ವಿದ್ಯಾಭಾರತಿ ಯೋಗ –  ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಯೋಗ – ರಾಜ್ಯಮಟ್ಟಕ್ಕೆ ಆಯ್ಕೆ

Saturday, August 3rd, 2024

ವಿದ್ಯಾಭಾರತಿ ಕರ್ನಾಟಕ ವತಿಯಿಂದ ಸರಸ್ವತಿ ವಿದ್ಯಾಲಯ ಕಡಬ ಇಲ್ಲಿ ನಡೆದ ಜಿಲ್ಲಾಮಟ್ಟದ ಯೋಗ ಸ್ಪರ್ಧೆಯಲ್ಲಿ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಕಿಶೋರ ವಿಭಾಗ ಮತ್ತು ಬಾಲವರ್ಗ ಈ ಎರಡೂ ವಿಭಾಗದಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲವರ್ಗದ ಬಾಲಕರ ಗುಂಪು ಸ್ಪರ್ಧೆಯಲ್ಲಿ ಪ್ರಥಮ ಸಮಗ್ರ ಪ್ರಶಸ್ತಿಯೊಂದಿಗೆ ವೈಯಕ್ತಿಕ ವಿಭಾಗದಲ್ಲಿ ನಿಶಾಂತ್ –(ಚಂದ್ರಶೇಖರ ಮತ್ತು ಸವಿತಾ ದಂಪತಿಗಳ ಪುತ್ರ) ಪ್ರಥಮ, ಅಥ್ಲೆಟಿಕ್ಸ್ ವಿಭಾಗದಲ್ಲಿ ರಾಹುಲ್ (ಚಂದ್ರಕಾ0ತ್ ಮತ್ತು ಲಕ್ಷಿ ದಂಪತಿಗಳ ಪುತ್ರ) ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಕಿಶೋರ ವರ್ಗದ […]

ವಿವೇಕಾನಂದ ವಿದ್ಯಾಸಂಸ್ಥೆಗಳಿ0ದ ಕಾರ್ಗಿಲ್ ವಿಜಯೋತ್ಸವ – ಯೋಧ ನಮನ

ವಿವೇಕಾನಂದ ವಿದ್ಯಾಸಂಸ್ಥೆಗಳಿ0ದ ಕಾರ್ಗಿಲ್ ವಿಜಯೋತ್ಸವ – ಯೋಧ ನಮನ

Monday, July 29th, 2024

ಸುಖ ಜೀವನ, ಹಣಕ್ಕಿಂತ ದೇಶ ದೊಡ್ಡದು – ಲೆ. ಕ. ಅಶೋಕ್ ಕಿಣಿ ಜನ್ಮ ನೀಡಿದ ಭೂಮಿಯನ್ನು ಸ್ವರ್ಗಕ್ಕಿಂತ ಮೇಲು ಎಂದು ಭಾವಿಸುವ ನಾವು ಸುಖದ ಜೀವನ, ಸಂಪತ್ತುಗಳಿಸುವುದಕ್ಕಿAತ ದೇಶ ದೊಡ್ಡದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಅಂತಹ ದೇಶವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಕೇವಲ ಸೈನಿಕರಲ್ಲದೇ ನಮ್ಮೆಲ್ಲರಲಿದೆ ಎಂದು ಮಾಜಿ ರಾಷ್ಟçಪತಿ ಎಪಿಜೆ ಅಬ್ದುಲ್ ಕಲಾಂರವರ ರಕ್ಷಣಾಪಡೆಯಲ್ಲಿ ಅಧಿಕಾರಿಯಾಗಿದ್ದ ಕೇಂದ್ರದ ರಕ್ಷಣಾ ರಾಜ್ಯ ಸಚಿವರ ಮಾಜಿ ಭದ್ರತಾ ಸಲಹೆಗಾರ ಲೆ.ಕ ಅಶೋಕ್ ಕಿಣಿ ಎಚ್ ಹೇಳಿದರು.   ಕಾರ್ಗಿಲ್ […]

