ಪ್ರತಿಭಾ ಕಾರಂಜಿ –  ಜಿಲ್ಲಾಮಟ್ಟಕ್ಕೆ ಆಯ್ಕೆ

ಪ್ರತಿಭಾ ಕಾರಂಜಿ – ಜಿಲ್ಲಾಮಟ್ಟಕ್ಕೆ ಆಯ್ಕೆ

Wednesday, December 4th, 2024

                                                                                    ದಕ್ಷಿಣ ಕನ್ನಡ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕಛೇರಿ […]

ಸಾಂಸ್ಕೃತಿಕ ಸಮನ್ವಯ – ವರ್ಷದ ಹಬ್ಬ - 2024

ಸಾಂಸ್ಕೃತಿಕ ಸಮನ್ವಯ – ವರ್ಷದ ಹಬ್ಬ – 2024

Wednesday, December 4th, 2024
ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸದೃಶ ಸಂಭ್ರಮ - 2024

ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸದೃಶ ಸಂಭ್ರಮ – 2024

Wednesday, December 4th, 2024

‘ಅನುಭವ ಜನ್ಯ ಕಲಿಕೆಗೆ ಹೆಚ್ಚು ಮಹತ್ವ ಕೊಡಬೇಕು ‘     – ಸನ್ಮಾನ್ಯ ಶ್ರೀ ಅಶೋಕ್ ಕುಮಾರ್ ರೈ.ಮಾನ್ಯ ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ.                                                                                           […]

ಜ್ಞಾನ –ವಿಜ್ಞಾನ ಮೇಳ – ರಾಷ್ಟ್ರಮಟ್ಟದಲ್ಲಿ ದ್ವಿತೀಯ

ಜ್ಞಾನ –ವಿಜ್ಞಾನ ಮೇಳ – ರಾಷ್ಟ್ರಮಟ್ಟದಲ್ಲಿ ದ್ವಿತೀಯ

Tuesday, November 19th, 2024

ವಿದ್ಯಾಭಾರತಿ ಅಖಿಲ ಭಾರತೀಯ ಸಂಸ್ಕೃತಿ ಮಹೋತ್ಸವ ಇದರ ವತಿಯಿಂದ ಸರಸ್ವತಿ ವಿದ್ಯಾ ಮಂದಿರ, ಸಂಸ್ಕೃತಿ ಭವನ, ಋಷಿ ನಗರ, ಉಜ್ಜೈನಿ (ಮಧ್ಯಪ್ರದೇಶ) ಇಲ್ಲಿ ನಡೆದ ರಾಷ್ಟ್ರಮಟ್ಟದ ಗಣಿತ-ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವ ಸ್ಪರ್ಧೆಯ ಕ್ಲೇ ಮಾಡೆಲಿಂಗ್ ನಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ನಿಖಿಲ್ (ಕೋಡಿಂಬಾಡಿ ನಿವಾಸಿ ಕೃಷ್ಣಪ್ಪ ಮತ್ತು ಧನವತಿ ದಂಪತಿಗಳ ಪುತ್ರ) ದ್ವಿತೀಯ ಸ್ಥಾನ ಪಡೆದಿದ್ದಾನೆ. ಇವನಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಇವರು ತರಬೇತಿ ಮಾರ್ಗದರ್ಶನ ನೀಡಿದ್ದರು

ತಂಬಾಕು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಹಿತಿ ಕಾರ್ಯಾಗಾರ

ತಂಬಾಕು ವ್ಯಸನ ಮುಕ್ತ ಸಮಾಜ ನಿರ್ಮಾಣ ಮಾಹಿತಿ ಕಾರ್ಯಾಗಾರ

Wednesday, November 13th, 2024

                     ತಂಬಾಕಿನಿಂದ ತಯಾರಿಸುವ ವಿವಿಧ ವಸ್ತುಗಳ ಸೇವನೆಯಿಂದ ದೈಹಿಕ, ಮಾನಸಿಕ ಹಾಗೂ ಕೌಟುಂಬಿಕ ಜೀವನದ ಮೇಲೆ ಉಂಟಾಗುವ ದುಷ್ಫರಿಣಾಮಗಳ ಬಗ್ಗೆ ಜೊತೆಗೆ ಮನೆ ಹಾಗೂ ಸುತ್ತಲಿನ ಸಮಾಜದಲ್ಲಿ ಜಾಗೃತಿ ಮೂಡಿಸುವಂತೆ ಉದಾಹರಣೆಗಳ ಮೂಲಕ ವಿವರಿಸುತ್ತಾ ಶಾಲಾ ವಿದ್ಯಾರ್ಥಿಗಳಿಗೆ ‘ತಂಬಾಕು ವ್ಯಸನ ಮುಕ್ತ ಸಮಾಜ ನಿರ್ಮಾಣ” ಮಾಡುವ ಪ್ರಮಾಣ ವಚನವನ್ನು ಶಾಲಾ ಹಿರಿಯ ಶಿಕ್ಷಕಿ ಪೂರ್ಣಿಮಾ ಮಾತಾಜಿ ಬೋಧಿಸಿದರು.  

