ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು (ರಿ). ಇದರ ವತಿಯಿಂದ ನಡೆಸಲ್ಪಡುವ ‘ಪ್ರೇರಣಾ’ – ಸಂಘ ಪರಿಚಯ ವರ್ಗ –ಎಂಬ ವಿಷಯದ ಶಿಕ್ಷಕರ ಕಾರ್ಯಾಗಾರವು ಶಾಲೆಯಲ್ಲಿ ನಡೆಯಿತು.
ಪ್ರಥಮ ಅವಧಿಯಲ್ಲಿ ಕಾರ್ಯಾಗಾರದ ಉದ್ಘಾಟನೆಯೊಂದಿಗೆ ಸಂಘದ ಪರಿಚಯವನ್ನು ಮಾಡಿದ ನೀಡಿದ ಶ್ರೀ ನಾರಾಯಣ ಶೆಣೈ ಇವರು ವ್ಯಕ್ತಿತ್ವ, ಕರ್ತತ್ವ, ನೇತೃತ್ವ, ವಿವೇಕ, ದೇಶ ಭಕ್ತಿ ನಿರ್ಮಾಣ ಮಾಡುವಲ್ಲಿ ಸಂಘ ಮತ್ತು ಶಾಖೆಗಳ ಪರಿಚಯವನ್ನು ತಿಳಿಸಿಕೊಟ್ಟರು.
ಎರಡನೇ ಅವಧಿಯಲ್ಲಿ ಶ್ರೀ ಹರಿಕೃಷ್ಣ ಇವರು ಗತಿವಿಧಿ ಪರಿಚಯ ಎಂಬ ವಿಷಯದಲ್ಲಿ ಕುಟುಂಬ ಪ್ರಭೋದನ, ಸಾಮಾಜಿಕ ಸಾಮರಸ್ಯ, ಪರ್ಯಾವರಣ ರಕ್ಷಣೆ, ಗೋ ಸಂರಕ್ಷಣೆ, ಧರ್ಮ ಜಾಗರಣಾ, ಗ್ರಾಮ ವಿಕಾಸದ ಕುರಿತು ಸಮಗ್ರ ಮಾಹಿತಿ ನೀಡಿದರು.
ನಮ್ಮ ಸಂಸ್ಥೆಯಲ್ಲಿ ಸಂಘದ ವಿಚಾರ ಅಳವಡಿಸುವ ಬಗ್ಗೆ ಮೂರನೇ ಅವದಿಯಲ್ಲಿ ಮಾತನಾಡಿದ ಶ್ರೀ ಸುರೇಶ್ ಇವರು ಭಾಷಾ ಜ್ಞಾನ, ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಅಳವಡಿಸಿಕೊಳ್ಳುವ ಮೂಲಕ ಮೊದಲು ನಾವು ಗಟ್ಟಿಯಾಗ ಬೇಕು ಎಂದರು.
ನಾಲ್ಕನೇ ಅವಧಿಯಲ್ಲಿ ಸಂಘದ ಶಾಖೆ, ಸಮಿತಿ ಶಾಖೆ ನಡೆಸುವ ಕುರಿತು ಪ್ರಾತ್ಯಕ್ಷಿಕೆಯನ್ನು ಗುಂಪುಶಃ ಪ್ರತ್ಯೇಕವಾಗಿ ನಡೆಸಲಾಯಿತು. ಶಾಖೆಗಳನ್ನು ನಡೆಸುವ ಬಗ್ಗೆ ಮತ್ತು ಸಮಿತಿಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳ ಬಗ್ಗೆ ಶ್ರೀ ಚೇತನ್ ಮತ್ತು ಶ್ರೀಮತಿ ಪ್ರತಿಭಾ ಪರಿಚಯಿಸಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಪ್ರಶ್ನೋತ್ತರ, ಅನಿಸಿಕೆಗಳ ಜೊತೆ ಸಮಾರೋಪ ಮಾತುಗಳನ್ನಾಡಿದ ಸಂಘದ ಹಿರಿಯರಾದ ನಾ ಸೀತಾರಾಮ ಇವರು ಸಂಘದ ಮುಂದಿನ ಗುರಿ, ಯೋಜನೆ, ಯೋಚನೆಗಳ ಬಗ್ಗೆ ಮತ್ತು 99 ವರ್ಷಗಳಲ್ಲಿ ಸಂಘದ ಮುಖಾಂತರ ನಡೆದ ಸಮಾಜಮುಖಿ ಕೆಲಸಗಳ ಬಗ್ಗೆ ತಿಳಿಸಿಕೊಟ್ಟರು. ಒಟ್ಟು 100 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಹಶಿಕ್ಷಕಿ ಶ್ರೀಮತಿ ಸ್ವಾತಿ ಕಾರ್ಯಕ್ರಮ ನಿರೂಪಿಸಿದರು.