ಜಿಲ್ಲಾಮಟ್ಟದ ಸ್ಪರ್ಧೆ - ಶಾಲೆಗೆ ಪ್ರಶಸ್ತಿ

ಜಿಲ್ಲಾಮಟ್ಟದ ಸ್ಪರ್ಧೆ – ಶಾಲೆಗೆ ಪ್ರಶಸ್ತಿ

Monday, July 29th, 2024

  ಶಾರದಾ ವಿದ್ಯಾಲಯ ಮಂಗಳೂರು ಇದರ ವತಿಯಿಂದ ನಡೆದ ‘ಶಾರದಾ ಮಹೋತ್ಸವ’ ಜಿಲ್ಲಾಮಟ್ಟದ ಸಾಂಸ್ಕತಿಕ ಸ್ಪರ್ಧೆಯಲ್ಲಿ ಶಾಲೆಯ ಅದ್ವಿತ್.ಜಿ ಬಾಲವರ್ಗದ ಚಿತ್ರಕಲಾ ಸ್ಪರ್ಧೆಯಲ್ಲಿ – ದ್ವಿತೀಯ ಸ್ಥಾನ ಮತ್ತು ಶ್ರೀರಕ್ಷಾ ಕಿಶೋರವರ್ಗದ ಗೀತಕಂಠಪಾಠ ಸ್ಪರ್ಧೆಯಲ್ಲಿ – ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಕಾರ್ಗಿಲ್ ವಿಜಯೋತ್ಸವ - ಯೋಧ ನಮನ ಕಾರ್ಯಕ್ರಮ

ಕಾರ್ಗಿಲ್ ವಿಜಯೋತ್ಸವ – ಯೋಧ ನಮನ ಕಾರ್ಯಕ್ರಮ

Thursday, July 25th, 2024
ಶಿಶು ವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗ

ಶಿಶು ವಾಟಿಕಾ ಆಚಾರ್ಯ ಪ್ರಶಿಕ್ಷಣ ವರ್ಗ

Tuesday, July 23rd, 2024

ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ್ ಸಂಬAಧಿತ ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಶಿಶುವಾಟಿಕ ಆಚಾರ್ಯ ಪ್ರಶಿಕ್ಷಣ ವರ್ಗವನ್ನು ಸರಸ್ವತಿ ವಿದ್ಯಾಮಂದಿರ ನರಿಮೊಗರು ಇದರ ಅಧ್ಯಕ್ಷರಾದ ಅವಿನಾಶ್ ಕೊಡಂಕಿರಿಯವರು ದೀಪ ಪ್ರಜ್ವಲಿಸಿ ಉದ್ಘಾಟಿಸುತ್ತಾ ಶಿಶುಮಂದಿರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾತಾಜಿಯವರು ಅಧ್ಯಯನ ಶೀಲ, ವಿವೇಚನಾ ಸಹಿತ, ವಿಮರ್ಶಾ ಗುಣವನ್ನು ಹೊಂದಿರಬೇಕು. ಶಿಕ್ಷಕರ ಈ ಮನೋ ವೃತ್ತಿಯು ಮಕ್ಕಳ ಕ್ರಿಯಾಶೀಲತೆಯನ್ನು ಪೋಷಿಸಲು ಸಹಕಾರಿಯಾಗಿದೆ. ಮನೆ – ಶಾಲೆ ಹಾಗೂ ವಾತಾವರಣ ಅವರ ಮೇಲೆ ಧನಾತ್ಮಕ ಪರಿಣಾಮ ಬೀರುವಂತೆ ಶಿಕ್ಷಣ ನೀಡುವ ಜವಾಬ್ದಾರಿ […]

