ್ರಾಂತಿ ಮತ್ತು ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ಈ ಮೇಲಿನ ಮಾತುಗಳನ್ನಾಡಿದರು.

ಅಭ್ಯಾಗತರಾಗಿ ಆಗಮಿಸಿದ ಶಾಲಾ ಪೋಷಕರಾದ ಶ್ರೀಮತಿ ಸವಿತಾ ಬಹುಮಾನ ವಿತರಿಸಿದರು.
ಶಾಲಾ ವಿದ್ಯಾರ್ಥಿಯಾದ ಧನುಷ್ ಡಿ.ಜಿ ವಿವೇಕಾನಂದರ ಆದರ್ಶದ ಕುರಿತು ಮಾತನಾಡಿದರು. ಮುಕುಂದ ಮಕರ ಸಂಕ್ರಾಂತಿ ಮಹತ್ವದ ಕುರಿತು ಮಾತನಾಡಿದರು.

Highslide for Wordpress Plugin