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ವತಿಯಿಂದ -ಶಾಲೆಗೆ ಸಮ್ಮಾನ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕರ್ನಾಟಕ ವತಿಯಿಂದ -ಶಾಲೆಗೆ ಸಮ್ಮಾನ

Monday, November 11th, 2024

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ (ನೋಂ) ಇವರು ನೀಡುವ ಉತ್ತಮ ಕನ್ನಡ ಶಾಲೆ– 2024ರ ಸನ್ಮಾನಕ್ಕೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಪಾತ್ರವಾಗಿದೆ. ಶ್ರೀರಾಮ ಶಾಲೆ ಕಲ್ಲಡ್ಕ ಇಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ ಸನ್ಮಾನಿಸಿದರು.

ವಲಯ ಮಟ್ಟದ ಪ್ರತಿಭಾಕಾರಂಜಿ - ದ್ವಿತೀಯ ಸಮಗ್ರ ಪ್ರಶಸ್ತಿ

ವಲಯ ಮಟ್ಟದ ಪ್ರತಿಭಾಕಾರಂಜಿ – ದ್ವಿತೀಯ ಸಮಗ್ರ ಪ್ರಶಸ್ತಿ

Saturday, November 9th, 2024

ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ, ಪುತ್ತೂರು, ಇದರ ವತಿಯಿಂದ ಸಂತ ಫಿಲೋಮಿನಾ ಪ್ರೌಢಶಾಲೆಯಲ್ಲಿ ನಡೆದ ವೃತ್ತ ಮಟ್ಟದ ಪ್ರತಿಭಾರಂಜಿಯಲ್ಲಿ  ಶಾಲೆಯ ಪೂಜಾ – ಚಿತ್ರಕಲೆ (ಪ್ರಥಮ), ಪ್ರಜ್ಞಾ ನಿಡ್ವಣ್ಣಾಯ – ಸಂಸ್ಕೃತ ಭಾಷಣ(ಪ್ರಥಮ), ಶ್ರೀರಕ್ಷಾ ಎ – ಕವನ ವಾಚನ (ಪ್ರಥಮ), ಕುಶಿತಾ ಬಿ -ಗಝಲ್(ದ್ವಿತೀಯ), ಧನುಷ್ ಡಿ.ಜಿ-ಚರ್ಚಾ ಸ್ಪರ್ಧೆ (ತೃತೀಯ), ಲಾಸ್ಯ ಎನ್.ವಿ-ಭರತನಾಟ್ಯ (ತೃತೀಯ), ಕವ್ವಾಲಿ – ಸಾಯೀಶ್ವರಿ, ಶಾರ್ವರಿ, ಶ್ರೇಯಸ್ ರಾವ್, ಕರಣ್ ಗೌಡ, ಶಿವಪ್ರಕಾಶ್, […]

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳು – ಶಾಲೆಗೆ ಪ್ರಶಸ್ತಿ

ಶಾಂತಿವನ ಟ್ರಸ್ಟ್ ಪುಸ್ತಕಾಧಾರಿತ ಸ್ಪರ್ಧೆಗಳು – ಶಾಲೆಗೆ ಪ್ರಶಸ್ತಿ

Saturday, November 9th, 2024

  ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್ (ರಿ)ಇದರ ವತಿಯಿಂದ ನಡೆದ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ  ಶಾಲೆಯ ಲಿಖಿತಾ ‘ಜ್ಞಾನ ದರ್ಶಿನಿ’ ಪುಸ್ತಕಾಧಾರಿತ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಮತ್ತು ಪ್ರಜ್ಞಾ ನಿಡ್ವಣ್ಣಾಯ ‘ಜ್ಞಾನ ವರ್ಷಿಣಿ’ ಪುಸ್ತಕಾಧಾರಿತ ಶ್ಲೋಕ ಕಂಠಪಾಠ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.

ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ – ಶಾಲಾ ಶಿಕ್ಷಕರಿಗೆ ಪ್ರಶಸ್ತಿ

ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆ – ಶಾಲಾ ಶಿಕ್ಷಕರಿಗೆ ಪ್ರಶಸ್ತಿ

Wednesday, November 6th, 2024

                                                ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಇದರ ವತಿಯಿಂದ ವಿಕ್ಟರ್ಸ್ ಪ್ರೌಢಶಾಲೆ ಪುತ್ತೂರು ಇಲ್ಲಿ ನಡೆದ ತಾಲೂಕು ಮಟ್ಟದ ಶಿಕ್ಷಕರ ಸಹಪಠ್ಯ ಚಟುವಟಿಕಾ ಸ್ಪರ್ಧೆಯಲ್ಲಿ  ಶಾಲೆಯ ಶಿಕ್ಷಕರಾದ ಸುಂದರ್ – ಪ್ರೌಢಶಾಲಾ ವಿಭಾಗದ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು […]

ಕು. ಕೀರ್ತಿ ಸತತ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆ

ಕು. ಕೀರ್ತಿ ಸತತ ಎರಡನೇ ಬಾರಿಗೆ ರಾಜ್ಯಮಟ್ಟಕ್ಕೆ ಆಯ್ಕೆ

Tuesday, November 5th, 2024

ಶಾಲಾ ಶಿಕ್ಷಣ ಇಲಾಖೆ ವತಿಯಿಂದ ನಡೆದ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ  ಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿ ಕು. ಜಿ.ಎಂ.ಕೀರ್ತಿ 17ರ ವಯೋಮಾನದ ಬಾಲಕಿಯರ ವಿಭಾಗದ ಎತ್ತರ ಜಿಗಿತದಲ್ಲಿ ಮತ್ತು ತ್ರಿವಿಧ ಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರುಗಳು ತರಬೇತಿ ನೀಡಿರುತ್ತಾರೆ.

Highslide for Wordpress Plugin