ಹದಿಹರೆಯ – ಮಾಹಿತಿ ಕಾರ್ಯಾಗಾರ

ಹದಿಹರೆಯ – ಮಾಹಿತಿ ಕಾರ್ಯಾಗಾರ

Tuesday, July 23rd, 2024

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು, ಸರಕಾರು ಸಾರ್ವಜನಿಕ ಆಸ್ಪತ್ರೆ ಪುತ್ತೂರು ದ.ಕ ಇವರ ಆಶ್ರಯದಲ್ಲಿ ನಮ್ಮ ಶಾಲೆಯಲ್ಲಿ ನಡೆದ ಹದಿಹರೆಯ ಮಾಹಿತಿ ಕಾರ್ಯಾಗಾರದಲ್ಲಿ ಸರಕಾರಿ ಆಸ್ಪತ್ರೆ ಪುತ್ತೂರು ಇಲ್ಲಿನ ಆಪ್ತಸಮಾಲೋಚಕರಾದ ಡಾ. ಸುಶ್ಮಿತಾ ಇವರು ಹದಿಹರೆಯಕ್ಕೆ ಕಾಲಿಡುತ್ತಿರುವ ಕಿಶೋರಿಯರು ತಮ್ಮಲ್ಲಾಗುತ್ತಿರುವ ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ತಿಳಿದುಕೊಂಡಿರಬೇಕು. ಜೊತೆಯಲ್ಲಿ ತಮ್ಮ ಮನೆ, ಸುತ್ತಲ ಪರಿಸರದಲ್ಲಿ ಕೆಲವೊಮ್ಮೆ ಎದುರಾಗಬಲ್ಲ ಸಮಸ್ಯೆಗಳ ಬಗ್ಗೆ ಅರಿವನ್ನು ಹೊಂದಿರಬೇಕು ಎಂದರು. ಸಾರ್ವಜನಿಕ ಆರೋಗ್ಯ ಇಲಾಖಾ ವತಿಯಿಂದ ಹೆಣ್ಣು ಮಕ್ಕಳಿಗೆ ದೊರೆಯುತ್ತಿರುವ ಸೌಲಭ್ಯಗಳು […]

ವಿವೇಕಾನಂದ ವಿದ್ಯಾಸಂಸ್ಥೆಗಳಿಂದ ಸಸ್ಯ- ಸಂಜೀವಿನಿ ಯೋಜನೆಯ ಆರಂಭ.

ವಿವೇಕಾನಂದ ವಿದ್ಯಾಸಂಸ್ಥೆಗಳಿಂದ ಸಸ್ಯ- ಸಂಜೀವಿನಿ ಯೋಜನೆಯ ಆರಂಭ.

Monday, July 22nd, 2024

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು ಪ್ರವರ್ತಿತ ತೆಂಕಿಲ ವಿವೇಕ ನಗರ ಆವರಣದ ವಿದ್ಯಾಸಂಸ್ಥೆಗಳಾದ ವಿವೇಕಾನಂದ ಪ್ರಶಿಕ್ಷಣ ಮಹಾವಿದ್ಯಾಲಯ ,ನರೇಂದ್ರ ಪದವಿ ಪೂರ್ವ ಕಾಲೇಜು, ವಿವೇಕಾನಂದ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಶಾಲಾ ಸಹಯೋಗದೊಂದಿಗೆ ತೆಂಕಿಲ ಆವರಣದಲ್ಲಿ ಹಸಿರು – ಪರಿಸರ ಕಲ್ಪನಾಧಾರಿತ ಸಸ್ಯ – ಸಂಜೀವಿನಿ ಯೋಜನೆಗೆ ಗಿಡ ನೆಡುವುದರ  ಮೂಲಕ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷರಾದ ಸತೀಶ್ ರಾವ್ ಇವರು ಚಾಲನೆ ನೀಡಿದರು. ಶ್ರೀಯುತರು ಮಾತನಾಡುತ್ತಾ ಪರಿಸರ ಉಳಿಸಿ, ಬೆಳೆಸಿ, ಕಾಪಾಡುವ ದೃಷ್ಟಿಯಿಂದ ವಿದ್ಯಾವರ್ಧಕ ಸಂಘದಿಂದ […]

2024-25ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ

2024-25ನೇ ಶೈಕ್ಷಣಿಕ ವರ್ಷದ ಶಾಲಾ ಸಂಸತ್ತು ಚುನಾವಣೆ

Friday, July 12th, 2024

ಶಾಲಾ ‘ಸಮನ್ವಯ’ ಸಮಾಜ ವಿಜ್ಞಾನ ಸಂಘದ ವತಿಯಿಂದ ಪ್ರಸಕ್ತ ಶೈಕ್ಷಣಿಕ ಸಾಲಿನ ಚುನಾವಣೆ ಹಾಗೂ ಮಂತ್ರಿಮಂಡಲ ರಚನಾ ಪ್ರಕ್ರಿಯೆ ನಡೆಯಿತು. ಸಾರ್ವತ್ರಿಕ ಚುನಾವಣಾ ಪ್ರಕ್ರಿಯೆಯ ಸಾಮಾನ್ಯ ಪ್ರಜ್ಞೆಯನ್ನು ಮೂಡಿಸುವ ನೆಲೆಯಲ್ಲಿ ಇ.ವಿ.ಎಂ ಮತಯಂತ್ರದ ಮೂಲಕ 2024-25ನೇ ಸಾಲಿನ ಚುನಾವಣೆಯನ್ನು ನಡೆಸಲಾಯಿತು. ಪ್ರೌಢಶಾಲಾ ವಿಭಾಗದ ನಾಯಕನಾಗಿ ಚಿರಂತನ್ ಕೆ.ವಿ ಮತ್ತು ಉಪನಾಯಕನಾಗಿ ಧನ್ವಿತ್ ಹಾಗೂ ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕನಾಗಿ ಅದ್ವಿತ್ ಜಿ ಮತ್ತು ಉಪನಾಯಕನಾಗಿ ಸುಭಾಷ್ ಹೆಚ್.ಎನ್ ಆಯ್ಕೆಯಾದರು

ಕೆಂಪೇಗೌಡ ಜಯಂತಿ ದಿನಾಚರಣೆಯ  ನಡೆದ ಸ್ಪರ್ಧೆ

ಕೆಂಪೇಗೌಡ ಜಯಂತಿ ದಿನಾಚರಣೆಯ ನಡೆದ ಸ್ಪರ್ಧೆ

Thursday, July 4th, 2024

ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಪುತ್ತೂರು ತಾಲೂಕು ಮತ್ತು ಒಕ್ಕಲಿಗ ಗೌಡ ಸೇವಾ ಸಂಘ (ರಿ) ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಡಪ್ರಭು ಶ್ರೀ ಕೆಂಪೇಗೌಡ ಜಯಂತಿ ದಿನಾಚರಣೆಯ ಅಂಗವಾಗಿ ನಡೆದ ಪುತ್ತೂರು ತಾಲೂಕು ಮಟ್ಟದ ಸ್ಪರ್ಧೆಗಳಲ್ಲಿ  ಶಾಲೆಯ ಅದ್ವಿತ್ ಜಿ -ಪ್ರಾಥಮಿಕ ವಿಭಾಗದ ಚಿತ್ರಕಲೆಯಲ್ಲಿ – ದ್ವಿತೀಯ, ಗಾನವಿ ಎನ್ – ಪ್ರಾಥಮಿಕ ಶಾಲಾ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ವಿಶ್ವ ಯೋಗ ದಿನಾಚರಣೆ

ವಿಶ್ವ ಯೋಗ ದಿನಾಚರಣೆ

Tuesday, June 25th, 2024

ವಿಶ್ವ ಯೋಗ ದಿನಾಚರಣೆಯ ಅಂಗವಾಗಿ  ಶಾಲೆಯಲ್ಲಿ ಯೋಗೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಸಂಪನ್ನಗೊoಡವು. ಅಂತರಾಷ್ಟಿಯ ಯೋಗ ದಿನೋತ್ಸವ ಸಮಿತಿ, ಆಯುಷ್ ಇಲಾಖೆ, ಪ್ರವಾಸೋದ್ಯಮ ಇಲಾಖೆ ಬಿಡುಗಡೆಗೊಳಿಸಿದ ೪೫ ನಿಮಿಷಗಳ ಯೋಗಾಭ್ಯಾಸ ಪಟ್ಟಿ ಒಳಗೊಂಡಿರುವ ಯೋಗ ಮಂತ್ರ, ಸೂಕ್ಷ ವ್ಯಾಯಾಮ, ಸರಳ ಆಸನಗಳು, ಪ್ರಾಣಾಯಮ, ಅಷ್ಟಾಂಗ ಯೋಗ ಪರಿಚಯ ಅಭ್ಯಾಸಗಳನ್ನು ೬ರಿಂದ ೧೦ನೇ ತರಗತಿಯ ಮಕ್ಕಳಿಗೆ ಜೂನ್ ೧೦ರಿಂದ ೨೧ರವರೆಗೆ ನಡೆಸಲಾಯಿತು. ಜೂನ್ ೨೧ರಂದು ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ಸಂಚಾಲಕರಾದ ವಸಂತ ಸುವರ್ಣ ಇವರ ಸಭಾಧ್ಯಕ್ಷತೆಯಲ್ಲಿ ವಿವೇಕಾನಂದ […]

Highslide for Wordpress Plugin